ರಜತ್​ ಸವಾಲ್​ಗೆ ಗಿಲ್ಲಿ ಕೌಂಟರ್ ಚಾಲೆಂಜ್! ಖುಷಿಯಲ್ಲಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಅಶ್ವಿನಿ..! VIDEO

ಬಿಗ್​ಬಾಸ್​ ಮನೆಯಲ್ಲಿ ಗಿಲ್ಲಿ ಹಾಗೂ ರಜತ್ ನಡುವೆ ಫೈಟ್​ ಶುರುವಾಗಿದೆ. ರಜತ್ ಅವರು, ಗಿಲ್ಲಿಯನ್ನ ಮನೆಯಿಂದ ಆಚೆ ಕಳುಹಿಸುವ ಚಾಲೆಂಜ್ ಮಾಡಿದ್ದು, ಅದಕ್ಕೆ ಪ್ರತಿ ಕೌಂಟರ್ ಆಗಿ ಗಿಲ್ಲಿ ನಾನೇ ನಿನ್ನನ್ನ ಮನೆಯಿಂದ ಕಳುಹಿಸುತ್ತೇನೆ ಎಂದು ಕಿಚ್ಚನ ಎದುರಲ್ಲೇ ಸವಾಲ್ ಹಾಕಿದ್ದಾರೆ

author-image
Ganesh Kerekuli
Gilli and Rajat
Advertisment

ಬಿಗ್​ಬಾಸ್​ ಮನೆಯಲ್ಲಿ ಗಿಲ್ಲಿ ಹಾಗೂ ರಜತ್ ನಡುವೆ ಫೈಟ್​ ಶುರುವಾಗಿದೆ. ಇಂದು ರಾತ್ರಿ ‘ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ’ ಎಪಿಸೋಡ್ ಪ್ರಸಾರವಾಗಲಿದೆ. ಅದರ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿದೆ. 

ಪ್ರೊಮೋದಲ್ಲಿ ಕಿಚ್ಚ ಸುದೀಪ್.. ನಿಮ್ಮ ಪ್ರಕಾರ, ಈ ಮನೆಯಲ್ಲಿ ಇವರ ಪಾಪದ ಕೊಡ ತುಂಬಿದೆ ಅಂದ್ರೆ ಯಾರು ಎಂದು ತಿಳಿಸುವಂತೆ ಚಟುವಟಿಕೆ ನೀಡುತ್ತಾರೆ. ಅಂತೆಯೇ ಗಿಲ್ಲಿ ಅವರು ರಜತ್ ಹೆಸರು ಹೇಳುತ್ತಾರೆ. ಮಾತು, ಮಾತಿಗೂ ರಜತ್ ಮಧ್ಯೆ ಬಾಯಿ ಹಾಕಿ ಗೇಮ್ ಅರ್ಥಾನೇ ಆಗಿಲ್ಲ ಅಂತಾರೆ. ಆದರೆ ನಾನು 10 ಟಾಸ್ಕ್​​ನಲ್ಲಿ 8 ಟಾಸ್ಕ್​ ಗೆದ್ದಿದ್ದೇನೆ. ರಜತ್, ಮೊದಲ ಟಾಸ್ಕ್​​ನಲ್ಲೇ ಒಂದೇ ಒಂದು ಬಾಲ್ ಹಾಕದೇ ಸೈಡ್​ನಲ್ಲಿ ಬಂದು ಕೂತಿದ್ದಾನೆ ಎಂದಿದ್ದಾರೆ. 

ಅದಕ್ಕೆ ಕೋಪಿಸಿಕೊಳ್ಳುವ ರಜತ್, ನಾನು ಬಂದಿರೋದು ಸೋಲೋ ಆಗಿ. ಒಬ್ಬನೇ ಹೊಡೆದು ಹಾಕ್ತೀನಿ. ನನ್ನನ್ನ ಪಾಪದ ಕೊಡ ಅಂತಾ ಯಾರೆಲ್ಲ ಹೇಳಿದ್ದಾರೋ, ಅವರನ್ನೆಲ್ಲ ಮನೆಯಿಂದ ಆಚೆ ಹಾಕಿಯೇ ನಾನು ಹೋಗೋದು ಎಂದಿದ್ದಾರೆ. ಅದಕ್ಕೆ ಕೌಂಟರ್ ನೀಡಿದ ಗಿಲ್ಲಿ, ನಾನೂ ಹೇಳ್ತಾ ಇದ್ದೀನಿ. ಈ ಅಣ್ಣನ ಆಚೆ ಕಳುಹಿಸಿಬಿಟ್ಟೇ ನಾನೂ ಆಚೆ ಕಾಲಿಡೋದು ಎಂದಿದ್ದಾರೆ. ಅದಕ್ಕೆ ಅಶ್ವಿನಿ ಗೌಡ ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಹೇಗೆ ಗೌರವ ಕೊಡಬೇಕು ಅಂತ ಗೊತ್ತಿದೆ -ದರ್ಶನ್ ಫ್ಯಾನ್ಸ್ ಪರ ಬ್ಯಾಟ್ ಬೀಸಿದ ವಿಜಯಲಕ್ಷ್ಮೀ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg boss
Advertisment