/newsfirstlive-kannada/media/media_files/2025/10/09/dhruvanth-ashwini-2025-10-09-16-06-35.png)
Photograph: (colors kannada)
ಬಿಗ್‌ಬಾಸ್ ಮನೆಯ ಮೊದಲ ಗ್ರ್ಯಾಂಡ್ ಫಿನಾಲೆ ನಡೆಯೋಕೆ ಇನ್ನು ಐದು ದಿನಗಳಷ್ಟೆ ಬಾಕಿ ಉಳಿದಿದೆ. ಹೀಗಿರುವಾಗ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳೋಕೆ ಕೊನೆಯ ಅವಕಾಶವನ್ನು ನೀಡಲಾಗಿದ್ದು, ದ್ರುವಂತ್ ಇವೆಲ್ಲದರಿಂದ ಹೊರಕ್ಕೆ ಉಳಿದಿದ್ದಾರೆ.
ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಎಲ್ಲ ಸ್ಪರ್ಧಿಗಳು ತಮ್ಮನ್ನು ತಾವು ಅರ್ಹರು ಎಂದು ಸಾಬೀತುಪಡಿಸಿಕೊಳ್ಳೋಕೆ ಬಿಗ್‌ಬಾಸ್ ಕೊನೆಯ ಅವಕಾಶವನ್ನು ನೀಡಿದ್ದಾರೆ. ಈ ವಾರವಿಡೀ ಟಾಸ್ಕ್‌ಗಳು ನಡೆಯಲಿದ್ದು, ಇದರಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿಸುವ ಮೂಲಕ ತಾವೂ ಅರ್ಹರು ಎಂದು ತೋರಿಸಿಕೊಳ್ಳುವ ಅವಕಾಶ ಸ್ಪರ್ಧಿಗಳಿಗಿದೆ. ಆದ್ರೆ ದ್ರುವಂತ್ ಮಾತ್ರ ಇದರಿಂದ ಹೊರಗುಳಿದಿದ್ದಾರೆ.
ಧ್ರುವಂತ್ ಮತ್ತು ಸ್ಪಂದನಾ
ಧ್ರುವಂತ್ , ಸ್ಪಂದನಾ ಜೊತೆಗೆ ಮಾಡಿಕೊಂಡಿರುವ ಜಗಳವೇ ಈಗ ಅವರಿಗೆ ಮುಳುವಾಗಿದೆ. ಒಳ್ಳೆಯ ಹುಡುಗನಾಗಿದ್ದ ದ್ರುವಂತ್ ಏಕಾಏಕಿ ಸ್ಪಂದನಾರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತಿದ್ರು. ಇದನ್ನೇ ಕಾರಣವನ್ನಾಗಿ ಇಟ್ಟುಕೊಂಡು ಸ್ಪಂದನಾ ತಮ್ಮ ಸೂಪರ್ ಪವರ್ ಬಳಸಿ ದ್ರುವಂತ್ ಅವರನ್ನು ಈ ವಾರದ ಎಲ್ಲ ಟಾಸ್ಕ್‌ಗಳಿಂದ ಬ್ಲಾಕ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.