ಬಿಗ್ ಬಾಸ್‌ ನಲ್ಲಿ ಧನುಷ್‌ ವಿನ್‌ ಆದ್ರೂ ಸೋತ್ರಾ?

ಬಿಗ್ ಬಾಸ್ ನಲ್ಲಿ ಈ ವಾರ ಮೂರು ಟಾಸ್ಕ್ ನೀಡಲಾಗಿತ್ತು. ಒಂಟಿ ತಂಡದಿಂದ ಮಲ್ಲಮ್ಮ, ಕಾಕ್ರೋಚ್ ಸುಧೀರ್, ಧನುಷ್ ಫೈನಲಿಸ್ಟ್ ಕಂಟೆಂಡರ್ ಗಳಾಗಿ ಆಯ್ಕೆಯಾಗಿದ್ದರು. ಇನ್ನೇನೂ ಧನುಷ್ ತಮಗೆ ನೀಡಿದ್ದ ಟಾಸ್ಕ್ ಪೂರ್ಣಗೊಳಿಸುವಾಗ, ಬಿಗ್ ಬಾಸ್ ಯಾರೂ ಕೂಡ ಆಟದ ನಿಯಮ ಅರ್ಥಮಾಡಿಕೊಂಡಿಲ್ಲ ಎಂದು ಹೇಳಿತು.

author-image
Chandramohan
dhanush gowda big boss

ಬಿಗ್ ಬಾಸ್ ಸ್ಪರ್ಧಿ ಧನುಷ್ ಗೌಡ

Advertisment

ಬಿಗ್‌ಬಾಸ್‌ ಸೀಸನ್‌ ೧೨ರ ಟಫೆಸ್ಟ್‌ ಕಂಟೆಂಡರ್‌ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರೋ ಧನುಷ್‌ ಫೈನಲಿಸ್ಟ್‌ ಆಗೋ ಟಾಸ್ಕ್‌ನಲ್ಲಿ ಗೆದ್ರೂ ಸೋಲೋ ಹಾಗೆ ಆಗಿದೆ. ಇಷ್ಟಕ್ಕೂ ಅಲ್ಲಿ ಆಗಿದ್ದೇನು? 
ಬಿಗ್‌ಬಾಸ್‌ ಈ ವಾರ ನೀಡಿದ್ದ ಮೂರು ಟಾಸ್ಕ್‌ಗಳಲ್ಲಿ ಒಂಟಿ ತಂಡ ವಿನ್ನರ್‌ ಅನಿಸಿಕೊಂಡಿದೆ. ಹೀಗಾಗಿ ಒಂಟಿ ತಂಡದಿಂದ ಮಲ್ಲಮ್ಮ, ಕಾಕ್ರೋಚ್‌ ಸುಧಿ, ಹಾಗೂ ಧನುಷ್‌ ಫೆನಲಿಸ್ಟ್‌ ಕಂಟೆಂಡರ್‌ಗಳಾಗಿ ಸೆಲೆಕ್ಟ್‌ ಆಗಿದ್ದಾರೆ. ತಮ್ಮದೇ ತಂಡವನ್ನು ಟಾಸ್ಕ್‌ನಲ್ಲಿ ಸೋಲಿಸೋ ಜವಾಬ್ದಾರಿ ಹೊಂದಿದ್ದ ಸತೀಶ್‌ ಮತ್ತು ಚಂದ್ರಪ್ರಭ ಕೂಡ ಫೈನಲಿಸ್ಟ್‌ ಕಟೆಂಡರ್‌ಗಳಾಗಿ ಸೆಲೆಕ್ಟ್ದ್ ಆಗಿದ್ದಾರೆ. ಇವರಲ್ಲಿ ಫೈನಲಿಸ್ಟ್‌ ಯಾರು? ಅನ್ನೋದನ್ನು ನೋಡೋದಿಕ್ಕಾಗಿಯೇ ನೀಡಿದ್ದ ಟಾಸ್ಕ್‌ ಈಗ ಚರ್ಚೆ ಹುಟ್ಟುಹಾಕಿದೆ. 
ಎಲ್ಲ ನಾಲ್ಕು ಫೈನಲಿಸ್ಟ್‌ಗಳಿಗೆ ಒಂದೇ ಟಾಸ್ಕ್‌ ನೀಡಿ ಯಾರು ಮೊದಲ ಪೂರ್ಣಗೊಳಿಸುತ್ತಾರೋ ಅವರನ್ನು ಫೈನಲಿಸ್ಟ್‌ ಎಂದು ಸೆಲೆಕ್ಟ್‌ ಮಾಡುವ ಅವಕಾಶ ನೀಡಲಾಗಿತ್ತು. ಧನುಷ್‌ ಈ ಟಾಸ್ಕ್‌ನ್ನು ವೇಗವಾಗಿ ಕಂಪ್ಲೀಟ್‌ ಕೂಡ ಮಾಡಿದ್ರು. ಇನ್ನೇನು ಅವರನ್ನು ವಿನ್ನರ್‌ ಎಂದು ಅನೌನ್ಸ್‌ ಮಾಡಬೇಕು ಅನ್ನೋವಾಗ ಬಿಗ್‌ಬಾಸ್‌ ಆಟಗಾರರಾಗಲಿ, ಉಸ್ತುವಾರಿಯವರಾಗಲಿ ಟಾಸ್ಕ್‌ನ ಕಂಡೀಷನ್‌ ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲ ಎಂದು ಹೇಳಿತು. ತಪ್ಪಾಗಿದ್ದು ಎಲ್ಲಿ ಎಂದು ಹೇಳಿದ್ರು. 
ಈಗ ತಂಡದವರ ಮುಂದೆ ಆಟ ಮುಂದುವರಿಸೋದಾ? ಅನ್ನೋ ಪ್ರಶ್ನೆ ಮೂಡಿದೆ. ಹಾಗೊಂದು ವೇಳೆ ಆಟ ಮುಂದುವರಿಸಿದ್ರೆ ಧನುಷ್ ಚೆನ್ನಾಗಿ ಆಟವಾಡಿ ಆಟ ಕಂಪ್ಲೀಟ್‌ ಮಾಡಿದ್ರೂ ಅವರನ್ನು ಸೋಲಿಸಿ ಅವರಿಗೆ ಮೋಸ ಮಾಡಿದ ಹಾಗಾಗುತ್ತೆ. ಹಾಗಾದ್ರೆ ಮುಂದೇನು? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Big boss dhanush gowda
Advertisment