/newsfirstlive-kannada/media/media_files/2025/10/09/dhanush-gowda-bhavya-gowda-2025-10-09-13-29-15.png)
Photograph: (colors kannada)
ಧನುಷ್ & ಭವ್ಯಾ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸರವಾಗುತ್ತಿದ್ದ ಗೀತಾ ಸೀರಿಯಲ್ ಮೂಲಕವೇ ಕಿರುತೆರೆಗೆ ಪಾದಾರ್ಪಣೆ ಮಾಡಿದ ಜೋಡಿ. ತಮ್ಮ ವಿನೂತನ ಅಭಿನಯದ ಮೂಲಕವೇ ಪ್ರೇಕ್ಷಕರ ಮನಸನ್ನ ಈ ಜೋಡಿ ಗೆದ್ದಿತ್ತು.
/filters:format(webp)/newsfirstlive-kannada/media/media_files/2025/10/09/geetha-seial-2025-10-09-13-31-58.png)
ಅತ್ತ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಕರ್ಣ ಧಾರವಾಹಿಯಲ್ಲಿ ನಿಧಿ ಪಾತ್ರದ ಮೂಲಕ ಭವ್ಯಗೌಡ ಪ್ರೇಕ್ಷಕರ ಫೇವರಿಟ್ ಆಗ್ತಿದ್ರೆ ಇತ್ತ ಧನುಷ್ ಗೌಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ತಮ್ಮ ಆಟದ ಮೂಲಕವೇ ಎಲ್ಲರ ಗಮನ ಸೆಳಿತಿದ್ದಾರೆ.
/filters:format(webp)/newsfirstlive-kannada/media/media_files/2025/10/09/karna-serial-2025-10-09-13-33-14.png)
ಆದ್ರೆ ವಿಷ್ಯ ಅದಲ್ಲ ಸೀಸನ್ 11ರಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಭವ್ಯಗೌಡನನ್ನ ಟಾಸ್ಕ್‌ಗಳಲ್ಲಿ ಸೋಲಿಸೋಕೆ ಯಾರಿಂದಲೂ ಆಗುತ್ತಿರಲಿಲ್ಲ. ಅನೇಕ ಬಾರಿ ಆಟಗಳಲ್ಲಿ ಹುಡುಗರಿಗೂ ಮಣ್ಣು ಮುಕ್ಕಿಸುವ ಮೂಲಕ ಬಿಗ್ ಬಾಸ್ ಹನ್ನೊಂದರ ಟಾಸ್ಕ್ ಕ್ವೀನ್ ಆಗಿ ಮೆರೆದಿದ್ದರು ಭವ್ಯಾ. ಅಖಾಡಕ್ಕಿಳಿದ್ಮೇಲೆ ಮುಗೀತು ಗೆಲುವು ನನ್ನದೇ ಎನ್ನುವಂತೆ ಆಡ್ತಿದ್ರು ಭವ್ಯಾ ಗೌಡ..ಈಗ ಧನುಷ್ ಕೂಡ ಅದೇ ದಾರಿಯಲ್ಲಿ ಸಾಗ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/09/bigg-boss-dhanu-game-2025-10-09-13-34-25.png)
ಬಿಗ್ ಬಾಸ್ ಹನ್ನೆರಡಕ್ಕೆ ಬಂದಿರುವ ಭವ್ಯಗೌಡರ ಬೆಸ್ಟ್ ಫ್ರೆಂಡ್ ಧನುಷ್ ಗೌಡ ಟಾಸ್ಕ್ ವಿಷಯದಲ್ಲಿ ಭವ್ಯಾ ಗೌಡನನ್ನೇ ಫಾಲೋ ಮಾಡ್ತಿರುವ ಹಾಗೆ ಕಾಣ್ತಿದೆ. ಅಂದ್ರೆ ಧನುಷ್ ಗೌಡ ಆಟಕ್ಕೆ ಇಳಿದರೆ ಎದುರಾಳಿಯನ್ನ ನಡುಗಿಸುವಂತೆ ಆಟ ಆಡಿ ಗೆಲುವನ್ನ ತಮ್ಮದಾಗಿಸಿಕೊಳ್ಳುತ್ತಾರೆ.
/filters:format(webp)/newsfirstlive-kannada/media/media_files/2025/10/09/bbk-dhanush-abhi-2025-10-09-13-33-59.png)
ಇನ್ನು ನಿನ್ನೆ ನಡೆದ ಬಂಡಾಯದ ಮಸಿ ಟಾಸ್ಕ್ ನಲ್ಲಿ ಎದುರಾಳಿ ಅಭಿಯನ್ನ ಧನುಷ್ ಗೌಡ ಸೋಲಿಸಿದ್ದಾರೆ. 2ನೇ ವಾರದ ಮೊದಲ ಟಾಸ್ಕ್​ನಲ್ಲಿ ಗೆಲ್ಲೋದರ ಮೂಲಕ ತಮ್ಮ ಟೀಂ ಅನ್ನು ಧನುಷ್ ಗೆಲುವಿನತ್ತ ಕೊಂಡೊಯ್ದು, ಬಿಗ್ ಬಾಸ್ ಮನೆಯ ಟಾಸ್ಕ್ ಮಾಸ್ಟರ್ ಆಗುವತ್ತ ಮುನ್ನುಗ್ತಿದ್ದಾರೆ ಧನುಷ್ ಗೌಡ.