ಬಿಗ್ ಬಾಸ್ ಈ ಭಾರಿ ಸಪ್ಪೆಯಾಯಿತೇ? ಇನ್ನೂ ಸ್ವಲ್ಪ ಎಂಟರ್‌ಟೈನ್‌ಮೆಂಟ್‌ ಬೇಕಿತ್ತು ಎಂದ ಪ್ರೇಕ್ಷಕರು

ಸೀಸನ್ 12ರ ಬಿಗ್ ಬಾಸ್ ಆರಂಭವಾಗಿದೆ. ಪ್ರತಿ ಭಾರಿಯೂ ಬಿಗ್ ಬಾಸ್ ನಿಂದ ಪ್ರೇಕ್ಷಕರು ಎಂಟರ್ ಟೈನ್ ಮೆಂಟ್ ನಿರೀಕ್ಷೆ ಮಾಡುತ್ತಾರೆ. ಆದರೇ, ಈ ಭಾರಿಯ ಬಿಗ್ ಬಾಸ್ ನಲ್ಲಿ ಹೆಚ್ಚಿನ ಎಂಟರ್ ಟೈನ್ ಮೆಂಟ್ ಇಲ್ಲ ಎಂಬ ಕೂಗು ಕೇಳಿ ಬಂದಿದೆ. ಈ ಭಾರಿ ಬಿಗ್ ಬಾಸ್‌ ಸಪ್ಪೆಯಾಗಿದೆಯಂತೆ.

author-image
Chandramohan
BBK12

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು

Advertisment
  • ಬಿಗ್ ಬಾಸ್ ಸೀಸನ್ 12 ರಲ್ಲಿ ಮನರಂಜನೆ ಸಪ್ಪೆ!
  • ಇನ್ನೂ ಹೆಚ್ಚಿನ ಎಂಟರ್ ಟೈನ್ ಮೆಂಟ್ ಬೇಕಿತ್ತು ಎಂದ ಪ್ರೇಕ್ಷಕ ಪ್ರಭು

ಬಿಗ್‌ಬಾಸ್‌ ಆರಂಭವಾದ ದಿನವೇ ಓರ್ವ ಸ್ಪರ್ಧಿಯನ್ನು ಮನೆಯಿಂದ ಎಲಿಮಿನೇಟ್‌ ಮಾಡಿ ಹೊಸ ಹಿಸ್ಟರಿ ಬರೆಯಿತು. ಮಲ್ಲಮ್ಮನಂತ ಮುಗ್ದ ಮಹಿಳೆಯನ್ನೂ ಬಿಗ್‌ಬಾಸ್‌ ಮನೆಗೆ ಕರೆತಂದು ಬಿಗ್‌ ಟ್ವಿಸ್ಟ್‌ ಕೊಟ್ರು. ಹೀಗಿದ್ರೂ ಎಂಟರ್‌ಟೈನ್‌ಮೆಂಟ್‌ ಇಲ್ಲ ಅಂತಿದ್ದಾರೆ ವೀಕ್ಷಕ ಮಹಾಶಯರು. 
ಬಿಗ್‌ಬಾಸ್‌ ಸೀಸನ್‌ ೧೨ ಆರಂಭವಾಗಿದೆ. ಇದನ್ನು ಮುನ್ನೆಡೆಸೋಕೆ ಸುದೀಪ್‌ ಇರುತ್ತಾರೋ ಇಲ್ಲವೋ ಅನ್ನೋ ಗೊಂದಲದಲ್ಲಿದ್ದ ಅಭಿಮಾನಿಗಳಿಗೆ ಸುದೀಪ್‌ ಅನ್ನು ನೋಡಿ ಖುಷಿಯಾಗಿದೆ. ಆರಂಭವಾದ ಮೊದಲ ದಿನವೇ ಓರ್ವ ಸ್ಪರ್ಧಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದೂ ಆಗಿದೆ. ಒಂಟಿ ಜಂಟಿ ಅನ್ನೋ ತಂಡವನ್ನು ಮಾಡಿ ಆಟವನ್ನು ಇನ್ನಷ್ಟು ಟಫ್‌ ಮಾಡಲಾಗಿದೆ. ಹೀಗಿದ್ರೂ ಯಾಕೋ ಬಿಗ್‌ಬಾಸ್‌ ಎಂಟರ್‌ಟೈನಿಂಗ್‌ ಆಗಿಲ್ಲ ಅನ್ನೋ ಕೂಗು ಕೇಳ್ತಿದೆ. 
ಯಾಕೋ ಬಿಗ್‌ಬಾಸ್‌ ಕೊಡೋ ಟಾಸ್ಕ್‌ಗಳು ಅಷ್ಟೊಂದು ಟಫ್‌ ಆಗಿಲ್ಲ ಅನ್ನೊ ಅಭಿಪ್ರಾಯವೂ ಕೇಳಿಬರುತ್ತಿದೆ. ಅಲ್ಲದೆ ಮನೆಯಲ್ಲಿರೋ ಸದಸ್ಯರು ವೀಕ್ಷಕರನ್ನು ಎಂಟರ್‌ಟೇನ್‌ ಮಾಡೋ ಪ್ರಯತ್ನವನ್ನೇ ಮಾಡ್ತಿಲ್ಲ, ಟಾಸ್ಕ್‌ ಇದ್ದಾಗ ಆಡ್ತಾರೆ ಇಲ್ವೆ ಸುಮ್ಮನೆ ಕುಳಿತು ಕಾಲ ಕಳೆಯುತ್ತಿದ್ದಾರೆ. ಈ ಬಾರಿಯ ಸ್ಪರ್ಧಿಗಳಿಂದ ತಮಗೆ ತುಂಬಾ ಎಕ್ಸ್‌ಪೆಕ್ಟೇಷನ್‌ ಇತ್ತು ಅನ್ನೋ ಮಾತೂ ಬರುತ್ತಿದೆ. 
ಹಾಗಾದ್ರೆ ಮುಂದಿನ ದಿನಗಳಲ್ಲಿ ಬಿಗ್‌ಬಾಸ್‌ನಲ್ಲಿ ಪ್ರೇಕ್ಷಕರು ಬಯಸಿದಂತೆ ಇನ್ನಷ್ಟು ಬಿಗ್‌ ಟರ್ನಿಂಗ್‌ಗಳು ಬರುತ್ತಾ? ಬಿಗ್‌ಬಾಸ್‌ನಲ್ಲಿ ಇನ್ಯಾವ ರೀತಿಯ ಬದಲಾವಣೆಗಳನ್ನು ಕಾಣಬಹುದು ಅನ್ನೋದಿಕ್ಕೆ ಟೈಂ ಉತ್ತರ ನೀಡಬೇಕಷ್ಟೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIG BOSS 12 SEASON
Advertisment