ಬಿಗ್​ಬಾಸ್ ಸೀಸನ್ 12 ದಿನೇ ದಿನೇ ರೋಚಕ ತಿರುವುಗಳನ್ನು ಪಡೆಯುತ್ತಿದೆ. ನಿನ್ನೆ ನಡೆದ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಸತೀಶ್​ ಕಡಬಮ್​ ಮನೆಯಿಂದ ಹೊರಬಂದಿದ್ದಾರೆ. ಈ ಕುರಿತು ನ್ಯೂಸ್ ಫಸ್ಟ್ ಜೊತೆ ಎಕ್ಸ್​ಕ್ಲೂಸಿವ್ ಸಂದರ್ಶನ ನೀಡಿದ್ದಾರೆ..
100 ಪರ್ಸೆಂಟ್ ರಕ್ಷಿತಾಳನ್ನ ಟಾರ್ಗೆಟ್ ಮಾಡಲಾಗ್ತಿದೆ..
ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಲಾಗ್ತಿದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಕಡಬಮ್..100 ಪರ್ಸೆಂಟ್ ರಕ್ಷಿತಾಳನ್ನ ಟಾರ್ಗೆಟ್ ಮಾಡಲಾಗ್ತಿದೆ. ರಕ್ಷಿತಾ ಮುಂಬೈನಲ್ಲಿ ಕಮ್ಯುನಿಟಿ ಅಪಾರ್ಟ್​ಮೆಂಟ್​ನಲ್ಲಿ ಬೆಳೆದು ಬಂದವಳು. ಅವಳಿಗೆ ರಾತ್ರಿ ಹೊತ್ತು ನಿದ್ದೆ ಬರಲ್ಲಾ..ಅವಳಿಗೆ ದಾಂಡಿಯಾ ಅಂದ್ರೆ ತುಂಬಾ ಇಷ್ಟ, ಹಾಗಾಗಿ ರಾತ್ರಿ ಎಲ್ಲರ ಜೊತೆ ಸಮಯ ಕಳೆದ ನಂತರ ರಕ್ಷಿತಾ ದಾಂಡಿಯಾ ಸಾಂಗ್​ ಹಾಡ್ಕೊಂಡು ಡ್ಯಾನ್ಸ್ ಮಾಡ್ತಿದ್ಲು..ಅದನ್ನೇ ಜಾಹ್ನವಿ ಹಾಗು ಅಶ್ವಿನಿ ಅವರು ರಾರಾ ಡ್ಯಾನ್ಸ್ ಮಾಡ್ತಾಳೆ ಎಂದು ಹಬ್ಬಿಸಿದ್ರು..
ಗಿಲ್ಲಿ-ಚಂದ್ರಪ್ರಭಾಗೆ ದೆವ್ವ ಅಂದ್ರೆ ಭಯ..!
ಇನ್ನೂ ಜಾಹ್ನವಿ ಹಾಗು ಅಶ್ವಿನಿ ಹಬ್ಬಿಸಿದ ಸುಳ್ಳನ್ನು ಗಿಲ್ಲಿ-ಚಂದ್ರಪ್ರಭ ನಂಬಿದ್ರು, ಯಾಕಂದ್ರೆ ಅವರಿಗೆ ದೆವ್ವ ಅಂದ್ರೆ ಭಯ, ಈ ವಿಚಾರವಾಗಿ ರಕ್ಷಿತಾ ಸಹ ಮೂಡ್ ಆಫ್ ಆಗಿದ್ಲು. ಜಾಹ್ನವಿ ಹಾಗು ಅಶ್ವಿನಿಗೆ ಸಾಥ್ ನೀಡಿದ ಅಭಿಷೇಕ್ ಕೂಡ ರಾತ್ರಿಹೊತ್ತು ಗೆಜ್ಜೆ ಹಿಡ್ಕೊಂಡು ಸದ್ದು ಮಾಡ್ತಿದ್ರು..ಇದು ನಿಜವಾಗ್ಲೂ ದೆವ್ವ ಎಂದು ಗಿಲ್ಲಿ-ಚಂದ್ರ ಪ್ರಭ ನಂಬಿದ್ದರು. ಈ ಮೂಲಕ ರಕ್ಷಿತಾಳನ್ನು ಮನೆಯಲ್ಲಿ ಟಾರ್ಗೆಟ್ ಮಾಡಲಾಗ್ತಿದೆ ಎಂದು ಸತೀಶ್ ಕಡಬಮ್ ಹೇಳಿದ್ದಾರೆ.
ಇದನ್ನೂ ಓದಿ:‘ನೀನು ಎಲ್ಲಿಂದ ಬಂದಿದ್ಯಾ ಅಂತಾ ಗೊತ್ತು..’ ಮತ್ತೆ ರಕ್ಷಿತಾರ ನಿಂದಿಸಿದ ಅಶ್ವಿನಿ ಗೌಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ