/newsfirstlive-kannada/media/media_files/2025/10/29/gilli_kavya_new-2025-10-29-08-54-35.jpg)
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ ಅಲಿಯಾಸ್ ನಟರಾಜ್
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಒಳ್ಳೆ ಎಂಟರ್‌ಟೈನರ್. ತಮ್ಮ ತಮಾಷೆ, ಆಟ, ಹಠ ಎಲ್ಲದರಿಂದಲೂ ಫೇಮಸ್ ಆಗಿದ್ದಾರೆ. ಇದೇ ಈಗ ಮನೆಯಲ್ಲಿ ಗಲಾಟೆಗೆ ಕಾರಣವಾಗಿದ್ಯಾ?
ಬಿಗ್‌ಬಾಸ್ ಮನೆಯಲ್ಲಿ ಇತ್ತೀಚೆಗೆ ತುಂಬಾ ಸುದ್ದಿಯಾಗಿರುವ ಹೆಸರೆಂದರೆ ಗಿಲ್ಲಿ. ಗಿಲ್ಲಿಯ ಪೂರ್ತಿ ಹೆಸರು ನಟರಾಜ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನವರು. ಕಾಮಿಡಿಯ ಮೂಲಕವೇ ಕನ್ನಡದ ಟಿವಿ ಚಾನಲ್ ಗಳಲ್ಲಿ ಹೆಸರು ಮಾಡಿದವರು. ಈಗ ಬಿಗ್ ಬಾಸ್ ಮನೆಯಲ್ಲಿ ಕೆಲವರು ಗಿಲ್ಲಿಯ ಒಳ್ಳೆತನದಿಂದ ಅವರ ಹೆಸರನ್ನು ಹೇಳುತ್ತಿದ್ದರೆ, ಕೆಲವರು ಗಿಲ್ಲಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಇದೀಗ ದ್ರುವಂತ್ ಕೂಡ ಗಿಲ್ಲಿ ವಿರುದ್ಧ ನಿಂತಿದ್ದಾರೆ.
ಅಶ್ವಿನಿ ಗೌಡಗೆ ಇತ್ತೀಚೆಗೆ ತನಗಿಂತಲೂ ಗಿಲ್ಲಿ ಹೆಸರೇ ಹೆಚ್ಚು ಸುದ್ದಿಯಾಗುತ್ತಿದೆ ಅನ್ನೋ ಕೋಪವೋ ಏನೋ ಅವರು ಕೆಂಡಕ್ಕೆ ತುಪ್ಪ ಸುರಿಯೋ ಕೆಲಸ ಮಾಡಿ ಸುಮ್ಮನಿರುತ್ತಿದ್ದರೆ, ಅವರ ಮಾತನ್ನು ಕೇಳಿಕೊಂಡು ಉಳಿದವರು ಗಿಲ್ಲಿ ಜೊತೆ ಜಗಳಕ್ಕೆ ನಿಲ್ಲುವಂತಾಗಿದೆ.
/filters:format(webp)/newsfirstlive-kannada/media/media_files/2025/10/20/jahnvi-and-ashwini-gowda-2025-10-20-22-39-19.jpg)
ಮಾತೆತ್ತಿದರೆ ಜಗಳಕ್ಕೆ ನಿಲ್ಲೋ ರಿಷಾ ಗಿಲ್ಲಿಗೆ ನಯ ನಾಜೂಕು ಕಲಿತುಕೋ ಎಂದು ಪಾಠ ಮಾಡಿದ್ದರೆ, ದ್ರುವಂತ್ ಅಂತು ನೀನು ಬೇರೆಯವರನ್ನು ತಮಾಷೆ ಮಾಡುವುದು ಬಿಟ್ಟು ಬೇರೆ ಯಾವುದರಿಂದ ಗುರುತಿಸಿಕೊಂಡಿದ್ದೀಯಾ? ನಿನ್ನ ಬಗ್ಗೆ ಜನ ಒಂದು ಒಳ್ಳೆದು ಮಾತಾಡಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿರುವ ಗಿಲ್ಲಿ ಹೌದಪ್ಪ ನಿಮ್ಮ ಬಗ್ಗೆಯೂ ಜನ ಏನೇನು ಮಾತಾಡ್ತಾರೆ ಅಂತ ಗೊತ್ತಿದೆ ಎಂದು ಉತ್ತರ ನೀಡಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ದ್ರುವಂತ್ ಮಾತನ್ನು ಇನ್ನೂ ಮುಂದುವರಿಸಿ ನನ್ನ ಬಗ್ಗೆ ಏನೂ ಮಾತನಾಡಬೇಡ ಎಂದು ಹೇಳಿದ್ದಾರೆ. ನಿನ್ನನ್ನು ನೀನು ಪ್ರೂವ್ ಮಾಡು ಅಂದಿದ್ದಕ್ಕೆ ಗಿಲ್ಲಿ ಸರಿಯಾಗೇ ಉತ್ತರ ನೀಡಿದ್ದು, ತನ್ನನ್ನು ಪ್ರೂವ್ ಮಾಡಿಕೊಂಡಿರುವುದಕ್ಕೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿರುವುದು ಎಂದು ಹೇಳಿದ್ದಾರೆ. ಇದೇ ಗಿಲ್ಲಿ ದ್ರುವಂತ್ ನಡುವೆ ಗಲಾಟೆಗೆ ಕಾರಣವಾಗಿದ್ದು,ಇದು ಎಲ್ಲಿಗೆ ತಲುಪುತ್ತೋ ಗೊತ್ತಿಲ್ಲ. ಅಷ್ಟಕ್ಕೂ ದ್ರುವಂತ್ ಹೀಗೆ ಏಕಾಏಕಿ ಬದಲಾಗಿದ್ದು ಯಾಕೆ? ಮಲ್ಲಮ್ಮ ಮನೆಯಿಂದ ಹೊರಕ್ಕೆ ಹೋಗುತ್ತಿದ್ದಂತೆಯೇ ದ್ರುವಂತ್ ವರಸೆಯೇ ಬದಲಾಗಿದೆ. ಅಶ್ವಿನಿ ಬಗ್ಗೆ ಕೆಂಡ ಕಾಡುತ್ತಿದ್ದ ದ್ರುವಂತ್ ಈಗ ಅವರ ಪಕ್ಷವನ್ನೇ ಸೇರಿಕೊಂಡಿರೋದಾದ್ರು ಯಾಕೆ? ಅನ್ನೋ ಕುತೂಹಲ ಉಂಟಾಗಿದೆ.
/filters:format(webp)/newsfirstlive-kannada/media/media_files/2025/10/25/dhruvanth-ashwini-2025-10-25-17-42-12.png)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us