Advertisment

BBK 12 : ರಕ್ಷಿತಾ ಶೆಟ್ಟಿ ಮೈ ಮೇಲೆ ದೆವ್ವ ! ಜಾಹ್ನವಿ-ಅಶ್ವಿನಿ ಪಿತೂರಿಗೆ ಕಣ್ಣೀರಿಟ್ಟ ರಕ್ಷಿತಾ !

ಅವಳಿಗೆ ಜ್ಞಾನ ಇರಲಿಲ್ಲ. ಏನಾಗಿದ ಅಂತ ಮರೆತೋಗಿದ್ದಾಳೆ. ಎಲ್ಲರೂ ಮಲಗಿದ್ದಾರೆ. ರಕ್ಷಿತಾ ಎಲ್ಲೋದ್ಲು ಅಂತ ಎಲ್ಲಾ ಕಡೆ ಹುಡುಕುದ್ವಿ. ಪ್ರತಿ ರಾತ್ರಿ 12 ಗಂಟೆಗೆ ರಕ್ಷಿತಾ ಬಾತ್​ ರೂಂನಲ್ಲಿ ಇರ್ತಾಳೆ. ನಾನು-ಜಾಹ್ನವಿ ಭಯ ಪಟ್ಕೊಂಡು ಕೂತಿದ್ವಿ. ಅವಳ ಅವತಾರಗಳೆಲ್ಲ ಆದ್ಮೇಲೆ ಹೊರ ಬಂದ್ಲು

author-image
Sushmitha Naveenkumar
Rakshitha-Shetty-Crying

Photograph: (colors kannada)

Advertisment

ರಕ್ಷಿತಾ ಶೆಟ್ಟಿ ಮೈ ಮೇಲೆ ದೆವ್ವ ಬಂದಿತ್ತು. ಆಪ್ತಮಿತ್ರ ಸಿನಿಮಾದ ರಾ.. ರಾ.. ಸಾಂಗ್​ ಹೇಳ್ಕೊಂಡು ಡ್ಯಾನ್ಸ್ ಮಾಡ್ತಿದ್ರು ಎಂದು ಅಶ್ವಿನಿ & ಜಾಹ್ನವಿ ಬಿಗ್​ಬಾಸ್​ ಮನೆಯಲ್ಲಿ ಪುಕಾರು ಹರಡಿಸಿದ್ದಾರೆ. ಇವರಿಬ್ಬರ ಮಾತಿನಿಂದ ಮನನೊಂದ ರಕ್ಷಿತಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

Advertisment

Ashwini-Gowda
Photograph: (colors kannada)

ನಿನ್ನೆ ರಾತ್ರಿ ಬೆಡ್​ ರೂಂ ಪಕ್ಕ ಕುಳಿತು ಅಶ್ವಿನಿ, ಜಾಹ್ನವಿ, ಮಲ್ಲಮ್ಮ, ಸತೀಶ್, ಕಾಕ್ರೋಜ್ ಸುಧಿ & ರಕ್ಷಿತಾ ಹರಟೆ ಹೊಡೆಯುತ್ತಿದ್ದರು. ಈ ವೇಳೆ ಅಶ್ವಿನಿ ಅವಳಿಗೆ ಜ್ಞಾನ ಇರಲಿಲ್ಲ. ಏನಾಗಿದ ಅಂತ ಮರೆತೋಗಿದ್ದಾಳೆ. ಎಲ್ಲರೂ ಮಲಗಿದ್ದಾರೆ. ರಕ್ಷಿತಾ ಎಲ್ಲೋದ್ಲು ಅಂತ ಎಲ್ಲಾ ಕಡೆ ಹುಡುಕುದ್ವಿ. ಪ್ರತಿ ರಾತ್ರಿ 12 ಗಂಟೆಗೆ ರಕ್ಷಿತಾ ಬಾತ್​ ರೂಂನಲ್ಲಿ ಇರ್ತಾಳೆ. ನಾನು-ಜಾಹ್ನವಿ ಭಯ ಪಟ್ಕೊಂಡು ಕೂತಿದ್ವಿ. ಅವಳ ಅವತಾರಗಳೆಲ್ಲ ಆದ್ಮೇಲೆ ಹೊರ ಬಂದ್ಲು ಎಂದಿದ್ದಾರೆ.. ಇನ್ನು ಇವರ ಮಾತುಗಳಿಗೆಲ್ಲ ಜಾಹ್ನವಿ ಕುಮ್ಮಕ್ಕು ನೀಡಿದ್ದಾರೆ. ಇವರಿಬ್ಬರು ಮಾತು ಕೇಳಿದ ಕಾಕ್ರೋಚ್ ಸುಧಿ ಏನ್ ಮೇಡಂ ಹಿಂಗ್ ಹೇಳ್ತಿದ್ದೀರಾ ಅಂತ ಭಯ ಪಟ್ಟಿದ್ದಾರೆ.

Bigg-Boss-12
Photograph: (colors kannada)

ಇಷ್ಟಕ್ಕೆ ಸುಮ್ಮನಾಗದ ಅಶ್ವಿನಿ ಮನೆಯ ಇತರೆ ಸ್ಪರ್ಧಿಗಳಿಗೂ ದೆವ್ವದ ಕಥೆ ಕಟ್ಟಿ ಭಯ ಪಡೆಸಿದ್ದಾರೆ. ಮಧ್ಯ ರಾತ್ರಿ 1 ಗಂಟೆಗೆ ರಾರಾ ಸಾಂಗ್​ಗೆ ರಕ್ಷಿತಾ ಡ್ಯಾನ್ಸ್ ಮಾಡ್ತಿದ್ಲು. ಲವ್ ಅಂತೆಲ್ಲ ಏನೇನೋ ಮಾತಾಡ್ತಿದ್ಲು. ಆಮೇಲೆ ಅವಳೇ ನಾರ್ಮಲ್​ಗೆ ಬಂದ್ಲು.  ಅಷ್ಟೊತ್ತಲ್ಲಿ ಅವಳನ್ನ ಮಾತಾಡಿಸುವಷ್ಟೂ ಧೈರ್ಯ ಇಲ್ಲ ನಮ್ಗೆ. ಅವಳು ಡ್ಯಾನ್ಸ್ ಮಾಡಿ ಬಂದ್ಮೇಲೆ ನಾವು ಓಡೋದ್ವಿ. ನಮ್ಮನ್ನ ನೋಡಿ ಎಂಥ ಮಾಡ್ತಿದ್ದೀರಾ ಅಂತ ಸ್ಮೈಲ್ ಮಾಡುದ್ಲು. ಇದರಿಂದಲೇ ಭಯ ಪಟ್ಟು 3 ದಿನದಿಂದ ನಾನು-ಜಾಹ್ನವಿ ಅವಳನ್ನ ಅವಾಯ್ಡ್ ಮಾಡ್ತಿದ್ದೀವಿ ಎಂದು ಅಶ್ವಿನಿ ಮನೆಯವರಿಗೆಲ್ಲ ಭಯ ಪಡೆಸಿದ್ದಾರೆ.

Rakshitha-Shetty
Photograph: (colors kannada)

ಇದರಿಂದ ಮನನೊಂದ ಬಿಗ್​ಬಾಸ್​ ಮನೆಯ ಅತ್ಯಂತ ಕಿರಿಯ ಸ್ಪರ್ಧಿಯಾಗಿರುವ ರಕ್ಷಿತಾ ಶೆಟ್ಟಿ ನಾನು ಡ್ಯಾನ್ಸ್ ಮಾಡಿಲ್ಲ. ನನ್ಗೆ ರಾ.. ರಾ.. ಸಾಂಗ್​ ಗೊತ್ತೇ ಇಲ್ಲ. ಇವರೆಲ್ಲ ಯಾಕೆ ಹೀಗೆ ಸುಳ್ಳು ಆಪಾಧನೆ ಮಾಡ್ತಿದ್ದಾರೆ. ನನ್ಮೇಲೆ ಭೂತ ಬರುತ್ತಾ ಅಂತ ಜನರು ಅಂದ್ಕೊಳ್ಳೋದಿಲ್ವಾ ? ಇವರ ಮಾತುಗಳಿಂದ ನನ್ಗೆ ನೋವಾಗಲ್ವಾ ? ಎಂದು ಮಂಜು ಭಾಷಿಣಿ, ಕಾವ್ಯಾ, ಸ್ಪಂದನಾ, ಅಶ್ವಿನಿ S. N & ರಾಶಿಕಾ ಬಳಿ ಹೇಳಿಕೊಂಡು ರಕ್ಷಿತಾ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Advertisment

Bigg-Boss-House
Photograph: (colors kannada)

Bigg Boss Kannada 12 bigg boss jahnavi Jahnavi Bigg Boss Rakshitha Shetty Ashwini Gowda Bigg Boss
Advertisment
Advertisment
Advertisment