/newsfirstlive-kannada/media/media_files/2025/08/16/mansi-joshi1-2025-08-16-12-43-52.jpg)
ಪಾರು ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟಿ ಮಾನ್ಸಿ ಜೋಶಿ ರಾಧೆಯಾಗಿ ಕಂಗೊಳಿಸಿದ್ದಾರೆ.
ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಲು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಜನರು ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ಉಡುಪುಗಳನ್ನು ತೊಡಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
ಇದನ್ನೂ ಓದಿ:ನಟಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ.. ತ್ರಿದೇವಿ ಪೊನ್ನಕ್ಕ ಕ್ಯೂಟ್ ವಿಡಿಯೋ!
ಇಲ್ಲಿ ಕನ್ನಡದ ಕಿರುತೆರೆ ನಟಿ ರಾಧೆಯಾಗಿ ಮಿಂಚಿದ್ದಾರೆ. ಪಾರು ಸೇರಿದಂತೆ ಕನ್ನಡ ಸೇರಿ ಬೇರೆ ಭಾಷೆಯ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಮಾನ್ಸಿ ಜೋಶಿ ರಾಧೆಯ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.
ರಾಧೆಯ ಗೆಟಪ್ನಲ್ಲಿ ವಿಡಿಯೋ ಶೂಟ್ ಮಾಡಿಸಿ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆಗೆ ರಾಧೆಯಿಲ್ಲದೆ ಕೃಷ್ಣನು ಅಪೂರ್ಣ, ಕೃಷ್ಣನಿಲ್ಲದೆ ರಾಧೆಯು ಅಪೂರ್ಣ. ರಾಧೇ ರಾಧೇ ಎಂದು ಬರೆದುಕೊಂಡಿದ್ದಾರೆ.
ಇದೇ ವರ್ಷ ಫೆಬ್ರವರಿಯಲ್ಲಿ ನಟಿ ಮಾನ್ಸಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಗೆ ಬಿಗ್ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಕೂಡ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ