/newsfirstlive-kannada/media/media_files/2025/09/17/mayuri-kyatari-2-2025-09-17-09-59-40.jpg)
/newsfirstlive-kannada/media/media_files/2025/09/17/mayuri-kyatari-9-2025-09-17-09-59-51.jpg)
ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚಿದವ್ರು ಮಯೂರಿ ಕ್ಯಾತಾರಿ. 30ರ ಆಸುಪಾಸಿನಲ್ಲಿರೋ ಮಯೂರಿ ಮಗು ಜೊತೆ ಹಾಯಾಗಿ ಕಾಲ ಕಳಿತಿದ್ದಾರೆ.
/newsfirstlive-kannada/media/media_files/2025/09/17/mayuri-kyatari-2025-09-17-10-00-15.jpg)
ಹುಬ್ಬಳ್ಳಿ ಮೂಲದ ಮಯೂರಿ ಸದ್ಯ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ತಿಲ್ಲ. ಮದುವೆ, ಮಗು ನಂತರ ಬಿಗ್ ಬಾಸ್ಗೆ ಬಂದಿದ್ರು. ಅಲ್ಲಿಂದ ಕಿರುತೆರೆ ಪಯಣ ಮತ್ತೆ ಶುರುವಾಯ್ತು. ಆದ್ರೆ ನಟನೆಗೆ ಮರಳಿದ್ದು ನನ್ನ ದೇವರು ಸೀರಿಯಲ್ ಮೂಲಕ. ಇದು ಮಯೂರಿ ಕಮ್ಬ್ಯಾಕ್ ಆಗಿತ್ತು. ಅಂದುಕೊಂಡಂತೆ ಧಾರಾವಾಹಿ ಯಶಸ್ವಿಯಾಗ್ಲಿಲ್ಲ. ಬಂದಷ್ಟೇ ವೇಗದಲ್ಲಿ ಸೀರಿಯಲ್ ಮುಕ್ತಾಯವಾಯ್ತು. ಸದ್ಯ ಮಯೂರಿ ಸ್ಕಿನ್-ಹೇರ್ಗೆ ಸಂಬಂಧಪಟ್ಟ ಕ್ಲೀನಿಕ್ ನಡೆಸ್ತಿದ್ದಾರೆ.
/newsfirstlive-kannada/media/media_files/2025/09/17/mayuri-kyatari-8-2025-09-17-10-00-39.jpg)
2020ರಲ್ಲಿ ಮದುವೆ ಆಗಿರುವ ಮಯೂರಿ ಈಗ ಮುದ್ದು ಮಗ ಆರವ್ ಜೊತೆಗಿನ ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ತಿರ್ತಾರೆ.
/newsfirstlive-kannada/media/media_files/2025/09/17/mayuri-kyatari-5-2025-09-17-10-00-58.jpg)
ಮಗ ಆರವ್ ಸಖತ್ ಆ್ಯಕ್ಟಿವ್ ಆಗಿದ್ದು, ಬಹಳ ಶಿಸ್ತಿನ ಜೊತೆಗೆ ಎಲ್ಲಾ ರೀತಿಯಲ್ಲೆ ಕಲೆಗಳನ್ನ ಧಾರೆಯೆರೆಯುವದ್ರ ಮೂಲಕ ಬೆಳಸ್ತಿದ್ದಾರೆ. ಹಾಡು, ನೃತ್ಯ, ಮಂತ್ರಪಠನೆ ಎಲ್ಲದ್ರಲ್ಲೂ ಸಂಸ್ಕಾರಕೊಟ್ಟು ಬೇಳಸ್ತಿದ್ದಾರೆ ನಟಿ. ಇತ್ತೀಚಿಗೆ ಮಗು ಜೊತೆಗೆ ಸುಂದರವಾದ ಫೋಟೋಗಳನ್ನ ಕ್ಲಿಕ್ಕಿಸಿದ್ರು.
/newsfirstlive-kannada/media/media_files/2025/09/17/mayuri-kyatari-10-2025-09-17-10-01-22.jpg)
ಸದ್ಯ ಸಂಪ್ರದಾಯಕ ಹಾಗೂ ವೆಸ್ಟರ್ನ್ ಲುಕ್ನಲ್ಲಿ ಆಗಾಗ ಫೊಟೋಶೂಟ್ ಮಾಡಸ್ತಾನೆ ಇರ್ತಾರೆ. ಎರಡರಲ್ಲೂ ಸಖತ್ ಮಮ್ಮಿ ಮಯೂರಿ.
/newsfirstlive-kannada/media/media_files/2025/09/17/mayuri-kyatari-6-2025-09-17-10-01-51.jpg)
ಈ ಬೆನ್ನಲ್ಲೆ ಮಗ ಆರವ್ ತಮಗಾಗಿ ಹಾಡೊಂದನ್ನ ಡೇಡಿಕೇಟ್ ಮಾಡಿರೋ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ ನಟಿ. ಪ್ರೀತಿ ನೀನು ಎಂದು ಅಮ್ಮನಿಗೆ ಮುದ್ದಾಗಿ ಐಲವ್ಯೂ ಹೇಳಿ ಹಾಡಿದ್ದಾನೆ ಪುಟಾಣಿ ಆರವ್.
/newsfirstlive-kannada/media/media_files/2025/09/17/mayuri-kyatari-7-2025-09-17-10-02-09.jpg)
ಒಟ್ನಲ್ಲಿ ಒಂಟಿಯಾಗಿಯೇ ಮಗನ ಲಾಲನೆ ಪಾಲನೆ ಮಾಡ್ತಿರೋ ಮಯೂರಿ, ಮಗನಲ್ಲೇ ಸ್ನೇಹಿತನನ್ನ ಕಾಣ್ತಿದ್ದಾರೆ. ಅಮ್ಮ-ಮಗ ಅನ್ನೋಕ್ಕಿಂತ ಹೆಚ್ಚಾಗಿ ಇಬ್ಬರೂ ಗೆಳೆಯರನ್ನ ನೋಡಿದ ಭಾಸವಾಗುತ್ತೆ. ಈ ಮುದ್ದುಮುದ್ದು ಪ್ರೀತಿಗೆ ಯಾರ್ ದೃಷ್ಟಿನೂ ಬಿಳ್ದೇ ಇರಲಿ ಎಂದು ಹಾರೈಸ್ತಿದ್ದಾರೆ ಅಭಿಮಾನಿಗಳು.