/newsfirstlive-kannada/media/media_files/2025/11/22/gilli-nata-2-2025-11-22-08-35-34.jpg)
ಬಿಗ್​ಬಾಸ್​ನಲ್ಲಿ (Bigg Boss) ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದ್ದು, ವೀಕ್ಷಕರು ತುಂಬಾ ಎಕ್ಸೈಟ್ ಆಗಿದ್ದಾರೆ. ಸುದೀಪ್ ಅವರು ಯಾವೆಲ್ಲ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ? ಯಾವ ಸ್ಪರ್ಧಿಗೆ ಮಾತಿನ ಏಟು ಕೊಡಲಿದ್ದಾರೆ ಅನ್ನೂ ಕುತೂಹಲ ಹೆಚ್ಚಾಗಿದೆ.
ಈ ವಾರ ದೊಡ್ಮನೆಯಲ್ಲಿ ತುಂಬಾ ನಾಟಕೀಯ ಬೆಳವಣಿಗೆಗಳು ನಡೆದಿವೆ. ಸುದೀಪ್ ಯಾವ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ತಾರೆ ಅನ್ನೋದು ವೀಕ್ಷಕರ ಕೌತುಕ. ಗಿಲ್ಲಿ ಹಾಗೂ ಅಶ್ವಿನಿ ನಡುವಿನ ಗಲಾಟೆ, ಅಶ್ವಿನಿ ಗೌಡರ ಉಪವಾಸ, ರಘು ಜೊತೆಗಿನ ಗಲಾಟೆ, ಟಾಸ್ಕ್​ ವೇಳೆ ಅಭಿಷೇಕ್ ನೀರಿನ ಬಕೆಟ್ ಅನ್ನು ಕಾಲಿನಿಂದ ಒದ್ದಿರೋದು, ಕ್ಯಾಪ್ಟನ್ ಆಯ್ಕೆ ನಂತರ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ನಡೆದಿರುವ ನಾಟಕೀಯ ಬೆಳವಣಿಗೆಗಳು ಜೊತೆ ರಿಷಾ ಹಾಗೂ ಮಾಳು ನಡುವಿನ ಕಿತ್ತಾಟ ಸೇರಿದಂತೆ ಅನೇಕ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಿಚ್ಚ ಸುದೀಪ್, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು..!
ಯಾರಿಗೆ ಕ್ಲಾಸ್​..?
ಟಾಸ್ಕ್​ ವೇಳೆ ಹಾಗೂ ಮನೆಯಲ್ಲಿ ಆಗಿರುವ ತಪ್ಪುಗಳನ್ನ ಸುದೀಪ್ ಎತ್ತಿ ಹಿಡಿಯಲಿದ್ದಾರೆ. ಜೊತೆಗೆ ತಪ್ಪು ಮಾಡಿದ ಸ್ಪರ್ಧಿಗಳಿಗೆ ಕ್ಲಾಸ್ ಕೂಡ ತೆಗೆದುಕೊಳ್ಳಲಿದ್ದಾರೆ. ವೀಕ್ಷಕರು ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂಬ ಆಗ್ರಹ ಮಾಡಿದ್ದಾರೆ. ಇನ್ನು ಕೆಲವರು ಗಿಲ್ಲಿಗೂ ಬೆಂಡೆತ್ತಬೇಕೆಂಬ ಬೇಡಿಕೆ ಇದೆ. ಇದರ ಜೊತೆಗೆ ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಲಿದೆ ಎಂಬ ಕುತೂಹಲ ಇದೆ. ಹಾಗೆಯೇ ಇವತ್ತು ಯಾರೆಲ್ಲ ಸೇವ್ ಆಗಲಿದ್ದಾರೆ ಎಂಬ ನಿರೀಕ್ಷೆಯೂ ವೀಕ್ಷಕರಲ್ಲಿ ದುಪ್ಪಟ್ಟಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
It looks like Bigg Boss intentionally designed this task just to give Gilli a free hand. 😂
— ಅಲ್ಪಸಂಖ್ಯಾತ (@alpasankhyata) November 21, 2025
They knew Abhi would pick Gilli to distract Ashwini.
The Bigg Boss team indirectly took the mickey out of Ashwini Gowda.😂 😂 #BBK12#Gilli
pic.twitter.com/CKWcTGsRHR
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us