/newsfirstlive-kannada/media/media_files/2025/08/20/sujatha-bhat3-2025-08-20-21-16-44.jpg)
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಅನನ್ಯ ಭಟ್ ಕಥೆ ಕಟ್ಟಿ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ರಾಜ್ಯಾದ್ಯಂತ ಹಬ್ಬಿಸಿದ್ದ ಸುಜಾತ ಭಟ್ಗೆ ಕನ್ನಡದ ಬಿಗ್ಬಾಸ್ ಆಫರ್ ಬಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮೂಲಗಳಿಂದ ನ್ಯೂಸ್ ಫಸ್ಟ್ಗೆ ಮಾಹಿತಿ ಲಭ್ಯವಾಗಿದೆ.
ನನ್ನ ಮಗಳು ಕಾಣೆಯಾಗಿದ್ದಾಳೆ ಎನ್ನುತ್ತಿರುವ ಸುಜಾತ ಭಟ್ಗೆ ಕನ್ನಡದ ಬಿಗ್ ಬಾಸ್ ಸೀಸನ್ 12ರಲ್ಲಿ ಭಾಗವಹಿಸುವಂತೆ ಆಫರ್ ಬಂದಿರುವ ಮಾಹಿತಿ ಲಭ್ಯವಾಗಿದೆ. ನ್ಯೂಸ್ ಫಸ್ಟ್ಗೆ ಖಚಿತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಅನನ್ಯ ಭಟ್ ಕೇಸ್ನಿಂದ ರಾಜ್ಯದೆಲ್ಲೆಡೆ ಫುಲ್ ಫೇಮಸ್ ಆಗಿರೋ ಸುಜಾತ ಭಟ್ ಕಳೆದ ಹಲವು ದಿನಗಳಿಂದ ಎಲ್ಲೆಲ್ಲೂ ಇವರದ್ದೇ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಅಧಿಕೃತವಾಗಿ ED ಎಂಟ್ರಿ.. ವಿದೇಶದಿಂದ ಫಂಡಿಂಗ್ ಆಗಿದೆಯಾ..?
ಕಾಲೇಜು ಒಂದರಲ್ಲಿ ಎಂಬಿಬಿಎಸ್ ಕೋರ್ಸ್ಗೆ ಅಡ್ಮಿಷನ್ ಆಗಿದ್ದ ಅನನ್ಯ ಭಟ್ ಆ ಮೇಲೆ ಎಲ್ಲಿ ಹೋದಳು ಎನ್ನುವುದು ಗೊತ್ತಿಲ್ಲ. ನನ್ನ ಮಗಳನ್ನು ಹುಡುಕಿ ಕೊಡಿ ಎಂದು ಸುಜಾತ ಭಟ್ ಎಲ್ಲರ ಮುಂದೆ ಅವಲತ್ತುಕೊಳ್ಳುತ್ತಿದ್ದಳು. ದೇವರ ಮೇಲೆಯೂ ಪ್ರಮಾಣ ಮಾಡಿದ್ದರು. ಆದರೆ ಈ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ದಿನಕ್ಕೊಂದು ಟ್ವಿಸ್ಟ್ ಕೊಡಲು ಸುಜಾತ ಭಟ್ ಶುರು ಮಾಡಿದ್ದರು. ಆದರೆ ಸುಜಾತ ಭಟ್ ತೋರಿಸಿರುವ ಫೋಟೋ ವಾಸಂತಿ ಎನ್ನುವರದ್ದು ಎಂದು ವಾಸಂತಿ ಸಹೋದರ ಹೇಳಿದ್ದನು.
ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿರುವ ಬಿಗ್ಬಾಸ್ ಇದೇ 28 ರಿಂದ ಆರಂಭವಾಗಲಿದೆ. ಬಿಗ್ಬಾಸ್ ಸೀಸನ್- 12 ಶೋನ ಹೊಸ ಲೋಗೋ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸುದೀಪ್ ಅವರೇ ನಿರೂಪಣೆ ಮಾಡಲಿದ್ದು ಕಂಟೆಸ್ಟೆಂಟ್ಗಳು ಯಾರು ಯಾರು ಎನ್ನುವುದು ಇನ್ನು ರಿವೀಲ್ ಮಾಡಿಲ್ಲ. ಕಳೆದ ಬಾರಿ ಅಂದರೆ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹಳ್ಳಿ ಹೈದ ಹನುಮಂತು ಟೈಟಲ್ ವಿನ್ನರ್ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ