/newsfirstlive-kannada/media/media_files/2026/02/06/karna-serial-9-2026-02-06-15-52-28.jpg)
ಕರ್ಣ ಟಾಪ್ ಸೀರಿಯಲ್ ಅನ್ನೋ ಪಟ್ಟ ತೆಗೆದುಕೊಂಡು ತುಂಬಾ ದಿನಗಳು ಆಗಿವೆ ಬಿಡಿ. ಈ ಸೀರಿಯಲ್‌ಗೆ ಒಂದು ದೊಡ್ಡ ಫ್ಯಾನ್ಸ್ ಫಾಲೋವರ್ಸ್ ಕ್ರಿಯೇಟ್ ಆಗಿಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ.
ಸದ್ಯ ಸಖತ್ ಟ್ರೇಡಿಂಗ್‌ನಲ್ಲಿರೋದು, ರಮೇಶ ಹಾಗೂ ಕರ್ಣನ ನಡುವಿನ ಸೀನ್‌ಗಳು. ಕರ್ಣ ರಮೇಶನಿಗೆ ಕೊಡ್ತಿರೋ ಕಾಟಕ್ಕೆ ಜನರು ಸಖತ್ ಖುಷಿಯಾಗಿದ್ದಾರೆ. ರಮೇಶನಿಗೆ ಹೀಂಗೇ ಆಗ್ಬೇಕು ಅಂತಾ ಹಿಡಿ ಶಾಪ ಹಾಕ್ತಿದ್ದಾರೆ.
ರಮೇಶ ಪಾತ್ರವನ್ನ ನಿಭಾಯಿಸ್ತಿರೋದು ನಮ್ಮ ಇಂಡಸ್ಟ್ರಿಯ ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣ. ಇಂತಹ ನೆಗೆಟಿವ್ ಪಾತ್ರವನ್ನ ಅವರು ಒಪ್ಪಿಕೊಂಡ ದಿನವೇ ಅವರು ಗೆದ್ದಿದ್ದಾರೆ. ದೊಡ್ಡ ಸ್ಟಾರ್ ಡೈರೆಕ್ಟರ್ ಈ ಪಾತ್ರ ಮಾಡಿರೋದು ನಿಜಕ್ಕೂ ಪ್ರತಿಯೊಬ್ಬರು ಅಪ್ರಿಶಿಯೇಟ್ ಮಾಡ್ಲೇಬೇಕು.
ಇದಕ್ಕೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್; ಟಿ-20 ವಿಶ್ವಕಪ್​ನಿಂದ ಹರ್ಷಿತ್ ರಾಣಾ ಔಟ್!
/filters:format(webp)/newsfirstlive-kannada/media/media_files/2026/02/06/karna-serial-7-2026-02-06-15-52-43.jpg)
ರಮೇಶನ ಪಾತ್ರ ನೋಡಿ ಜನರು ಬೈತಾನೇ ಇರ್ತಾರೆ. ವೀಕ್ಷಕರಿಗೆ ತುಂಬಾ ಕಮೆಂಟ್ ಬರೋದೇ ಈ ಪಾತ್ರಕ್ಕೆ. ಇದಕ್ಕೆಲ್ಲಾ ಟಿ.ಎಸ್.ನಾಗಾಭರಣ ಅವರು ತಲೆಕೆಡಿಸಿಕೊಳ್ತಿಲ್ಲ. ಬದಲಿಗೆ, ತಮ್ಮ ಅನಾರೋಗ್ಯದ ನಡುವೆಯೂ ಈ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಟಿ.ಎಸ್.ನಾಗಭರಣ ಅವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಆಗಾಗೇ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಗಿದ್ದರೂ ಕೂಡ, ಈ ಶೂಟಿಂಗ್‌ಗೆ ಬಂದು, ರಮೇಶನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಒಂದೊಂದು ಬಾರಿ, ಹೀಗೇ ಆಗಿಬಿಡುತ್ತೆ. ಅಂದ್ರೆ, ಜನರು ನೆಗೆಟಿವ್ ಕಾಮೆಂಟ್ ಮಾಡ್ತಿದ್ದರು, ಕಲಾವಿದರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನಟಿಸುತ್ತಿರುತ್ತಾರೆ. ಅವರ ಉದ್ದೇಶ ಒಂದೇ ಪರಾಕಾಯ ಪ್ರವೇಶ ಮಾಡೋದು. ಈ ನಿಟ್ಟಿನಲ್ಲಿ ಟಿ.ಎಸ್.ನಾಗಭರಣ ಸರ್‌ಗೆ ಪ್ರತಿಯೊಬ್ಬ ವೀಕ್ಷಕರು ಹ್ಯಾಟ್ಸಫ್ ಹೇಳಲೇಬೇಕು.
/filters:format(webp)/newsfirstlive-kannada/media/media_files/2026/02/06/karna-serial-8-2026-02-06-15-53-05.jpg)
ವೀಕ್ಷಕರು ಅಷ್ಟೇ... ಪಾತ್ರವನ್ನ ಪಾತ್ರದ ರೀತಿ ನೋಡ್ಬೇಕು. ಆಗ ಪಾತ್ರ ನಿರ್ವಹಿಸುತ್ತಿರುವ ಕಲಾವಿದರಿಗೆ ಯಾವುದೇ ರೀತಿಯ ಹಿಂಜರಿಕೆಯಾಗುವುದಿಲ್ಲ. ಜೊತೆಗೆ ಕಲಾವಿದರ ಮನಸ್ಸಿಗೂ ಘಾಸಿಯಾಗುವುದಿಲ್ಲ. ಕರ್ಣ ಪಾತ್ರ ನಿರ್ವಹಿಸ್ತಿರೋ ಕಿರಣ್‌ರಾಜ್, ನಾಗಭರಣವೂ ಅನಾರೋಗ್ಯವಿದ್ದರೂ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಹ ಕಲಾವಿದರ ಈ ಭಾವನೆಗಳು ಕೂಡ ಕಲಾವಿದರಿಗೆ ಪುಷ್ಠಿ ನೀಡಲಿದೆ. ಹೌದಲ್ವಾ?
ಇದಕ್ಕೂ ಓದಿ: 15 ಸಿಕ್ಸರ್, 15 ಬೌಂಡರಿ! U-19 ವಿಶ್ವಕಪ್ ಫೈನಲ್​ನಲ್ಲಿ ಸೂರ್ಯವಂಶಿ ದಾಖಲೆಯ ಶತಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us