/newsfirstlive-kannada/media/media_files/2025/12/19/bigg-boss-kannada-2025-12-19-16-14-24.jpg)
ಬಿಗ್​ ಬಾಸ್​ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್​​ಗೆ ಕಳುಹಿಸಲಾಗಿದೆ. ಇದು ಹಳೆಯ ವಿಚಾರ! ಇದೀಗ ಸೀಕ್ರೆಟ್ ರೂಮ್​ನ ವಾಸನೆ ಕಾವ್ಯ ಶೈವಗೆ ಬಂದಂತೆ ಆಗಿದೆ.
ಹೌದು, ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿರೋದು ಮನೆಯವರಿಗೆ ಶಾಕಿಂಗ್ ಆಗಿದೆ. ಔಟ್ ಆಗಿರೋದ್ರ ಬಗ್ಗೆ ಈಗಲೂ ಚರ್ಚೆ ಆಗುತ್ತಲೇ ಇದೆ. ಇದೀಗ ಕಾವ್ಯಗೆ ಡೌಟ್ ಬಂದಿದ್ದು, ಅವರಿಬ್ಬರನ್ನು ಸೀಕ್ರೆಟ್ ರೂಮ್​ಗೆ ಕಳುಹಿಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಧನುಷ್, ರಾಶಿಕಾ ಶೆಟ್ಟಿ ಜೊತೆ ಗಾರ್ಡನ್ ಏರಿಯಾದಲ್ಲಿ ಕೂತು ಮಾತನ್ನಾಡುವ ವೇಳೆ ಸೀಕ್ರೆಟ್ ರೂಮ್​ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ನನಗೆ ಅನಿಸುತ್ತೆ, ಧ್ರುವಂತ್ ಹಾಗೂ ರಕ್ಷಿತಾ ಮನೆಯಿಂದ ಹೊರಗೆ ಹೋಗಿಲ್ಲ. ಯಾಕೆ ಅವರನ್ನು ಸೀಕ್ರೆಟ್ ರೂಮ್​ಗೆ ಕಳುಹಿಸಿರಬಹುದು ಅನಿಸುತ್ತಿದೆ ಅಂದರೆ.. ಅಲ್ಲಿಗೆ ಕಳುಹಿಸಿದಾಗ ನಾವು ಇಲ್ಲಿ ಮಾತನ್ನಾಡೋದನ್ನು ಅವರಿಗೆ ತೋರಿಸುತ್ತಾರೆ.
ನಾವು ಮಾತನ್ನಾಡುವ ಎಕ್ಸ್​ಪ್ರೆಷನ್​​ಗಳನ್ನ ಎಕ್ಸಾಸಿರೇಟ್ ಮಾಡಿ ತೋರಿಸೋದೇ ಅವರಿಬ್ಬರು. ಅವರಿಬ್ಬರು ಈ ಮನೆಯಲ್ಲಿ ಜಾಸ್ತಿ ಎಕ್ಸ್​ಪ್ರೆಷನ್ ಕೊಡ್ತಿದ್ದರು. ಹಿಂದೆ ಪ್ರಥಮ್ ಇದ್ದಾಗ, ಬಿಗ್​ ಬಾಸ್ ಮನೆಯ ವಿಡಿಯೋ ತೋರಿಸಿದಾಗ, ಅದನ್ನು ನೋಡಿ ಅವರು ಕೌಂಟರ್ ಕೊಡುತ್ತಿದ್ದರು. ಅದು ತುಂಬಾನೇ ಫನ್ನಿಯಾಗಿತ್ತು. ರಕ್ಷಿತಾ ಎಂಟರ್ಟೈನಿಂಗ್ ಆಗಿ ಮಾಡ್ತಾಳೆ ಅಲ್ವಾ ಅನ್ನೋ ಮೂಲಕ ಅನುಮಾನ ಹೊರ ಹಾಕಿದ್ದಾರೆ.
Kavya is too smart 👌She decoded the secret room details no AV happened and an unexpected double elimination.
— Kumar🐉🀄 (@Kumaraliaskumar) December 19, 2025
And they both imitate our expressions in the secret room 😄#BBK12pic.twitter.com/lRXRmzryJG
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us