/newsfirstlive-kannada/media/media_files/2025/10/14/gilli-nata-kavya-2025-10-14-11-32-56.jpg)
Photograph: (colors kannada)
19 ಸದಸ್ಯರೊಂದಿಗೆ ಆರಂಭವಾದ ಬಿಗ್​ಬಾಸ್​ ಸೀಸನ್ 12 ಈಗ ಮೊದಲನೇ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಕಳೆದ 2 ವಾರಗಳಿಂದ ಜಂಟಿಗಳಾಗಿ ಜೀವಿಸಿದ್ದ ಸದಸ್ಯರಿಗೆ ಬಿಗ್​ ಬಾಸ್​ ನಿನ್ನೆ ಖುಷಿ ವಿಚಾರವನ್ನ ಹೇಳಿದ್ದಾರೆ. ಪರಿಚಯವೇ ಇಲ್ಲದವರ ಜೊತೆಯಾಗಿ ಇಷ್ಟಾನೋ ಕಷ್ಟಾನೋ ಒಟ್ಟಿಗಿದ್ದ ಜೋಡಿಗಳನ್ನ ಬಂಧನದಿಂದ ಮುಕ್ತಿಗೊಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/14/bbk-12-2025-10-14-11-35-40.jpg)
ಇಬ್ಬರ ಕೈಗೆ ಕಟ್ಟಿದ್ದ ಹಗ್ಗವನ್ನ ಕಟ್ ಮಾಡುವ ಮುನ್ನ ಜೋಡಿಗಳು ಜಂಟಿತನದಿಂದ ವೈಯಕ್ತಿಕ ಆಟಕ್ಕೆ ಆದ ಕನಿಷ್ಠ ಒಂದು ಅಡಚಣೆ & ಕನಿಷ್ಠ ಒಂದು ಒಳಿತನ್ನ ಹೇಳಬೇಕು. ಬಳಿಕ ಮಾಸ್ಕ್ ಹಾಕಿದ ವ್ಯಕ್ತಿಯೊಬ್ಬರು ಬಂದು ಜಂಟಿಗಳಿಗೆ ಕಟ್ಟಿದ್ದ ಹಗ್ಗವನ್ನ ಕಟ್ ಮಾಡಿ ಸಂಕೋಲೆಯಿಂದ ಮುಕ್ತಿಗೊಳಿಸುತ್ತಾರೆ. ಈ ವೇಳೆ ಕಾವ್ಯಾ ಗಿಲ್ಲಿ ಇಬ್ಬರೂ ಮಾತನಾಡುತ್ತಾ ಭಾವುಕರಾಗಿದ್ದಾರೆ.
/filters:format(webp)/newsfirstlive-kannada/media/media_files/2025/10/14/bigg-boss-kavya-2025-10-14-11-35-52.jpg)
ಮೊದಲು ಮಾತು ಆರಂಭಿಸಿದ ಕಾವ್ಯಾ ಜಂಟಿಯಾಗಿ ಮನೆಗೆ ಹೋಗ್ತೀವಿ ಆದ್ರೆ ಒಳಗೆ ವೈಯಕ್ತಿಕವಾಗಿಯೇ ಆಟ ಆಡ್ತೀವಿ ಅಂದ್ಕೊಂಡಿದ್ದೆ. ಗಿಲ್ಲಿಯಿಂದ ನನ್ಗೆ ಯಾವುದೇ ತೊಂದರೆ ಆಗಿಲ್ಲ. ಆದ್ರೆ ಗಿಲ್ಲಿಯ ಹೈಪರ್ ಆ್ಯಕ್ಟಿವ್​ನೆಸ್​ಯಿಂದ, & ಅವನು ಇರುವ ರೀತಿಯಿಂದ ನಾನು ವೈಯಕ್ತಿಕವಾಗಿ ಆಗಿ ಹೇಗೆ ಇದೀನಿ ಅನ್ನೋದು ಹೊರಗಡೆ ಕಾಣಿಸ್ತಿಲ್ಲ ಅನ್ನಿಸುತ್ತಿದೆ.
/filters:format(webp)/newsfirstlive-kannada/media/media_files/2025/10/14/gilli-nata-2025-10-14-11-36-09.jpg)
ಆದರೆ ಗಿಲ್ಲಿಯೊಂದಿಗೆ ಇರುವುದು ನನಗೆ ತುಂಬಾ ಅಡ್ವಾಂಟೇಜಸ್ ಇದೆ. ಗಿಲ್ಲಿಯಿಂದಾಗಿ ಬಿಗ್​ಬಾಸ್​ ಮನೆಯಲ್ಲಿ ನಾನು ತುಂಬಾ ಖುಷಿಯಾಗಿ ಇದೀನಿ. ಸಿಕ್ಕಾಪಟ್ಟೆ ನಗಿಸುತ್ತಾನೆ, ಖುಷಿಯಾಗಿ ನೋಡ್ಕೊಳ್ತಾನೆ, & ಹುಷಾರ್ ಇಲ್ಲದೆ ಇದ್ದಾಗ ನನ್ನನ್ನ ಕೇರ್ ಮಾಡ್ತಾನೆ. ನನ್ನ ಕಸೀನ್ಸ್ ವೈಬ್ ಕೊಡ್ತಾನೆ ಗಿಲ್ಲಿ ಇವನಿಂದ ಮನೆಯನ್ನ ಸ್ವಲ್ಪ ಮರೆತಿದ್ದೀನಿ. ಜಂಟಿ ನನ್ಗೆ ಕಷ್ಟ ಆಗದೆ ಇರೋದಕ್ಕೆ ಗಿಲ್ಲಿಯೇ ಕಾರಣ ಎಂದು ಕಾವ್ಯಾ ಭಾವುಕರಾಗಿದ್ದಾರೆ.
/filters:format(webp)/newsfirstlive-kannada/media/media_files/2025/10/14/bigg-boss-gilli-2025-10-14-11-36-27.jpg)
ಇನ್ನು ನನ್ಗೆ ಹುಡುಗಿಯರು ಅಂದ್ರೆ ನಾಚಿಕೆ, ಸಂಕೋಚ. ಅವರೊಂದಿಗೆ ಮಾತನಾಡನ ಭಯ ಪಡ್ತಿದ್ದೆ. ಆದ್ರೆ ಜಂಟಿಯಾಗಿ ಇರೋದ್ರಿಂದ ನನ್ಗೆ ಎಲ್ಲರ ಪರಿಚಯವೂ ಆಯ್ತು. ಕಣ್ಣು, ಕೂದಲು, ತುಟಿ ಎಲ್ಲಾದಕ್ಕೂ ಒಂದೊಂದು ಪ್ರಾಡಕ್ಟ್ ಯೂಸ್ ಮಾಡ್ತಾರೆ ಅನ್ನೋದು ಕಾವ್ಯನಿಂದ ಗೊತ್ತಾಯ್ತು. ಖುಷಿಯವ ವಿಚಾರ ಏನಂದ್ರೆ ಇಲ್ಲಿಂದ ಆಚೆ ಹೋದ್ಮೇಲೆ ಏನು ಕೆಲಸ ಇಲ್ಲ ಅಂದ್ರು ನಾನು ಮೇಕಪ್ ಮ್ಯಾನ್ ಆಗಿಯಾದ್ರೂ ಜೀವನ ಮಾಡ್ತೀನಿ ಎನ್ನುವ ಧೈರ್ಯ ಬಂದಿದೆ ನನಗೆ ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/10/14/bigg-boss-kavya-gilli-2025-10-14-11-36-42.jpg)
ಜಗಳ ಆದಾಗ ಕಾವ್ಯಾ ನನ್ನ ಪರವಾಗಿ ನಿಲ್ತಿದ್ರು, ಜಂಟಿ ಅಂದ್ರೆ ಬರಿ ಮಾತಿಗಲ್ಲ ಅದೇ ರೀತಿ ಎಲ್ಲದಕ್ಕೂ ಜೊತೆಯಾಗಿ ನಿಲ್ತಾರೆ ಅನ್ನುವ ಖುಷಿಯಾಯ್ತು. ಡಿಸ್ ಅಡ್ವಾಂಟೇಜ್ ಅಂದ್ರೆ ಕಾವ್ಯಾನ ಕಣ್ಣು ಅಂದ್ರೆ ನನ್ಗೆ ಸಖತ್ ಭಯ. ದಂಡು ದಾಳಿಗೆ ಹೆದರದ ನಾನು ಕಾವ್ಯಾನ ಕಣ್ಣಿಗೆ ಭಯ ಪಡ್ತೀನಿ. ಇವಳ ಒಂದು ಲುಕ್ಕಿಗೆ ನಾನು ಮಾತು ನಿಲ್ಲಿಸುತ್ತಿದ್ದೆ. ಫಸ್ಟ್ ಟೈಮ್ ಒಂದು ಹುಡುಗಿಯ ಕಣ್ಣು ನೋಡಿ ಭಯ ಪಟ್ಟಿದ್ದೀನಿ.
/filters:format(webp)/newsfirstlive-kannada/media/media_files/2025/10/14/bbk-gilli-nata-2025-10-14-11-36-54.jpg)
ನೀನು ಸೋಲ್ತಿರೋದನ್ನ ನನ್ಗೆ ನೋಡಕ್ಕಾಗಲ್ಲ. ನಿನ್ನ ಗೆಲುವನ್ನ ನೋಡಿ ಸಂಭ್ರಮಿಸೋನೂ ನಾನೇ, ನಿನ್ನ ಸೋಲನ್ನ ನೋಡಿ ನೋವು ಅನುಭವಿಸೋನೂ ನಾನೇ. ನೀನು ಯಾವತ್ತೂ ಸೊಲ್ಬಾರ್ದು ಅನ್ನೋದೇ ನನ್ನಾಸೆ ಎಂದು ಕಾವ್ಯಾಗೆ ಗಿಲ್ಲಿ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಜಂಟತನದಿಂದ ಹೊರ ಬಂದಿದ್ದಕ್ಕೆ ಬೇಜಾರಲ್ಲಿದ್ದ ಗಿಲ್ಲಿಗೆ ಅಳ್ಬೇಡ ಎಂದು ಮನೆಯವರು ಸಮಾಧಾನ ಮಾಡಿದ್ದಾರೆ.