/newsfirstlive-kannada/media/media_files/2025/12/07/kavya-shaiv-2025-12-07-16-19-58.jpg)
ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ಇತರೆ ಸ್ಪರ್ಧಿಗಳಿಗೆ ಕೊಡ್ತಿರುವ ರೋದನೆ ಹೆಚ್ಚಾಗಿದೆ. ಇಷ್ಟು ದಿನ ಗಿಲ್ಲಿ ಪರ ನಿಂತಿದ್ದ ಕಾವ್ಯ ಶೈವ ಕೂಡ ತಿರುಗಿ ಬಿದ್ದಿದ್ದಾರೆ. ಕಿಚ್ಚನ ಎದುರಲ್ಲೇ ಕಾವ್ಯ, ಗಿಲ್ಲಿಗೆ ಬಿಗ್ ಶಾಕ್ ನೀಡಿದ್ದಾರೆ.
ಇವತ್ತಿನ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್, ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆ ನೀಡವಾಗ ಪ್ರಶ್ನೆ ಕೇಳಿದ್ದಾರೆ. ಒಬ್ಬರು ನನ್ನ ಈ ಜರ್ನಿಯಲ್ಲಿ ಲ್ಯಾಡರ್ ಆಗಿದ್ದಾರೆ. ಇನ್ನೊಬ್ಬರು ಹಾವು ಆಗಿದ್ದಾರೆ ಅಂದ್ರೆ ನಿಮಗೆ ಯಾರು ಎಂದು ಕೇಳಿದ್ದಾರೆ.
ಈ ವೇಳೆ ರಘು, ಅಶ್ವಿನಿ ಗೌಡ ಸೇರಿ ಬಹುತೇಕ ಸ್ಪರ್ಧಿಗಳು ಗಿಲ್ಲಿ ನನಗೆ ಹಾವು ಆಗಿದ್ದಾರೆ ಎಂದಿದ್ದಾರೆ. ಅಂತೆಯೇ ಕಾವ್ಯ ಕೂಡ ನನ್ನ ಜರ್ನಿಗೆ ಗಿಲ್ಲಿ ಹಾವು ಆಗಿದ್ದಾರೆ ಎಂದಿದ್ದಾರೆ. ಅದಕ್ಕೆ ಕಾರಣ ನೀಡುವ ಕಾವ್ಯ, ನಾನು ಗಿಲ್ಲಿಗೆ ಹಾವಿನ ಸ್ಥಾನ ನೀಡುತ್ತೇನೆ. ನನ್ನ ಕಾವು ಅಂತಾ ರೇಗಿಸೋದು ಆಗಿರಲಿ, ಬೇರೆಯವರ ಕಣ್ಣಿಗೆ ಅದು ಬೇರೆ ಥರಾ ಕಾಣಿಸ್ತಾ ಇದೆ. ನನಗೆ ಅದು ಹರ್ಟ್ ಆಗ್ತಿದೆ ಎಂದು ಹೇಳಿದಾಗ, ಅದನ್ನು ಅರ್ಥ ಮಾಡಿಕೊಂಡು ಸ್ಟಾಪ್ ಮಾಡ್ತಾನೆ ಎಂದು ನಿರೀಕ್ಷೆ ಮಾಡಿದ್ದೆ ಎಂದಿದ್ದಾರೆ. ಇನ್ನೊಂದು ವಿಚಾರ ಅಂದರೆ, ಗಿಲ್ಲಿಯವರು ತಮ್ಮ ಜರ್ನಿಗೆ ಏಣಿ ಆಗಿರೋದು ಕಾವ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುರಿದು ಬಿದ್ದ ಮದ್ವೆ.. ‘ಮದುವೆ ರದ್ದಾಗಿದೆ’ ಎಂದು ಮೌನ ಮುರಿದ ಸ್ಮೃತಿ ಮಂದಾನ
ಕಾವು ಆಟದಲ್ಲಿ ಗಿಲ್ಲಿನೇ ಹಾವಂತೆ...
— Colors Kannada (@ColorsKannada) December 7, 2025
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/xFUp25LFUQ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us