/newsfirstlive-kannada/media/media_files/2025/10/25/jahnvi-1-2025-10-25-22-48-48.jpg)
ಬಿಗ್​ಬಾಸ್ ಮನೆಯಲ್ಲಿ ಜಾಹ್ನವಿ (Jahnvi) ಏನೂ ಆಡುತ್ತಿಲ್ಲ. ಬರೀ ಅಶ್ವಿನಿ ಹಿಂದೆ ಸುತ್ತುತ್ತಿದ್ದಾರೆ. ಮಾತು ಎತ್ತಿದ್ರೆ ಅಶ್ವಿನಿ, ಅಶ್ವಿನಿ ಎನ್ನುತ್ತಾರೆ ಅಂತಾ ವೀಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ವ್ಯಕ್ತಪಡಿಸ್ತಿದ್ದರು. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಸೂಕ್ಷ್ಮವಾಗಿ ಜಾಹ್ನವಿಯನ್ನು ಎಚ್ಚರಿಸಿದ್ದಾರೆ.
ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಜಾಹ್ನವಿ ಅಭಿಪ್ರಾಯ ತಿಳಿದುಕೊಳ್ಳಲು ಸುದೀಪ್ ಪ್ರಶ್ನೆ ಮಾಡಿದರು. ಈ ವೇಳೆ ಜಾಹ್ನವಿ, ಅಶ್ವಿನಿ ವಿಚಾರ ಪ್ರಸ್ತಾಪಿಸಿ ಮಾತನ್ನಾಡಲು ಮುಂದುವರಿಸಿದರು. ಆಗ ಸುದೀಪ್, ಮೇಡಂ ಖಂಡಿತ ತಪ್ಪು ತಿಳಿದುಕೊಳ್ಳಬೇಡಿ. ನೀವು ಮನೆಯಲ್ಲಿ ಕಳೆದು ಹೋಗಿದ್ದೀರಿ. ನೀವು ಯಾವಾಗಲೂ ಅಶ್ವಿನಿ, ಅಶ್ವಿನಿ ಎನ್ನುತ್ತೀರಿ. ನಿಮ್ಮ ಬಾಯಿಂದಲೇ ಅವರ ಬಗ್ಗೆ ಪದೇ ಪದೆ ಬರುತ್ತೆ. ಈ ಮನೆಯಲ್ಲಿ ನೀವು ಎಲ್ಲಿದ್ದೀರಿ..? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಹೋಂ ಸ್ಟೇ ಸ್ನಾನದ ಗೃಹದಲ್ಲಿ ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟ ಯುವತಿ.. ಅಸಲಿಗೆ ಆಗಿದ್ದೇನು?
ಎಲ್ಲರೂ ಅಶ್ವಿನಿ ಅವರನ್ನು ಚೂಸ್ ಮಾಡ್ತಿದ್ದಾರೆ ಅಂದರೆ, ಇಲ್ಲಿ ನೀವು ಲೆಕ್ಕಕ್ಕೇ ಇಲ್ಲ ಎಂದರ್ಥ ಅಲ್ಲವೇ? ಹೊರಗಡೆ ಏನು ಇದೆಯೋ? ಅದು ಮನೆಯೊಳಗೆ ಇರೋ ವಿಚಾರವೇ. ಅದು ಬಿಟ್ಟು ಬೇರೆ ಬರಲ್ಲ. ನೀವು ಹೇಗೆ ಇದ್ದೀರೋ ಹಾಗೆ ಕಾಣಿಸ್ತೀರಿ. ಏನೂ ಕಾಣಿಸಲ್ವೋ? ಅದು ಹೊರಗಡೆ, ಒಳಗಡೆ ಇರೋದಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us