/newsfirstlive-kannada/media/media_files/2025/09/11/lakshmi-nivasa-2025-09-11-16-09-24.jpg)
ಲಕ್ಷ್ಮೀ ನಿವಾಸ ಧಾರಾವಾಹಿಯ ಬಹಳ ಮುಖ್ಯವಾದ ಪಾತ್ರ ವಿಶ್ವ. ಜಾನು-ವಿಶ್ವ ಸ್ನೇಹಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಈ ಬಗ್ಗೆ ಈಗ ಹೇಳೋಕೆ ಕಾರಣ ವಿಶ್ವ ಪಾತ್ರ ಬದಲಾಗಿದೆ. ಹಳೆ ವಿಶ್ವ ಬದಲಾಗಿದ್ದಾರೆ
ಹೌದು, ವಿಶ್ವ ಪಾತ್ರಕ್ಕೆ ನಕುಲ್ ಶರ್ಮಾ ರಿಪ್ಲೇಸ್ ಆಗಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಪಾತ್ರದಲ್ಲಿ ನಟಿಸಿದ್ದ ನಕುಲ್ಗೆ ವಿಶ್ವ ಪಾತ್ರ ಒಲಿದಿದೆ. ಶ್ರೀರಸ್ತು ಶುಭಮಸ್ತು ಮುಕ್ತಾಯವಾಗ್ತಿದ್ದಂಗೆ ನಕುಲ್ ಶರ್ಮಾ ಲಕ್ಷ್ಮೀ ನಿವಾಸ ಧಾರಾವಾಹಿಗೆ ಎಂಟ್ರಿಕೊಟ್ಟಿದ್ದಾರೆ.
ಪಾತ್ರ ಬದಲಾವಣೆಗೆ ಕಾರಣವೇನು?
ಅಷ್ಟಕ್ಕೂ ಹಳೇ ವಿಶ್ವ ಯಾಕೆ ಬದಲಾದ್ರು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಈಗಾಗ್ಲೇ ನಾವೇ ಮಾಹಿತಿ ನೀಡಿದಂತೆ ವಿಶ್ವ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಭವಿಷ್ ಪೂರ್ಣ ಪ್ರಮಾಣದ ನಾಯಕನಾಗಿ ಲಾಂಚ್ ಆಗ್ತಿದ್ದಾರೆ. ಕಲರ್ಸ್ ಕನ್ನಡದ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಹಾಗೂ ವಿಶ್ವ ಜೋಡಿ ಆಗಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಎರಡೂ ವಾಹಿನಿಯಲ್ಲೂ ಲೀಡ್ ಆಗಿ ಕಾಣಿಸಿಕೊಳ್ಳೋಕೆ ಸಾಧ್ಯಯಿಲ್ಲ. ಇದೇ ಕಾರಣಕ್ಕೆ ಲಕ್ಷ್ಮೀ ನಿವಾಸ ವಿಶ್ವ ಪಾತ್ರದಿಂದ ಹೊರಬಂದಿರೋ ನಟ, ಹೊಸ ಕನಸಿನೊಂದಿಗೆ ಶ್ರೀಗಂಧದ ಗುಡಿ ಜರ್ನಿ ಶುರುಮಾಡಿದ್ದಾರೆ.
ಯಾವ್ದೇ ಮುಖ್ಯ ಪಾತ್ರ ಬದಲಾದ್ರು ವೀಕ್ಷಕರಿಗೆ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ. ಸದ್ಯ ವಿಶ್ವ ಪಾತ್ರವನ್ನ ಪ್ರೀತಿಸೋ ವೀಕ್ಷಕರಿಗೂ ಈ ಬದಲಾವಣೆ ಒಪ್ಕೋಳ್ಳಿಕೆ ಆಗ್ತಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಬೇಸರವನ್ನ ಹೊರ ಹಾಕ್ತಿದ್ದಾರೆ.
ಇದನ್ನೂ ಓದಿ : ನೀವು ಒಳ್ಳೆಯ ವ್ಯಕ್ತಿ ಎಂದು ಯಾರೂ ಕೆಲಸ ಕೊಡಲ್ಲ, ಅವರಿಗೆ ನನ್ನ ಅಗತ್ಯ ಇರುತ್ತೆ ಎಂದ ನಟಿ ತಮನ್ನಾ ಭಾಟಿಯಾ