/newsfirstlive-kannada/media/media_files/2025/10/15/big-boss-kavya-shaiva-2025-10-15-12-24-20.jpg)
ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಾ
ಈ ವಾರ ನಡೆಯಲಿರುವ ಬಿಗ್‌ಬಾಸ್‌ನ ಮೊದಲ ಗ್ರ್ಯಾಂಡ್ ಫಿನಾಲೆಗೆ ಇನ್ನೋರ್ವ ಫೈನಲಿಸ್ಟ್‌ನ್ನು ಸೆಲೆಕ್ಟ್ ಮಾಡೋ ಟಾಸ್ಕ್‌ಗಳು ಆರಂಭವಾಗಿವೆ. ರಾಶಿಕಾ ಹಾಗೂ ಕಾವ್ಯ ಇಲ್ಲಿ ಕಂಟೆಂಡರ್‌ಗಳಾಗಿದ್ದು, ಕಾವ್ಯಗೆ ಮನೆಯಲ್ಲಿ ಎಲ್ಲರ ಸಪೋರ್ಟ್ ಇದ್ರೂ ಆಟದಿಂದಲೇ ಔಟ್ ಆಗಿದ್ದಾರೆ. ಕಾವ್ಯಾ ಔಟ್ ಆಗಿದ್ದು ಏಕೆ ಎಂಬುದೇ ಇಂಟರೆಸ್ಟಿಂಗ್.
ಬಿಗ್ ಬಾಸ್ ಹೌಸ್ ನಲ್ಲಿ ಈಗಾಗಲೇ ನಾಲ್ಕು ಮಂದಿ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಇನ್ನೂ ಒಬ್ಬರನ್ನು ಫೈನಲಿಸ್ಟ್ ಆಗಿ ಆಯ್ಕೆ ಮಾಡಲು ಬಿಗ್ ಬಾಸ್ ಅವಕಾಶ ನೀಡಿದ್ದು, ಟಾಸ್ಕ್ ಪೂರೈಸಿದವರನ್ನು ಫೈನಲಿಸ್ಟ್ ಆಗಿ ಆಯ್ಕೆ ಮಾಡಲು ನಿರ್ಧರಿಸಿದೆ.
ಈ ವಾರದ ಕೊನೆಯ ಫೈನಲಿಸ್ಟ್‌ನ್ನು ಸೆಲೆಕ್ಟ್ ಮಾಡೋ ಟಾಸ್ಕ್‌ನಲ್ಲಿ ಕಾವ್ಯ ಸ್ಟ್ರಾಟಜಿ ಫೇಲ್ ಆಗಿದೆ. ಕಳೆದ ಸಂಚಿಕೆಗಳಲ್ಲಿ ನಡೆದ ಟಾಸ್ಕ್‌ಗಳಲ್ಲಿ ವಿನ್ನರ್‌ಗಳಾದ ರಾಶಿಕಾ ಹಾಗೂ ಕಾವ್ಯ ಕೊನೆಯ ಹಂತಕ್ಕೆ ತಲುಪಿದ್ದು, ಇಲ್ಲಿ ಆಟಕ್ಕೇ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬಿಗ್‌ಬಾಸ್ ನೀಡಿರುವ ಟಾಸ್ಕ್‌ನಂತೆ ಬಾಕ್ಸ್‌ಗಳ ಮೇಲೆ ಡಿಸ್ಕ್ ಇಡಲಾಗಿರುತ್ತೆ. ಇದರ ಒಂದು ಬದಿ ಹಳದಿ, ಇನ್ನೊಂದು ಬದಿ ಹಸಿರು ಬಣ್ಣದ್ದಾಗಿರುತ್ತೆ. ಹಳದಿ ಬಣ್ಣದ ಡ್ರೆಸ್ ತೊಟ್ಟ ಕಾವ್ಯ ಬಾಕ್ಸ್‌ಗಳ ನಡುವೆ ಹಲಗೆ ಇಟ್ಟು ಅದರಲ್ಲಿ ನಡೆಯುತ್ತಾ ಡಿಸ್ಕ್‌ನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತಾ ಹೋದರೆ ಹಸಿರು ಬಣ್ಣದ ಡ್ರೆಸ್ ಹಾಕಿರುವ ರಾಶಿಕಾ ಇದನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತಾ ಹೋಗಬೇಕು. ಕೊನೆಯದಾಗಿ ಬಝಾರ್ ಆದಾಗ ಯಾವ ಬಣ್ಣದ ಡಿಸ್ಕ್‌ಗಳು ಹೆಚ್ಚಾಗಿರುತ್ತದೆಯೋ ಅವರೇ ವಿನ್ನರ್ ಅನಿಸಿಕೊಳ್ಳುತ್ತಾರೆ.
ಈ ಟಾಸ್ಕ್ ಆಡೋಕೆ ಇಬ್ಬರೂ ತಯಾರಾಗಿರುತ್ತಾರೆ. ಜಾಹ್ನವಿ, ಗಿಲ್ಲಿ, ಮಲ್ಲಮ್ಮ, ರಕ್ಷಿತಾ, ಧನುಷ್ ಎಲ್ಲರೂ ಕಾವ್ಯಗೆ ಸಪೋರ್ಟ್ ಆಗಿ ನಿಲ್ಲುತ್ತಾರೆ. ಆರಂಭದಲ್ಲಿ ಆಟ ಸರಿಯಾಗಿಯೇ ಸಾಗುತ್ತಿರುತ್ತದೆ. ಇಬ್ಬರೂ ತಮ್ಮ ಬಣ್ಣಕ್ಕೆ ಡಿಸ್ಕ್ ತಿರುಗಿಸೋ ಕೆಲಸವನ್ನು ಸರಿಯಾಗಿಯೇ ನಿಭಾಯಿಸುತ್ತಿರುತ್ತಾರೆ.
ಇನ್ನೇನು ಸಮಯವಾಗುತ್ತಾ ಬಂದಾಗ ಕಾವ್ಯ ಹೊಸ ಸ್ಟ್ರಾಟಜಿ ಟ್ರೈ ಮಾಡುತ್ತಾರೆ. ಅದೇನೆಂದರೆ ಡಿಸ್ಕ್‌ಗಳು ರಾಶಿಕಾ ಕೈಗೆ ಸಿಗದೇ ಇರುವಂತೆ ಕಲೆಕ್ಟ್ ಮಾಡಿಕೊಂಡು ಹೋಗುವುದು. ಇದರಿಂದ ರಾಶಿಕಾಗೆ ತಿರುಗಿಸಲು ಡಿಸ್ಕೇ ಇಲ್ಲ ಎನ್ನುವ ಪರಿಸ್ಥಿತಿ ಬರುತ್ತದೆ. ಆಟದ ನಿಯಮದ ಪ್ರಕಾರ ಹೀಗೆ ಕಲೆಕ್ಟ್ ಮಾಡುವಂತಿಲ್ಲ. ಹೀಗಾಗಿ ಆಟದ ಉಸ್ತುವಾರಿ ವಹಿಸಿಕೊಂಡಿದ್ದ ದ್ರುವಂತ್ ಕಾವ್ಯ ಆಡುವಂತೆಯೇ ಇಲ್ಲ ಎಂದು ಅವರನ್ನು ಆಟ ಮುಂದುವರಿಸಲು ಅವಕಾಶವನ್ನೇ ನೀಡುವುದಿಲ್ಲ.
ಮನೆಯವರೆಲ್ಲರ ಸಪೋರ್ಟ್ ಇದ್ದರೂ ಕಾವ್ಯ ಮಾತ್ರ ಮೋಸದಾಟವಾಡಿ ಆಟದಿಂದಲೇ ಹೊರಹೋದ್ರಾ? ಕೊನೆಯದಾಗಿ ಉಳಿದ ರಾಶಿಕಾಗೆ ಫೈನಲಿಸ್ಟ್ ಆಗೋ ಚಾನ್ಸ್ ಒಲಿದುಬಂತಾ? ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.