/newsfirstlive-kannada/media/media_files/2025/08/04/mahanati-priyanka-2025-08-04-14-34-36.jpg)
mahanati priyanka: instagram
/newsfirstlive-kannada/media/media_files/2025/08/04/mahanati-priyanka-1-2025-08-04-14-31-37.jpg)
ಕನ್ನಡ ಕಿರುತೆರೆಯಲ್ಲಿ ‘ಮಹಾನಟಿ’ ರಿಯಾಲಿಟಿ ಶೋ ತುಂಬಾ ವಿಭಿನ್ನವಾದದ್ದು. ಮಹಾನಟಿ ಶೋಗೆ ಎಂಟ್ರಿ ಕೊಟ್ಟವರೆಲ್ಲಾ ಸ್ಟಾರ್ ಮಿಂಚುತ್ತಿದ್ದಾರೆ.
/newsfirstlive-kannada/media/media_files/2025/08/04/mahanati-priyanka-2025-08-04-14-30-13.jpg)
ಅಲ್ಲದೇ ಮಹಾನಟಿ ಸೀಸನ್ 1ರಲ್ಲಿ ಭಾಗಿಯಾಗಿದ್ದವರಿಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಸತ್ಯ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸೋ ಅವಕಾಶವನ್ನು ತಂಡ ಕಲ್ಪಿಸಿಕೊಟ್ಟಿತ್ತು.
/newsfirstlive-kannada/media/media_files/2025/08/04/mahanati-priyanka-6-2025-08-04-14-31-37.jpg)
ಇದೇ ಮಹಾನಟಿ ಸೀಸನ್ 1ರ ವಿನ್ನರ್ ಆಗಿದ್ದ ಪ್ರಿಯಾಂಕಾ ಆಚಾರ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ. ಪ್ರಿಯಾಂಕಾ ಆಚಾರ್ ಸಿಂಪಲ್ ಸೀರೆಯನ್ನು ತೊಟ್ಟುಕೊಂಡು ಬ್ಯೂಟಿಫುಲ್ ಆಗಿ ಕಂಗೊಳಿಸಿದ್ದಾರೆ.
/newsfirstlive-kannada/media/media_files/2025/08/04/mahanati-priyanka-4-2025-08-04-14-31-37.jpg)
ಪ್ರಿಯಾಂಕಾ ಆಚಾರ್ ಮಹಾನಟಿ ಶೋನಲ್ಲಿ ಇದ್ದಾಗಲೇ ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಆಫರ್ವೊಂದನ್ನು ನೀಡಿದ್ದರು.
/newsfirstlive-kannada/media/media_files/2025/08/04/mahanati-priyanka-1-2025-08-04-14-31-37.jpg)
ಶೋ ಮುಕ್ತಾಯಗೊಂಡ ಬಳಿಕ ಡೈರೆಕ್ಟರ್ ತರುಣ್ ಸುಧೀರ್ ಹೊಸ ನಾಯಕಿ ನಟಿಯನ್ನು ಪರಿಚಯಿಸಿದ್ದರು. ಅವರದ್ದೇ ನಿರ್ಮಾಣದ ಚಿತ್ರದಲ್ಲಿ ಪ್ರಿಯಾಂಕಾ ಆಚಾರ್ ಹೀರೋಯಿನ್ ನಟಿಸುವುದಕ್ಕೆ ಚಾನ್ಸ್ ಕೊಟ್ಟಿದ್ದರು.
/newsfirstlive-kannada/media/media_files/2025/08/04/mahanati-priyanka-5-2025-08-04-14-31-37.jpg)
ಪುನೀತ್ ರಂಗಸ್ವಾಮಿ ನಿರ್ದೇಶನದ ಎಲುಮಲೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
/newsfirstlive-kannada/media/media_files/2025/08/04/mahanati-priyanka-2-2025-08-04-14-31-37.jpg)
ಈ ಎಲುಮಲೆ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ರಾಣ ಮತ್ತು ಪ್ರಿಯಾಂಕಾ ಆಚಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಿಶೋರ್, ಜಗಪತಿ ಬಾಬು, ಟಿಎಸ್ ನಾಗಾಭರಣ, ಸತ್ಯ ಮತ್ತು ಇತರರು ಸೇರಿದಂತೆ ಬಲವಾದ ಪೋಷಕ ತಾರಾಗಣದಲ್ಲಿದ್ದಾರೆ.
/newsfirstlive-kannada/media/media_files/2025/08/04/mahanati-priyanka-8-2025-08-04-14-31-37.jpg)
ಈ ಸಿನಿಮಾಗೆ ಡಿ. ಇಮ್ಮನ್ ಸಂಗೀತ ಸಂಯೋಜಿಸಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನವಿದೆ. ಈ ಚಿತ್ರವನ್ನು ಕ್ರಿಯೇಟಿವ್ಸ್ ಮತ್ತು ಡಿ ಆರ್ಟೆ ಸ್ಟುಡಿಯೋಸ್ ಬ್ಯಾನರ್ಗಳ ಅಡಿಯಲ್ಲಿ ತರುಣ್ ಕಿಶೋರ್ ಸುಧೀರ್ ಮತ್ತು ಅಟ್ಲಾಂಟಾ ನಾಗೇಂದ್ರ ಜಂಟಿಯಾಗಿ ನಿರ್ಮಿಸಿದ್ದಾರೆ.
/newsfirstlive-kannada/media/media_files/2025/08/04/mahanati-priyanka-7-2025-08-04-14-31-37.jpg)
ಇನ್ನು, ಈ ಎಲುಮಲೆ ಏಕಕಾಲದಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ.
/newsfirstlive-kannada/media/media_files/2025/08/04/mahanati-priyanka-9-2025-08-04-14-31-37.jpg)
ಸದ್ಯ ನಟಿ ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಹೊಸ ಫೋಟೋಸ್ ವೈರಲ್ ಆಗಿವೆ.