/newsfirstlive-kannada/media/media_files/2025/10/09/mandya-ramesh-6-2025-10-09-13-11-53.jpg)
/newsfirstlive-kannada/media/media_files/2025/10/09/mandya-ramesh-1-2025-10-09-13-12-10.jpg)
ಕಲೆಗೆ, ಕಲಾ ಬದುಕಿಗೆ ಯಾವ್ದೇ ಗಡಿಯಿಲ್ಲ. ಅದೆಷ್ಟೋ ಕನ್ನಡದ ಕಲಾವಿದರು ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಜನಪ್ರಿಯರು. ಅದ್ರಲ್ಲೂ ಸಂಸ್ಕೃತಿಕ ನಗರಿ ಮೈಸೂರಿನ ಪ್ರತಿಭೆಗಳೇ ಹೆಚ್ಚು.
/newsfirstlive-kannada/media/media_files/2025/10/09/mandya-ramesh-5-2025-10-09-13-12-30.jpg)
ಮಂಡ್ಯ ರಮೇಶ್ ಅವರ ಗರಡಿಯಲ್ಲಿ ಪಳಗಿದ ರಂಗ ಪ್ರತಿಭೆಗಳು ಸಿನಿಮಾ, ಸೀರಿಯಲ್ನಲ್ಲಿ ಹೆಸರು ಮಾಡ್ತಿದ್ದಾರೆ. ಖುಷಿ ಶಿವು, ಮಹಾನಟಿ ಏಳುಮಲೆ ಸಿನಿಮಾ ನಾಯಕಿ ಪ್ರಿಯಾಂಕಾ, ಮೇಘನಾ ಲೋಕೇಶ್ ಸೇರಿದಂತೆ ಮಂಡ್ಯ ರಮೇಶ್ ಅವರ ಶಿಷ್ಯ ಬಳಗ ದೊಡ್ಡದಿದೆ. ತುಂಬಾ ಸ್ಪೆಷಲ್ ಅನ್ಸಿದ್ದು ಮೇಘನಾ ಲೋಕೇಶ್ ಅವರಿಗೆ ಸರ್ಪೈಸ್ ನೀಡಿರೋದು.
/newsfirstlive-kannada/media/media_files/2025/10/09/mandya-ramesh-4-2025-10-09-13-12-45.jpg)
ಮೇಘನಾ ಲೋಕೇಶ್ ಮೂಲತಹ ಮೈಸೂರಿನವರು. ಮಂಡ್ಯ ರಮೇಶ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಕನ್ನಡದಲ್ಲಿ ಸುಮಾರು 15 ವರ್ಷಗಳ ಹಿಂದೆ ಕಲಾವಿದೆ ಆಗಿ ಗುರುತಿಸಿಕೊಂಡ್ರು. ನಂತರ ಕಾಲಿಟ್ಟಿದ್ದು ತೆಲುಗು ಕಿರುತೆರೆಗೆ. ಅಲ್ಲಿಂದ ಅವ್ರು ಹಿಂದಿರುಗಿ ನೋಡಲೇ ಇಲ್ಲ. ಕಂಪ್ಲೀಟ್ ಆಗಿ ಅಲ್ಲೇ ಸೆಟ್ಲ್ ಆಗಿದ್ದಾರೆ.
/newsfirstlive-kannada/media/media_files/2025/10/09/mandya-ramesh-2-2025-10-09-13-13-02.jpg)
ಸದ್ಯ ಜೀ ತೆಲುಗು ವಾಹಿನಿಯಲ್ಲಿ ಚಾಮಂತಿ ಎಂಬ ಧಾರಾವಾಹಿ ಮಾಡ್ತಿದ್ದಾರೆ. ನೆಚ್ಚಿನ ನಾಯಕಿ ಕ್ಯಾಟಗರಿಯಲ್ಲಿ ಜೀ ತೆಲುಗು ಕುಟುಂಬ ಆವಾರ್ಡ್ಸ್ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಮಂಡ್ಯ ರಮೇಶ್ ಶಿಷ್ಯಗೆ ಸರ್ಪ್ರೈಸ್ ನೀಡಿದ್ರು. ಗುರುಗಳನ್ನ ಕಂಡು ಭಾವುಕರಾದ ಮೇಘನಾ, ಅವಾರ್ಡ್ಕ್ಕಿಂತ ಹೆಚ್ಚು ನನ್ನ ಗುರುಗಳು ಎಂದು ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ.
/newsfirstlive-kannada/media/media_files/2025/10/09/mandya-ramesh-2025-10-09-13-13-20.jpg)
ಶಿಷ್ಯೆಯ ಪ್ರೀತಿ ಕಂಡು ಮಂಡ್ಯ ರಮೇಶ್ ಭಾವುಕರಾಗಿದರು. ತೆಲುಗು ವೇದಿಕೆಯಲ್ಲಿ ಕನ್ನಡದಲ್ಲಿಯೇ ಮಾತ್ನಾಡಿ ಹೆಮ್ಮೆ ವ್ಯಕ್ತ ಪಡೆಸಿದ್ರು. ಈ ಕ್ಷಣವನ್ನ ಅಲ್ಲಿದ್ದ ಅದೇಷ್ಟೋ ತೆಲುಗು, ಕನ್ನಡ ಭಾಷೆಯ ಕಲಾವಿದರು ಆನಂದಿಂದ ಕಣ್ತುಂಬಿಕೊಂಡರು. ಓರ್ವ ಗುರುವಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ? ಸಾರ್ಥಕತೆ ಅಂದ್ರೇ ಇದೇ ಅಲ್ವೇ?