ಉಗ್ರಂ ಮಂಜುಗೆ ಮದುವೆ ಸಂಭ್ರಮ.. ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್‌..!

ಕನ್ನಡ ಚಿತ್ರರಂಗದ ಖ್ಯಾತ ನಟ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 23ರಂದು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

author-image
Ganesh Kerekuli
ugram manju (2)
Advertisment

ಕನ್ನಡ ಚಿತ್ರರಂಗದ ಖ್ಯಾತ ನಟ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 23ರಂದು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ugram manju (8)

ಮದುವೆಗೆ ಎರಡು ದಿನಗಳು ಬಾಕಿ ಇರುವಂತೆಯೇ, ಮಂಜು ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ವಿಜೃಂಭಣೆಯಿಂದ ನಡೆಯಿತು. ಕುಟುಂಬಸ್ಥರು, ಆಪ್ತರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನೆರವೇರಿತು. ಸಂಪ್ರದಾಯದಂತೆ ಮಂಜು ಅವರಿಗೆ ಅರಿಶಿಣ ಲೇಪಿಸಿ, ಶುಭಾಶಯಗಳ ಸುರಿಮಳೆಗೈಯಲಾಯಿತು.

ಇದನ್ನೂ ಓದಿ: 

ugram manju (7)

ಈ ಸಂದರ್ಭದಲ್ಲಿ ಉಗ್ರಂ ಮಂಜು ಸಂತಸದಿಂದ ಕಂಗೊಳಿಸುತ್ತಿದ್ದು, ಮದುವೆಯ ಸಂಭ್ರಮ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತು. ಹಳದಿ ಶಾಸ್ತ್ರದ ವೇಳೆ ಕುಟುಂಬದ ಸದಸ್ಯರ ಜೊತೆಗಿನ ಭಾವನಾತ್ಮಕ ಕ್ಷಣಗಳು ಎಲ್ಲರ ಮನಸೂರೆಗೊಂಡವು. ಸಂಪ್ರದಾಯಬದ್ಧ ವಸ್ತ್ರಧಾರಣೆ, ಸಂಭ್ರಮದ ವಾತಾವರಣ ಮತ್ತು ಆತ್ಮೀಯರು ಕಾರ್ಯಕ್ರಮಕ್ಕೆ ಮೆರುಗು ತಂದರು.

ugram manju (4)

ಇನ್ನು ಸಾಯಿ ಸಂಧ್ಯಾ ಜೊತೆ ಸಪ್ತಪದಿ ತುಳಿಯಲಿರುವ ಉಗ್ರಂ ಮಂಜು, ಮದುವೆ ಸಿದ್ಧತೆಯಲ್ಲಿದ್ದಾರೆ. ಧರ್ಮಸ್ಥಳದ ಪವಿತ್ರ ನೆಲದಲ್ಲಿ ನಡೆಯಲಿರುವ ಈ ವಿವಾಹ ಮಹೋತ್ಸವಕ್ಕೆ ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ.

ugram manju (1)

ಒಟ್ಟಿನಲ್ಲಿ ಉಗ್ರಂ ಮಂಜು ಅವರ ಹಳದಿ ಶಾಸ್ತ್ರದ ಸಂಭ್ರಮ, ಮದುವೆಗೆ ಮುನ್ನದ ಶುಭಾರಂಭವಾಗಿ ಅಭಿಮಾನಿಗಳ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸಂಭ್ರಮದ ಫೋಟೋಗಳು ವೈರಲ್ ಆಗುತ್ತಿವೆ. ಮಂಜು–ಸಾಯಿ ಸಂಧ್ಯಾ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

ಇದನ್ನೂ ಓದಿ: ನಾಗ್ಪುರದಲ್ಲಿ ಇತಿಹಾಸ ಸೃಷ್ಟಿಸಿದ ಐದು ಬಿಗ್ ಸ್ಟಾರ್ಸ್‌.. ಭಾರತಕ್ಕೆ ಭರ್ಜರಿ ಗೆಲುವು

ugram manju (6)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ugram Manju
Advertisment