/newsfirstlive-kannada/media/media_files/2025/08/27/ash-melo3-2025-08-27-18-17-22.jpg)
ಸ್ಯಾಂಡಲ್ವುಡ್ ಸ್ಟಾರ್ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ್ದ ಭೀಮ ಸಿನಿಮಾದಲ್ಲಿ ಅಭಿನಯಿಸಿದ್ದ ಆಶ್ ಮೆಲೋ ಹಳ್ಳಿ ಪವರ್ಗೆ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ನೆಟ್ವರ್ಕ್ ಹೊಸ ಚಾನಲ್ನ ಲಾಂಚ್ ಮಾಡಿದೆ.
ಇದನ್ನೂ ಓದಿ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು
ಜೀ ಪಿಕ್ಚರ್ ಇಂಟ್ರಡ್ಯೂಸ್ ಮಾಡಿದ್ದ ವಾಹಿನಿ, ಅದೇ ವಾಹಿನಿಯನ್ನ ಜೀ ಪವರ್ ಎಂದು ನಾಮಕರಣ ಮಾಡಿದೆ. ಜೋಡಿಹಕ್ಕಿ, ಗೌರಿ, ರಾಜಕುಮಾರಿ, ಸುಭಸ್ಯ ಶೀಘ್ರಂ ಸೇರಿಂದತೆ ನಾಲ್ಕು ಧಾರಾವಾಹಿಗಳನ್ನ ಲಾಂಚ್ ಮಾಡ್ತಿದೆ. ಜೊತೆಗೆ ಧಾರ್ಮಿಕ ಪ್ರಿಯರಿಗೆ 'ಭವಿಷ್ಯ ದರ್ಶನ', ರಿಯಾಲಿಟಿ ಶೋ ಇಷ್ಟ ಪಡೋರಿಗೆ ಹಳ್ಳಿ ಪವರ್ ಶೋನ ಪರಿಚಯಸ್ತಿದೆ.
ಇನ್ನೂ, ಹಳ್ಳಿ ಪವರ್ ಶೋಗೆ ಸಿಟಿ ಹುಡುಗಿರು ಆಯ್ಕೆ ಆಗಿ ಹಳ್ಳಿಗೆ ಕಾಲಿಟ್ಟಾಯ್ತು. ಭರದಿಂದ ಶೂಟಿಂಗ್ ಸಾಗ್ತಿದೆ. ಅಂದ್ಹಾಗೆ, ಹಳ್ಳಿ ಲೈಫ್ಗೆ ಆಯ್ಕೆ ಮಾಡಿಕೊಂಡಿರೋ ಊರು ಸಂಗೋಳ್ಳಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶಪ್ರೇಮಿ ರಾಯಣ್ಣನ ಊರು ಸಂಗೋಳ್ಳಿ ಗ್ರಾಮದಲ್ಲಿ ಸಿಟಿ ಹುಡ್ಗಿರು ಠಿಕಾಣಿ ಹೂಡಿದ್ದಾರೆ. ಅಕುಲ್ ಬಾಲಾಜಿ ಸಾರಥ್ಯದಲ್ಲಿ ಮೂಡಿಬರ್ತಿರೋ ಶೋಗೆ ಶೂಟಿಂಗ್ ಭರದಿಂದ ಶೂಟಿಂಗ್ ನಡೀತಿದೆ.
ಈಗಾಗಲೇ ಹಳ್ಳಿ ಪವರ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಕರ್ನಾಟಕದ ಗ್ರಾಮೀಣ ಜೀವನದ ಸೊಗಸು, ಸಂಸ್ಕೃತಿ ಮತ್ತು ಜನರ ಸಾಮರ್ಥ್ಯವನ್ನು ಆಧುನಿಕ ರಿಯಾಲಿಟಿ ಶೋ ಶೈಲಿಯಲ್ಲಿ ಪ್ರದರ್ಶಿಸುವ ಗುರಿಯನ್ನ ಹೊಂದಿದೆ. ಇದೇ ಶೋಗೆ ಭೀಮ ಸಿನಿಮಾ ಖ್ಯಾತಿಯ ಆಶ್ ಮೆಲೋ ಎಂಟ್ರಿ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್ ಮೂಲಕ ಖ್ಯಾತಿ ಪಡೆದುಕೊಂಡಿರೋ ಆಶ್‌ಗೆ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದ್ದಾರೆ.
ಆಶ್ ಮೆಲೋ ಸ್ಕೈಲರ್ ನಿಜವಾದ ಹೆಸರು ಐಶ್ವರ್ಯಾ. ಇವರು ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟನೆ ಅಷ್ಟೇ ಅಲ್ಲದೇ ಬೀಟ್ ಬಾಕ್ಸಿಂಗ್ ಕೂಡ ಮಾಡುತ್ತಾರೆ. ಸಖತ್ ಸ್ಟೈಲಿಶ್ ಆಗಿರೋ ಐಶ್ವರ್ಯಾ ಇದೀಗ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಳ್ಳಿ ಪವರ್ ಶೋನಲ್ಲಿ ಒಟ್ಟು 15 ಜನ ಸಿಟಿ ಮಾಡ್ರನ್ ಹುಡುಗಿಯರು ಎಂಟ್ರಿ ಕೊಟ್ಟಿದ್ದಾರೆ. ಸಿಟಿ ಮಾಡ್ರನ್ ಹುಡುಗಿಯರಿಗೆ ಹಳ್ಳಿಯಿಂದಲೇ ಲೈವ್ ಆಡಿಷನ್ ನೀಡಲಾಗುವುದು ವಿಶೇಷ. ಹಳ್ಳಿ ಮಂದಿಯ ಲೈವ್ ವೋಟಿಂಗ್ ಮೂಲಕ ಈ ಶೋಗೆ ಮಾಡ್ರನ್ ಹುಡುಗಿಯರು ಎಂಟ್ರಿ ಕೊಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ