/newsfirstlive-kannada/media/media_files/2025/10/07/namrutha-and-bhavya-gowda-2025-10-07-13-55-39.jpg)
/newsfirstlive-kannada/media/media_files/2025/10/07/namrutha-gowda-2025-10-07-13-56-14.jpg)
ಪಾತ್ರಗಳಲ್ಲಿ ವಿಭಿನ್ನ ಪ್ರಯೋಗಗಳನ್ನ ಮಾಡೋಕೆ ಕಲಾವಿದರು ತುಡಿತಿರ್ತಾರೆ. ಆದರೆ ವೀಕ್ಷಕರು ಒಪ್ಪಿಕೊಳ್ಳೋದು ಬಹಳ ಕಷ್ಟ. ಈ ಬಿಸಿ ನಮ್ರತಾ ಅವ್ರಿಗೆ ತಟ್ಟುತ್ತಿದೆ. ನಿತ್ಯಾ ಪಾತ್ರಕ್ಕೆ ವೀಕ್ಷಕರ ಪ್ರತಿಕ್ರಿಯೇ ನೋಡಿ ಬೇಜಾರಾಗಿದ್ದಾರೆ ನಟಿ.
/newsfirstlive-kannada/media/media_files/2025/10/07/karna-serial-2025-10-07-13-59-55.jpg)
ಹೊಸತನಕ್ಕೆ ಸದಾ ತುಡಿಯೋ ಚಲುವೆ ನಮ್ರತಾ ಗೌಡ. ಕರ್ಣ ಧಾರಾವಾಹಿಯ ನಿತ್ಯ ಪಾತ್ರನ ತುಂಬಾ ಪ್ರೀತಿಯಿಂದ ಒಪ್ಕೊಂಡು ಮಾಡ್ತಿದ್ದಾರೆ. ಇನ್ಫ್ಯಾಕ್ಟ್ ಕರ್ಣ ಪ್ರಾಜೆಕ್ಟ್ ಅನೌನ್ಸ್ ಆದಾಗಿಂದ ನಮ್ರತಾಗೋಸ್ಕರ ಒಂದ್ ಪಾತ್ರ ಮೀಸಲಿಟ್ಟಿತ್ತು ವಾಹಿನಿ. ಸೀರಿಯಲ್ ಬರೋದಕ್ಕೆ ತಡವಾಯ್ತು. ಇಡೀ ತಂಡ ಚೆಂಜ್ ಆಯ್ತು. ನಮ್ರತಾ ಅವ್ರು ಮಾತ್ರ ಬದಲಾಗಿಲ್ಲ. ಅವ್ರೇ ಬೇಕು ಅಂತ ಒಪ್ಪಿಸಿ ನಿತ್ಯಾ ಪಾತ್ರ ನೀಡಲಾಯ್ತು. ನಿತ್ಯಾ ಜೋರು. ದೊಡ್ಮಗಳು ಅಂದ್ಮೇಲೆ ಜವಾಬ್ದಾರಿ ಇರೋ ಪಾತ್ರ. ಪಾತ್ರಕ್ಕೆ ತಕ್ಕ ಹಾಗೇ ನಮ್ರತಾ ಅಭಿನಯಿಸ್ತಿದ್ದಾರೆ. ಧಾರಾವಾಹಿ ಕೂಡ ಸೂಪರ್ ಹಿಟ್ ಆಗಿದೆ.
/newsfirstlive-kannada/media/media_files/2025/10/07/bhavya-gowda-2025-10-07-14-00-53.jpg)
ಈ ನಡುವೆ ನಮ್ರತಾ ಹಾಗೂ ಭವ್ಯಾ ಫ್ಯಾನ್ಸ್ ನಡುವೆ ಆಗಾಗ ಚಕಮಕಿ ನಡೀತಾನೆ ಇರುತ್ತೆ. ಕರ್ಣನ ಜೋಡಿ ಯಾರಾಗ್ತಾರೆ ಎಂಬುವುದರ ಬಗ್ಗೆ ಇತ್ತೀಚಿಗೆ ಪ್ರೊಮೋ ಒಂದು ರಿಲೀಸ್ ಮಾಡಿದೆ ವಾಹಿನಿ. ಪ್ರೊಮೋ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ವೀಕ್ಷಕರನ್ನ ತಲುಪಿದೆ.
/newsfirstlive-kannada/media/media_files/2025/10/07/namrutha-gowda-2-2025-10-07-14-01-20.jpg)
ಇದು ಕನ್ನಡ ಧಾರಾವಾಹಿ ಇತಿಹಾಸದಲ್ಲೇ ಹೊಸ ದಾಖಲೆ. ಈ ಪ್ರೊಮೋ ನೋಡಿದ ವೀಕ್ಷಕರು ನಿಧಿ-ಕರ್ಣ ಪ್ರೀತಿಸುತ್ತಿದ್ದು, ಅವ್ರ ಜೋಡಿನೆ ನಮಗೆ ಇಷ್ಟ. ನಿತ್ಯಾ ಬೇಡವೇ ಬೇಡ. ಎಂದು ನಮ್ರತಾ ಅವ್ರಿಗೆ ವಿರುದ್ಧ ಕಿಡಿಕಾರುತಿದ್ದಾರೆ. ಇದು ಪಾತ್ರದ ಬಗೆಗೆ ಅಷ್ಟೇ ಅಲ್ಲದೇ ನಮ್ರತಾ ಅವ್ರ ಹಳೆ ವಿಚಾರಗಳನ್ನ ಇಟ್ಕೊಂಡು ದ್ವೇಷ ತುಂಬಿದ ಪದಗಳನ್ನ ಬಳಸಿ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
/newsfirstlive-kannada/media/media_files/2025/10/07/namrutha-gowda-1-2025-10-07-14-01-39.jpg)
ಈ ಬಗ್ಗೆ ಪ್ರತಿಕ್ರಿಯೆಸಿರೋ ನಮ್ರತಾ, ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳನ್ನ ಮಾಡಿದ್ದೀನಿ. ಕೊಂಚ break ನ ನಂತರ ಕೇಳಿದ ಪಾತ್ರವೇ, ನಿತ್ಯ.. ಕಥೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬ ಹಿಡಿಸಿದ ಪಾತ್ರ ಇದು. ನಿತ್ಯಾ ಬಲಿಷ್ಠಳು, ಸ್ವತಂತ್ರಳು, ಸದಾ ತನಗಿಂತ ಇತರರ ಅಗತ್ಯಗಳನ್ನು ಮೊದಲು ಯೋಚಿಸುವಳು. ಇಷ್ಟೆಲ್ಲಾ layers ಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮಾನಸಾಗಲಿಲ್ಲ ಒಪ್ಪಿಕೊಂಡೆ. ಇತ್ತೀಚೆಗಿನ promo ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ದ್ವೇಷ ಕಂಡು ಬೇಸರವುಂಟಾಗಿದೆ. Its okay, ನಿತ್ಯ ನಾನು ಪೋಷಿಸಿದ ಪಾತ್ರ. ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ. ಅವಳೊಂದಿಗೆ ನಾನಿದ್ದೇನೆ. ನಿತ್ಯಾ ಹಾಗೂ ನನ್ನ ಜೊತೆ ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ ಪ್ರೀತಿಯಿಂದ, ನಿಮ್ಮವಳು ಎಂದು ಪೋಸ್ಟ್ ಮಾಡಿದ್ದಾರೆ.
/newsfirstlive-kannada/media/media_files/2025/10/07/namrutha-gowda-3-2025-10-07-14-03-13.jpg)
ನಿಮ್ಮೆಲ್ಲರ ಪ್ರೀತಿಗೆ ನನ್ನ ಧನ್ಯವಾದ ಹೇಳೋದಕ್ಕೆ ಮಾತುಗಳೇ ಸಲುತಿಲ್ಲ ನಾನು ನಿಮ್ಮೆಲ್ಲಾರಿಗೂ ಸಾದಾ ಚಿರಋಣಿ ಎಂದು ಬೇಸರದ ನುಡಿ ಜೊತೆಗೆ ಸುಧೀರ್ಘ ಪತ್ರ ಬರೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ನಮ್ರತಾ.
/newsfirstlive-kannada/media/media_files/2025/10/07/namrutha-gowda-4-2025-10-07-14-04-06.jpg)
ನಮ್ರತಾ ಬೇಸರಕ್ಕೆ ಅಭಿಮಾನಿಗಳು ಸಾಂತ್ವಾನ ಹೇಳಿದ್ದು. ಇದೊಂದು ಪಾತ್ರ ಅಷ್ಟೆ. ನೀವು ಪಾತ್ರವನ್ನ ಪಾತ್ರವಾಗಿ ಜೀವಿಸುತ್ತಿದ್ದೀರಿ. ಯಾರು ಇರಲಿ ಬಿಡಲಿ, ನಮ್ಮೊಂದಿಗೆ ನಾವ್ ಇದ್ದೀವಿ ಎಂದು ಸಮಾಧಾನದ ನುಡಿಗಳನ್ನ ಹೇಳಿದ್ದಾರೆ.
/newsfirstlive-kannada/media/media_files/2025/10/07/karna-serial-1-2025-10-07-14-04-40.jpg)
ನಿಧಿ ಕರ್ಣ ಜೋಡಿಯ ಕ್ಯೂಟ್ ಕ್ಷಣಗಳನ್ನ ಇಷ್ಟ ಪಟ್ಟಿರೋ ವೀಕ್ಷಕರು ಸಹಜವಾಗಿಯೇ ನಿತ್ಯಾ ಪಾತ್ರ ಅಡ್ಡಿ ಬರಬಾರ್ದು ಎಂದು ನಿತ್ಯಾಳನ್ನ ನಿರಾಕರಿಸಿದ್ದಾರೆ. ಮುಂದೆ ಕಥೆಯಲ್ಲಿ ಸಾಕಷ್ಟು ಟಿಸ್ಟ್ ಇದ್ದು, ನಿಧಿ, ನಿತ್ಯಾ ಹಾಗೂ ಕರ್ಣ ಪ್ರತಿ ಪಾತ್ರವು ಪರಿಸ್ಥಿತಿಗೆ ತಕ್ಕ ಹಾಗೇ ಬದಲಾಗ್ತಾ ಹೋಗುತ್ತವೆ. ಅದಕ್ಕೆ ಹೊಸ ಪ್ರೊಮೋ ಕರ್ಣನ ಅಪ್ಪ ರಮೇಶ್ ಪಾತ್ರವೇ ಸಾಕ್ಷಿ. ನಿತ್ಯಾ-ಕರ್ಣನ ಮದುವೆ ಹಿಂದೆ ರಮೇಶನ ಕೈವಾಡವಿದ್ದು, ಸೀರಿಯಲ್ ನೋಡಿ ಎಂಜಾಯ್ ಮಾಡಿ.