/newsfirstlive-kannada/media/media_files/2025/08/27/drishtibottu-2025-08-27-18-27-10.jpg)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ದೃಷ್ಟಿಬೊಟ್ಟು ಸೀರಿಯಲ್ ವೀಕ್ಷಕರಿಗೆ ಇಷ್ಟವಾಗಿ ಬಿಟ್ಟಿದೆ. ಮೊದ ಮೊದಲು ಮೇಕಿಂಗ್‌ನಿಂದ ಸದ್ದು ಮಾಡಿತ್ತು. ಈಗ ಆ ಸೀರಿಯಲ್‌ನ ಕಥೆಗೆ ಜನರು ಅಡಿಕ್ಟ್ ಆಗಿಬಿಟ್ಟಿದ್ದಾರೆ. ಸೀರಿಯಲ್‌ನ ಒಂದೊಂದು ಸಂಚಿಕೆ ಕೂಡ ವೀಕ್ಷಕರ ಮನ ಮಿಡಿಯುವಂತಿದೆ.
ಇಷ್ಟು ದಿನ ಕೋಪದಲ್ಲೇ ಇರುತ್ತಿದ್ದ ದತ್ತ ಈಗ ಸಂಪೂರ್ಣವಾಗಿ ಲವ್ನಲ್ಲಿ ಬಿದ್ದಿದ್ದಾನೆ. ಎಲ್ಲಿ ನೋಡಿದ್ರು ದೃಷ್ಟಿ, ದೃಷ್ಟಿ. ಆದ್ರೆ, ತಾಳಿ ಕಟ್ಟಿಸಿಕೊಂಡ ಹೆಂಡತಿ ಅಸಲಿ ಬಣ್ಣ ದತ್ತನ ಮುಂದೆ ಬಂದರೆ ಏನಾಗುತ್ತೆ ಅನ್ನೋದು ಅಂತ ಗೊತ್ತಾದ್ರೆ ಏನಾಗುತ್ತೆ ಅನ್ನೋದು ಕೂಡ ವೀಕ್ಷಕರ ಕುತೂಹಲ. ಸದ್ಯ ದತ್ತ ದೃಷ್ಟಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾನೆ. ಆದ್ರೆ, ಇದೇ ಹೊತ್ತಲ್ಲಿ ತನ್ನ ಬಣ್ಣ ಕಪ್ಪು ಅಲ್ಲ, ಬಿಳಿ ಅಂತ ದತ್ತನಿಗೆ ಹೇಳೋದಕ್ಕೆ ಹೊರಟ ದೃಷ್ಟಿಗೆ ದೊಡ್ಡ ಆಘಾತ ಎದುರಾಗಿದೆ. ಇದೇ ವೇಳೆ ಮಳೆಯ ಎಂಟ್ರಿಯಾಗಿದೆ.
ಇದೇ ಮಳೆಯಲ್ಲಿ ದೃಷ್ಟಿಯ ಅಸಲಿ ಬಣ್ಣ ದತ್ತನ ಮುಂದೆ ರಿವೀಲ್ ಆಗಲಿದೆ. ದೃಷ್ಟಿ ಅಸಲಿ ಬಣ್ಣ ನೋಡಿದ ಮೇಲು ದತ್ತ ಒಪ್ಪಿಕೊಳ್ಳುತ್ತಾನಾ ಅಂತ ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ