Advertisment

ಬಿಗ್ ಬಾಸ್ ಶೋ ಸ್ಥಗಿತಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ: ತಹಸೀಲ್ದಾರ್ ರಿಂದ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ !

ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ಈಗ ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.

author-image
Chandramohan
big boss set reveal02

ಬಿಗ್ ಬಾಸ್ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ ಗೆ ಆದೇಶ

Advertisment
  • ಬಿಗ್ ಬಾಸ್ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ ಗೆ ಆದೇಶ
  • ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಆದೇಶ
  • ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಜಾರಿಗೊಳಿಸಿದ ರಾಮನಗರ ತಹಸೀಲ್ದಾರ್‌
  • ಬಿಗ್ ಬಾಸ್-12 ಸೀಸನ್ ಗೆ ಈಗ ಅತಂತ್ರ ಸ್ಥಿತಿ

ಬೆಂಗಳೂರು ಹೊರವಲಯದ ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲಾಗಿದೆ. ರಾಮನಗರ ತಹಸೀಲ್ದಾರ್ ತೇಜಸ್ವಿನಿ ಖುದ್ದಾಗಿ ನಿಂತು ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಹಾಕಿಸಿದ್ದಾರೆ.  ಈ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ನೊಳಗಡೆಯೇ ಬಿಗ್ ಬಾಸ್ ಶೋ ಶೂಟಿಂಗ್ ನಡೆಯುತ್ತಿದೆ.  ಹೀಗಾಗಿ ಬಿಗ್ ಬಾಸ್ ಶೋ ಶೂಟಿಂಗ್ ಸ್ಥಗಿತಕ್ಕೂ ಸೂಚನೆ ನೀಡಲಾಗಿದೆ.  ಜಾಲಿವುಡ್ ಸ್ಟುಡಿಯೋನ ಮೇನ್ ಗೇಟ್‌ ಗೆ ಬೀಗ ಜಡಿದು ಸೀಲ್ ಮಾಡಲಾಗಿದೆ. 
ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ವರ್ಷ ಕೊಟ್ಟಿದ್ದ ನೋಟೀಸ್ ಗಳನ್ನು ತೀವ್ರವಾಗಿ ನಿರ್ಲಕ್ಷಿಸಿತ್ತು. ಹಸಿ ಕಸ, ಒಣ ಕಸವನ್ನು ಬೇರ್ಪಡಿಸುತ್ತಿರಲಿಲ್ಲ. ಜೊತೆಗೆ ನೀರು ಅನ್ನು ಶುದ್ದೀಕರಣ ಮಾಡುತ್ತಿರಲಿಲ್ಲ. ಈ ಬಗ್ಗೆ ಅನೇಕ ಭಾರಿ ನೋಟೀಸ್ ಕೊಟ್ಟರೂ ಜಾಲಿವುಡ್ ಸ್ಟುಡಿಯೋ ಅಂಡ್ ಅಡ್ವೆಂಚರ್ಸ್ ಡೋಂಟ್ ಕೇರ್ ಸ್ವಭಾವ ಪ್ರದರ್ಶಿಸಿದ್ದರು. ಇದರಿಂದಾಗಿ ನಿನ್ನೆ ಮತ್ತೊಮ್ಮೆ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲು ಮಾಲಿನ್ಯ ನಿಯಂತ್ರಣ ಮಾಡಲು ಆದೇಶ ಹೊರಡಿಸಿತ್ತು . ಆ ಆದೇಶವನ್ನು ಇಂದು ಪೊಲೀಸ್ ಭದ್ರತೆ ಪಡೆದು ರಾಮನಗರ ತಹಸೀಲ್ದಾರ್ , ಕಂದಾಯ  ಇಲಾಖೆ ಅಧಿಕಾರಿಗಳು ಜಾರಿಗೊಳಿಸಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment

BIG BOSS SHOW SHOOTING STOPPED
Advertisment
Advertisment
Advertisment