Advertisment

ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ! ಒಂದೇ ವಾರದಲ್ಲಿ ಮತ್ತೆ ರೀಎಂಟ್ರಿ!

ಬಿಗ್ ಬಾಸ್ ಮನೆಯಿಂದ ಮೊದಲ ದಿನವೇ ಎಲಿಮಿನೇಟ್ ಆಗಿದ್ದು ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ. ಈಗ ಅದೇ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ ಬಾಸ್ ಮನೆಗೆ ರೀಎಂಟ್ರಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತನ್ನನ್ನು ಎಲಿಮಿನೇಟ್ ಮಾಡಿದ್ದು ಏಕೆ ಎಂದು ಒಂಟಿ ತಂಡವನ್ನ ಪ್ರಶ್ನಿಸಲು ಸಜ್ಜಾಗಿದ್ದಾರೆ ರಕ್ಷಿತಾ ಶೆಟ್ಟಿ

author-image
Chandramohan
RAKSHITHA_SUDEEP

ಬಿಗ್ ಬಾಸ್ ಮನೆಗೆ ಮತ್ತೆ ರಕ್ಷಿತಾ ಶೆಟ್ಟಿ ರೀಎಂಟ್ರಿ!

Advertisment
  • ಬಿಗ್ ಬಾಸ್ ಮನೆಗೆ ಮತ್ತೆ ರಕ್ಷಿತಾ ಶೆಟ್ಟಿ ರೀಎಂಟ್ರಿ!
  • ಅಂದು ಒಂದು ದಿನದಲ್ಲಿ ಎಲಿಮಿನೇಟ್, ಇಂದು ವಾರದ ಬಳಿಕ ರೀಎಂಟ್ರಿ!
  • ಒಂಟಿ ತಂಡವನ್ನು ಪ್ರಶ್ನಿಸಲು ಸಜ್ಜಾದ ರಕ್ಷಿತಾಶೆಟ್ಟಿ

ಬಿಗ್ ಬಾಸ್ ಹೌಸ್ ನಿಂದ ಮೊದಲ ದಿನವೇ ಎಲಿಮಿನೇಟ್ ಆಗಿದ್ದು ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ. ಬಿಗ್ ಬಾಸ್ ಹೌಸ್ ಗೆ ಹೋದಷ್ಟೇ ವೇಗವಾಗಿ ಮನೆಯಿಂದ ಹೊರಬಂದಿದ್ದರು.  ಆದರೇ, ಈಗ ಬಿಗ್ ಬಾಸ್ ಎಲ್ಲರಿಗೂ ಶಾಕ್ ನೀಡಿದೆ. ಎಲಿಮಿನೇಟ್ ಆಗಿ ಹೊರ ಬಂದಿದ್ದ ಅದೇ ರಕ್ಷಿತಾ ಶೆಟ್ಟಿಯನ್ನು ಮತ್ತೆ ಬಿಗ್ ಬಾಸ್ ಮನೆಯೊಳಕ್ಕೆ ಕಳಿಸಿದೆ. ಕಿಚ್ಚ ಸುದೀಪ್ , ರಕ್ಷಿತಾ ಶೆಟ್ಟಿಯನ್ನು ವೇದಿಕೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಹರುಳು ಉರಿದಂತೆ ಮಾತನಾಡಿದ್ದಾರೆ. ನನ್ನನ್ನು  ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಿದ್ದು ಏಕೆ ಎಂದು ಒಳಗೆ ಹೋಗಿ ಕೇಳುತ್ತೇನೆ. ಕೇವಲ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಬೇಡಿ ಎಂದು ಹೇಳುತ್ತೇನೆ. ನಾನು ಬಿಗ್ ಬಾಸ್ ನಲ್ಲಿ ಚೆನ್ನಾಗಿ ಆಡುತ್ತೇನೆ. ನನ್ನ  ಬಗ್ಗೆ ಅವರಿಗೆಲ್ಲಾ ಗೊತ್ತಿಲ್ಲ ಎಂದು ಗುಡುಗಿದ್ದಾರೆ.  ರಕ್ಷಿತಾ ಶೆಟ್ಟಿ ಜೊತೆಗಿನ ಕಿಚ್ಚನ ಮಾತುಕತೆಯನ್ನು ಕಲರ್ಸ್ ಕನ್ನಡ ಚಾನಲ್ ಬಿಡುಗಡೆ ಮಾಡಿದೆ.

Advertisment


ಈ  ಭಾರಿಯ ಬಿಗ್ ಬಾಸ್ ನಲ್ಲಿ ಟ್ವಿಸ್ಟ್ ಇರುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.  ಎಲಿಮಿನೇಟ್ ಮಾಡಿ ಎಂದು ರಕ್ಷಿತಾ ಶೆಟ್ಟಿಯನ್ನು ಒಂಟಿ ತಂಡದಿಂದ ಎಲಿಮಿನೇಟ್ ಮಾಡಿಸಿ, ಈಗ ಅದೇ ಬಿಗ್ ಬಾಸ್ ರಕ್ಷಿತಾ ಶೆಟ್ಟಿಯನ್ನು ಮನೆಯೊಳಕ್ಕೆ ಕಳಿಸಿ, ಒಂಟಿ ತಂಡದ ಸೀನಿಯರ್ ಗಳಿಗೆ ಟಾಂಗ್ ನೀಡಿದೆ.  
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮಾತನಾಡಿದರೇ, ಜಗಳವೇ ಆಗಲ್ಲ, ಏಕೆಂದರೇ, ರಕ್ಷಿತಾ ಶೆಟ್ಟಿ ಕನ್ನಡ ಯಾರಿಗೂ ಅರ್ಥವೇ ಆಗಲ್ಲ ಎಂದು ನಿರೂಪಕ ಕಿಚ್ಚ ಸುದೀಪ್ ಹೇಳಿದ್ದರು.
ಆದರೇ, ಈಗ ರಕ್ಷಿತಾ ಶೆಟ್ಟಿ ಹೋಗುತ್ತಿರುವ ಧಾಟಿ ನೋಡಿದರೇ, ಜಗಳ ಮಾಡಲೆಂದೇ ಮನೆಯೊಳಗೆ ಹೋಗುತ್ತಿರುವಂತೆ ಭಾಸವಾಗುತ್ತಿದೆ.  ಮುಂದೆ ಏನೇನಾಗುತ್ತೆ ಅನ್ನೋದನ್ನು ಈ ವೀಕೆಂಡ್‌ನ ಕಿಚ್ಚನ ಪಂಚಾಯಿತಿವರೆಗೂ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIG BOSS 12 SEASON
Advertisment
Advertisment
Advertisment