BBK12: ರಕ್ಷಿತಾ ಅಸಲಿ ಆಟ ಶುರು.. ರಾಶಿಕಾ ಜೊತೆಗಿನ ಕಿತ್ತಾಟ ಅಶ್ವಿನಿಗೂ ಅರಗಿಸಿಕೊಳ್ಳಲು ಆಗಲಿಲ್ಲ..!

ಕನ್ನಡ ಗೊತ್ತಿಲ್ಲ, ಬಾಂಬೆ ಇಂದ ಬಂದವಳು ಹೀಗೆ ಏನೇನೋ ಹಣೆಪಟ್ಟಿಗಳ ಜೊತೆಗೆ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ, ಈಗ ತನ್ನ ಆಟ ಆರಂಭಿಸಿದ್ದಾಳೆ. ಇವತ್ತಿನ ಸಂಚಿಕೆಯಲ್ಲಿ ಮತ್ತೊಂದು ಮಾತಿನ ಯುದ್ಧ ಪ್ರಸಾರವಾಗಲಿದೆ.

author-image
Ganesh Kerekuli
Rakshita Shetty (2)
Advertisment

ಕನ್ನಡ ಗೊತ್ತಿಲ್ಲ, ಬಾಂಬೆ ಇಂದ ಬಂದವಳು ಹೀಗೆ ಏನೇನೋ ಹಣೆಪಟ್ಟಿಗಳ ಜೊತೆಗೆ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ, ಈಗ ತನ್ನ ಆಟ ಆರಂಭಿಸಿದ್ದಾಳೆ. 

ಬಿಗ್​ಬಾಸ್​ ಮನೆಯಲ್ಲಿ ಮತ್ತೆ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಹರಿಹಾಯ್ದಿದ್ದಾರೆ. ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಗೆ ಸಂಬಂಧಿಸಿ ಕಲರ್ಸ್ ಕನ್ನಡ ಪ್ರೊಮೋ ರಿಲೀಸ್ ಮಾಡಿದೆ. ಅದರಲ್ಲಿ ರಕ್ಷಿತಾ ಶೆಟ್ಟಿ ಹಾಗೂ ರಾಶಿಕಾ ಶೆಟ್ಟಿ ಮಧ್ಯೆ ಕಿಡಿ ಹೊತ್ತಿಕೊಂಡಿದೆ. 

ರಕ್ಷಿತಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಾಗಿನಿಂದಲೂ ಅಡುಗೆ ಮನೆಯ ಎಲ್ಲ ಕೆಲಸಗಳಲ್ಲೂ ತೊಡಗಿಕೊಂಡಿದ್ದಾಳೆ. ಯಾರು ಅಡುಗೆ ಮಾಡ್ತಾರೋ ಬಿಡ್ತಾರೋ ರಕ್ಷಿತಾ ಮಾತ್ರ ದಿನಾ ಬೆಳಗ್ಗೆದ್ದು ಅಡುಗೆ ಮನಗೆ ಎಂಟ್ರಿಕೊಡ್ತಾಳೆ. ಇದನ್ನೇ ಮಿಸ್‌ಯೂಸ್‌ ಮಾಡಿಕೊಳ್ಳೋಕೆ ಮುಂದಾದವರಿಗೆ ರಕ್ಷಿತಾ ಈಗ ಸರಿಯಾದ ಉತ್ತರ ನೀಡಿದ್ದಾಳೆ. 

ಅಡುಗೆ ಮನೆ ಜವಾಬ್ದಾರಿ ರಕ್ಷಿತಾ ಜೊತೆಗೆ ರಾಶಿಕಾಗೂ ನೀಡಲಾಗಿತ್ತು. ಹಾಗಿದ್ರೂ ರಾಶಿಕಾ ಅಡುಗೆ ಮಾಡುವುದಕ್ಕೆ ಬಂದೇ ಇರುವುದಿಲ್ಲ. ಹೀಗಾಗಿ ರಕ್ಷಿತಾ ಅವಳನ್ನು ಅಡುಗೆ ಮಾಡಲು ಕರೆಯೋಕೆ ಹೋಗ್ತಾಳೆ. ಆದ್ರೆ ರಾಶಿಕಾ ಟಾಸ್ಕ್‌ ಆಡಿ ಕೈ ನೋವಾಗಿರೋದ್ರಿಂದ ಅಡುಗೆ ಮಾಡೋಕೆ ಆಗಲ್ಲ ಅನ್ನೋ ಸಿಲ್ಲಿ ಕಾರಣ ನೀಡುತ್ತಾಳೆ. ಇದರಿಂದ ಸಿಟ್ಟಾಗುವ ರಕ್ಷಿತಾ ರಾಶಿಕಾ ಅಡುಗೆ ಮಾಡೋಕೆ ಬರಲ್ಲ ಅಂತಿದ್ದಾಳೆ ಎಂದು ಮನೆ ಕ್ಯಾಪ್ಟನ್‌ಗೆ ಕಂಪ್ಲೇಂಟ್‌ ಕೂಡ ಮಾಡ್ತಾಳೆ.

ಮಾತ್ರವಲ್ಲ ಅವಳು ಅಡುಗೆ ಮಾಡುವುದಿಲ್ಲ ಅನ್ನುವುದಾದರೆ ತಾನೂ ಅಡುಗೆ ಮಾಡಲ್ಲ ಎಂದು ಗಟ್ಟಿಯಾಗೇ ಹೇಳಿದ್ದಾಳೆ. ರಕ್ಷಿತಾ ಹೀಗೆ ಸಡನ್ನಾಗಿ ಉಲ್ಟಾ ಹೊಡೆದಿದ್ದು ಅಶ್ವಿನಿ ಗೌಡಗೂ ಅರಗಿಸಿಕೊಳ್ಳೋಕೆ ಆಗಿಲ್ಲ. ಅವಳು ರಾಶಿಕಾ ಪರವಾಗಿ ಮಾತನಾಡಲು ನಿಂತಿದ್ರೂ ರಕ್ಷಿತಾ ಕ್ಯಾರೆ ಅಂದಿಲ್ಲ. ರಕ್ಷಿತಾ-ರಾಶಿಕಾ ನಡುವಿನ ಈ ಕದನ ಎಲ್ಲಿಗೆ ತಲುಪುತ್ತೆ ಅನ್ನೋದನ್ನ ಇವತ್ತಿನ ಸಂಚಿಕೆಯಲ್ಲಿ ನೋಡ್ಬೇಕು. 

ಇದನ್ನೂ ಓದಿ:ಬಿಗ್‌ಬಾಸ್ ಮನೆಯಿಂದ ಮಲ್ಲಮ್ಮ ಹೊರಗೆ ಬಂದಿರೋದು ನಿಜವೇ? ಸತ್ಯಾಂಶ ಏನು ಗೊತ್ತಾ ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Rakshita Shetty Bigg boss Rashika Shetty
Advertisment