/newsfirstlive-kannada/media/media_files/2025/09/29/bigg_boss_kichcha-2025-09-29-22-40-46.jpg)
ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತ ಕನ್ನಡದ ನೆಚ್ಚಿನ ರಿಯಾಲಿಟಿ ಶೋ ಬಿಗ್​ ಬಾಸ್​. ಸೆಪ್ಟೆಂಬರ್​ 28 ರಿಂದ ಈ ಶೋ ಆರಂಭವಾಗಿದ್ದು ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಬಿಗ್ ಬಾಸ್ ಓಪನಿಂಗ್ ಪಡೆದ ಒಂದೇ ದಿನ ಮನೆಯಲ್ಲಿದ್ದು ಕರಾವಳಿಯ ಮೂಲದ ಸ್ಪರ್ಧಿ ಎಲಿಮಿನೇಷನ್ ಆಗಿದ್ದಾರೆ.
ಬಿಗ್​ಬಾಸ್​ ಮನೆಗೆ 14ನೇ ಸ್ಪರ್ಧಿಯಾಗಿ ಯೂಟ್ಯೂಬರ್, ಸೋಷಿಯಲ್ ಮೀಡಿಯಾ ಸ್ಟಾರ್ ರಕ್ಷಿತಾ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದರು. ಆದರೆ ಕೇವಲ ಒಂದೇ ದಿನದಲ್ಲಿ ದೊಡ್ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ. ಈ ಬಗ್ಗೆ ಸ್ವತಹ ವಾಹಿನಿಯೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಬಿಗ್ ಬಾಸ್ ಮನೆಯಿಂದ ಸ್ಪರ್ಧಿ ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಿದೆ.
ಬಿಗ್​ ಬಾಸ್ ವೇದಿಕೆಗೆ ಸಂಭ್ರಮದಿಂದಲೇ ತೆರಳಿದ್ದ ರಕ್ಷಿತಾ ಶೆಟ್ಟಿ ಅಷ್ಟೇ ಬೇಸರದಿಂದ ಹೊರ ಬಂದಿದ್ದಾರೆ ಎನ್ನಬಹುದು. ಇನ್ನಷ್ಟು ದಿನ ಮನೆಯಲ್ಲಿದ್ದು ಆಟ ಆಡಬಹುದಿತ್ತು. ಆದರೆ ಅಷ್ಟರೊಳಗೆ ದೊಡ್ಮನೆಯಿಂದ ಗೇಟ್ ಪಾಸ್ ಪಡೆದಿದ್ದಾರೆ. ಇದಕ್ಕೆ ಮನೆಯವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಹೊರ ಹೋಗುವ ಲಿಸ್ಟ್​ನಲ್ಲಿ ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಹಾಗೂ ಸ್ಪಂದನಾ ಈ ಮೂವರು ಇದ್ದರು. ಕೊನೆಗೆ ರಕ್ಷಿತಾರನ್ನ ಎಲಿಮಿನೇಷನ್ ಮಾಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಅಲೆ ಎಬ್ಬಿಸಿದ್ದ ಕರಾವಳಿ ಪ್ರತಿಭೆ ಯುವತಿ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಹೋಗಿದ್ದರು. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಅಡುಗೆ ಬಗ್ಗೆ ಕೇಳಿದ್ದ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಉತ್ತರ ಕೊಟ್ಟಿದ್ದರು. ಮೀನು ಸಾರಿಗೆ ಸಕ್ಕರೆ ಹಾಕ್ತಾರಾ ಎಂದು ಸುದೀಪ್ ಕೇಳಿದ್ದಕ್ಕೆ ರಕ್ಷಿತಾ ತಲೆ ಅಲ್ಲಾಡಿಸಿದ್ದಳು. ಆದರೆ ಈಗ ಮನೆಯಿಂದಲೇ ಔಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ