ಗಣೇಶ ಹಬ್ಬದ ದಿನವೇ ಸಿಹಿ ಸುದ್ದಿ ಕೊಟ್ಟ ರಾಮಾಚಾರಿ ಖ್ಯಾತಿಯ ನಟಿ ಐಶ್ವರ್ಯ ಸಾಲಿಮಠ

ಕನ್ನಡ ಕಿರುತೆರೆ ನಟಿ ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಐಶ್ವರ್ಯ ಸಾಲಿಮಠ. ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳುವ ನಟಿ ಐಶ್ವರ್ಯ ಸಾಲಿಮಠ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

author-image
Veenashree Gangani
Aishwarya Vinay
Advertisment

ಕನ್ನಡ ಕಿರುತೆರೆ ನಟಿ ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಐಶ್ವರ್ಯ ಸಾಲಿಮಠ. ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳುವ ನಟಿ ಐಶ್ವರ್ಯ ಸಾಲಿಮಠ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; PHOTOS

aishwarya vinay

ಹೌದು, ಅಗ್ನಿಸಾಕ್ಷಿ, ರಾಮಾಚಾರಿ ಸೀರಿಯಲ್​ ಮೂಲಕ ಅತಿ ಹೆಚ್ಚು ಫೇಮಸ್ ಆಗಿದ್ದ ನಟಿ ಐಶ್ವರ್ಯ ಸಾಲಿಮಠ ಹಾಗೂ ವಿನಯ್​ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

aishwarya vinay

ಈ ಖುಷಿ ವಿಚಾರವನ್ನು ನಟಿ ಐಶ್ವರ್ಯ ಹಾಗೂ ವಿನಯ್ ಜೋಡಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೈಯಲ್ಲಿ ಪುಟ್ಟ ಗಣೇಶ ಮೂರ್ತಿ ಹಿಡಿದು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ.

aishwarya vinay

ಆ ವಿಡಿಯೋ ಜೊತೆಗೆ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮ ಸಣ್ಣ ರಹಸ್ಯವನ್ನು ಹಂಚಿಕೊಳ್ಳುವ ಸಮಯ. ಈ ವಿಶೇಷ ದಿನದಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. “ನಾವು ಗರ್ಭಿಣಿಯಾಗಿದ್ದೇನೆ”. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನಮಗೆ ಆಶೀರ್ವದಿಸಿದ್ದಾನೆ. ಕೊನೆಗೂ ನಮ್ಮ ಕುಟುಂಬ ಬೆಳೆಯುತ್ತಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ನಮಗೆ ನೀಡಿ ಎಂದು ಬರೆದುಕೊಂಡಿದ್ದಾರೆ. 

aishwarya vinay

ಇನ್ನೂ, ಈ ​ಜೋಡಿ ಒಟ್ಟಾಗಿ ಮಹಾಸತಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದರು. 2022 ರಲ್ಲಿ ಐಶ್ವರ್ಯ ಹಾಗೂ ವಿನಯ್ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು. ನಟಿ ಐಶ್ವರ್ಯ ರಾಮಾಚಾರಿ ಸೀರಿಯಲ್​ನಲ್ಲಿ ವೈಶಾಕ ಪಾತ್ರದಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

actress aishwarya vinay, ramachari serial actress
Advertisment