ಬಿಗ್ ಬಾಸ್ ನಲ್ಲಿ ರಾಶ್‌ ಆದ್ರೂ ರಾಶಿಕಾ : ಅಸುರ ಕಾಕ್ರೋಚ್ ಸುಧೀ ಆದೇಶ ಧಿಕ್ಕರಿಸಿದ ರಾಶಿಕಾ

ಬಿಗ್ ಬಾಸ್ ನಲ್ಲಿ ಅಸುರ ಕಾಕ್ರೋಚ್ ಸುಧೀ ದರ್ಬಾರ್ ಶುರುವಾಗಿದೆ. ತನ್ನ ಒಂಟಿ ತಂಡದ ಸದಸ್ಯರು ಹಾಗೂ ಜಂಟಿ ತಂಡದ ಸದಸ್ಯರ ಮೇಲೆ ಅಧಿಕಾರ ಚಲಾಯಿಸಿ ದರ್ಪ ಮೆರೆಯುತ್ತಿದ್ದಾರೆ. ಎಲ್ಲರೂ ತನ್ನ ಮಾತು ಕೇಳಬೇಕೆಂದು ಕಾಕ್ರೋಚ್ ಸುಧೀ ದರ್ಬಾರ್ ಶುರು ಮಾಡಿದ್ದಾರೆ. ಇದರಿಂದ ರಾಶಿಕಾ, ಱಶ್ ಆಗಿದ್ದಾರೆ.

author-image
Chandramohan
BBK12_MANJU_RASHIKA

ಮಂಜುಭಾಷಿಣಿ- ರಾಶಿಕಾ ಮಧ್ಯೆ ಟಾಕ್ ಫೈಟ್‌

Advertisment
  • ಬಿಗ್ ಬಾಸ್ ನಲ್ಲಿ ರಾಶಿಕಾ ಱಶ್ ಆಗಿ ವರ್ತನೆ
  • ಮಂಜುಭಾಷಿಣಿ- ರಾಶಿಕಾ ಮಧ್ಯೆ ಟಾಕ್ ಫೈಟ್‌
  • ಅಸುರ ರಾಜ ಕಾಕ್ರೋಚ್ ಸುಧೀ ಆದೇಶ ಧಿಕ್ಕರಿಸಿದ ರಾಶಿಕಾ

ಬಿಗ್‌ಬಾಸ್‌ ಮನೆಯಲ್ಲಿ ಅಸುರಾಧಿಪತ್ಯ ಆರಂಭವಾದ ಮೇಲೆ ಅವರ ಮಾತು ಕೇಳಬೇಕಾ ಬೇಡವಾ ಎನ್ನುವ ಪ್ರಶ್ನೆ ಹಲವು ಸ್ಪರ್ಧಿಗಳಲ್ಲಿ ಮೂಡಿದೆ. ಕೆಲವ್ರು ಅಧಿಪತ್ಯವನ್ನು ಒಪ್ಪಿಕೊಂಡಿದ್ರೂ ಅವರ ಆಜ್ಞೆಯನ್ನೆಲ್ಲ ಪಾಲಿಸೋಕೆ ಹಿಂದೇಟು ಹಾಕುತ್ತಿದ್ದಾರೆ. ಇದೇ ರಾಶಿಕಾ- ಮಂಜುಭಾಷಿಣಿ ನಡುವೆ ವೈಮನಸ್ಯಕ್ಕೆ ಕಾರಣವಾಗಿದೆ. 

ತನ್ನನ್ನು ನಾಮಿನೇಟ್‌ ಮಾಡಿದ್ದಾರೆ ಅನ್ನುವ ಕಾರಣಕ್ಕೆನೇ ಅಸುರ ರಾಜ ಕಾಕ್ರೋಚ್‌ ಸುಧಿ ಬಗ್ಗೆ ಅಸಮಾಧಾನ ಹೊಂದಿದ್ದ ರಾಶಿಕಾ ಇದೀಗ ತಮ್ಮ ಮಾತಿನ ಮೂಲಕ, ಅವರ ನಡೆಗಳ ಮೂಲಕ ಅದನ್ನು ನೇರವಾಗಿ ಹೊರಹಾಕುತ್ತಿದ್ದಾರೆ. ಇದು ಮಂಜುಭಾಷಿಣಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 
ರಾಶಿಕಾ ಅಸುರಾಧಿಪತಿಯ ಆಜ್ಞೆಯಂತೆ ಮುಖಕ್ಕೆ ಮೇಕಪ್‌ ಹಾಕಿಕೊಳ್ಳಲು ನಿರಾಕರಿಸಿದ್ದಾರೆ. ಮಂಜುಭಾಷಿಣಿಗೆ ಅಸುರರಾಜನನ್ನು ಎದುರು ಹಾಕಿಕೊಳ್ಳುವುದು ಇಷ್ಟವಿಲ್ಲದಿದ್ದರೂ, ಎಷ್ಟೇ ಕರೆದರೂ ರಾಶಿಕಾ ಬಾರದಿದ್ದುದರಿಂದ ಅವರೂ ಮೇಕಪ್‌ ಹಾಕಿಸಿಕೊಳ್ಳಲು ಆಗಿರಲಿಲ್ಲ. ಇದೇ ಕೋಪದಲ್ಲಿದ್ದ ಮಂಜುಭಾಷಿಣಿ ರಾಶಿಕಾ ವಾಶ್‌ರೂಂಗೆ ಹೋಗಬೇಕು ಎಂದಾಗ ಅವಳೊಂದಿಗೆ ಹೋಗಲು ಒಪ್ಪುವುದೇ ಇಲ್ಲ. ಕೊನೆಗೆ ರಾಶಿಕಾ ಕೈಯ ಬೆಲ್ಟ್‌ ತೆಗೆದು ಹಾಕಿ ಹೋಗುತ್ತಾಳೆ.
ಬಿಗ್‌ಬಾಸ್‌ ನೀಡಿದ್ದ ಮೂಲ ನಿಯಮ ಎಲ್ಲಿ ಉಲ್ಲಂಘನೆಯಾಗುತ್ತದೋ ಎಂದು ಬೆದರುವ ಉಳಿದ ಸ್ಪರ್ಧಿಗಳು ಹೇಗೋ ಮಂಜುಭಾಷಿಣಿಯ ಮನವೊಲಿಸಿ ವಾಶ್‌ರೂಂ ಹತ್ತಿರ ಕರೆದೊಯ್ಯುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ರಾಶಿಕಾ ಮತ್ತೊಮ್ಮೆ ವಾಶ್‌ರೂಂ ಹೋಗಬೇಕು ಎನ್ನುತ್ತಾಳೆ. ಆಗ ಮಂಜುಭಾಷಿಣಿ ಮತ್ತೆ ತಕರಾರು ತೆಗೆಯುತ್ತಾರೆ. ಅಸುರರಾಜನೂ ತಮ್ಮ ಆಜ್ಞೆಯ ವಿನಾ ಹೋಗಬಾರದು ಎಂದಾಗ ರಾಶಿಕಾ ಕೋಪಗೊಂಡು ಅಸುರರಾಜ ಜೊತೆ ಹಾಗೂ  ಮಂಜುಭಾಷಿಣಿಯ ಜೊತೆಗೂ ಗಲಾಟೆ ಮಾಡುತ್ತಾಳೆ.

Manjubhashini_rashika_bigggbosskannada
Photograph: (Colors Kannada)



ಹೀಗೆ ಪರ್ಸನಲ್‌ ವಿಚಾರದಲ್ಲೆಲ್ಲ ಅಧಿಕಾರ ಚಲಾಯಿಸಬಾರದು ಎಂದು ಕೋಪಗೊಂಡು ಮತ್ತೆ ಬೆಲ್ಟ್‌ ತೆಗೆದು ವಾಶ್‌ರೂಂಗೆ ಹೋಗುತ್ತಾಳೆ. ರಾಶಿಕಾಳ ವರ್ತನೆ ಬಗ್ಗೆ ಎಲ್ಲರೂ ಸಿಡಿಮಿಡಿಯಾಗುತ್ತಾರೆ. ಆದರೂ ರಾಶಿಕಾ ಮಾತ್ರ ತನ್ನದು ತಪ್ಪು ಎಂದು ಒಪ್ಪಿಕೊಳ್ಳುವುದಕ್ಕೆ ಸಿದ್ಧವೇ ಇರುವುದಿಲ್ಲ. ರಾಶಿಕಾಗೆ ಅಶ್ವಿನಿಗೌಡ, ಜಾಹ್ನವಿ ಬೆಂಬಲಿಸುತ್ತಾರೆ. ಕೊನೆಗೆ ರಾಶಿಕಾಳದ್ದು, ಓವರ್ ಆ್ಯಕ್ಟಿಂಗ್ ಎಂದು ಜಾಹ್ನವಿ ಹೇಳುತ್ತಾರೆ. ಹಾಗಾದರೇ, ಬೆಂಬಲಿಸೋದು ಬೇಡ ಎಂದು ಸೋಫಾದ ಮೇಲೆ ಕುಳಿತುಕೊಂಡೇ ಅಶ್ವಿನಿಗೌಡ  ಹಾಗೂ ಜಾಹ್ನವಿ ಮಾತನಾಡಿಕೊಳ್ಳುತ್ತಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIG BOSS 12 SEASON
Advertisment