/newsfirstlive-kannada/media/media_files/2025/10/16/bbk12_jahnavi-2025-10-16-22-59-43.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 12 ಆರಂಭವಾಗಿದ್ದು ಎಲ್ಲಿ ಕೇಳಿದರೂ ಶೋನದ್ದೇ ಮಾತು. ಕಳೆದ ಸೀಸನ್​ಗಿಂತ ಈ ಸೀಸನ್ ತುಂಬಾ ಟಿಫರೆಂಟ್ ಎಂದು ಹೇಳಲಾಗುತ್ತಿತ್ತು. ಇದು ನಿಜವಾಗುತ್ತಿದೆ. ಗ್ರ್ಯಾಂಡ್​ ಫಿನಾಲೆಗೆ ಮೊದಲೇ ಒಬ್ಬರು ದೊಡ್ಮನೆಯಿಂದ ಗೇಟ್​ಪಾಸ್ ತಗೊಂತಾರೆ ಎನ್ನಲಾಗಿತ್ತು. ಅದರಂತೆ ಡಾಗ್ ಸತೀಶ್ ಕಡಬಂ ಹೊರ ನಡೆದಿದ್ದಾರೆ.
ಗಾಢ ನಿದ್ರೆಯಲ್ಲಿದ್ದ ಸ್ಪರ್ಧಿಗಳಿಗೆ ಸೈರನ್ ಮೂಲಕ ಎಬ್ಬಿಸಿದ ಬಿಗ್​ಬಾಸ್, ಸ್ಪರ್ಧಿಗಳಿಗೆ ತಮಗೆ ಬೇಡವಾದ ಸ್ಪರ್ಧಿಯನ್ನು ಹೊರಗಾಕಲು ನಾಮಿನೇಷನ್ ಮಾಡಲು ಹೇಳಿದ್ದರು. ಈ ಮೂಲಕ ಬಿಗ್​ಬಾಸ್ ಒಬ್ಬ ಸ್ಪರ್ಧಿಗೆ ಇಂದು ಗೇಟ್​ ಪಾಸ್ ಕೊಡಲು ತೀರ್ಮಾನಿಸಿದ್ದರು. ಅದರಂತೆ ಗ್ರ್ಯಾಂಡ್ ಫಿನಾಲೆಗೂ ಮೊದಲೇ ಮಿಡ್​ ವೀಕ್ ಎಲಿಮಿನೇಷನ್ ನಡೆದಿದ್ದು ಸತೀಶ್ ಕಡಬಂ ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಇದನ್ನೂ ಓದಿ:ಕರುನಾಡ ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ.. ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಮಧ್ಯೆರಾತ್ರಿ ಗಾಢ ನಿದ್ದೆಯಲ್ಲಿದ್ದ ಸ್ಪರ್ಧಿಗಳಿಗೆ ಸೈರನ್ ಕೊಟ್ಟು ಎಬ್ಬಿಸಲಾಗಿತ್ತು. ಅದರಂತೆ ಗ್ರ್ಯಾಂಡ್ ಫಿನಾಲೆಗೆ ಮೊದಲೇ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಇದಕ್ಕಾಗಿ ಸ್ಪರ್ಧಿಗಳು ಯಾರನ್ನು ಮನೆಯಿಂದ ಹೊರಗೆ ಕಳುಹಿಸುತ್ತೀರಾ ಎಂದು ಬಿಗ್ ಬಾಸ್ ಕೇಳಿದ್ದರು. ಇದಕ್ಕೆ ಮನೆಯಲ್ಲಿನ ಬಹುತೇಕ ಮಂದಿ ಸತೀಶ್ ಕಡಬಂ ಹೆಸರನ್ನು ಸೂಚಿಸಿದ್ದರು. ಅದರಂತೆ ಸತೀಶ್ ಆಟ ಮುಗಿಸಿದ್ದಾರೆ.
ಯಾರ ಫೋಟೋ ಬಿಗ್​ ಬಾಸ್ ಮನೆಯ ಮುಖ್ಯದ್ವಾರಕ್ಕೆ ಅತಿ ಸಮೀಪವಾಗಿರುತ್ತದೋ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದು ಬಿಗ್ ಬಾಸ್ ಘೋಷಿಸಿದ್ದರು. ಎಲ್ಲ ಸ್ಪರ್ಧಿಗಳು ತಮ್ಮ ತಮ್ಮ ವಿರೋಧಿಗಳ ಫೋಟೋವನ್ನು ಮುಂದಕ್ಕೆ ತಂದು ಇಟ್ಟಿದ್ದರು. ಆದರೆ ಇದರಲ್ಲಿ ಸತೀಶ್ ಫೋಟೋ ಮುಖ್ಯದ್ವಾರಕ್ಕೆ ಸಮೀಪದಲ್ಲಿ ಇದ್ದಿದ್ದರಿಂದ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ