/newsfirstlive-kannada/media/media_files/2025/08/12/prajna-bhat-2025-08-12-15-48-36.jpg)
/newsfirstlive-kannada/media/media_files/2025/08/12/prajna-bhat3-2025-08-12-15-53-11.jpg)
ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡಿರೋ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ.
/newsfirstlive-kannada/media/media_files/2025/08/12/befunky-design-2025-08-12-15-53-11.jpg)
ಇದೇ ಸೀರಿಯಲ್ನಲ್ಲಿ ಸುಬ್ರಹ್ಮಣ್ಯನ ತಂಗಿ ವರಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರೋ ನಟಿಯ ನಿಜವಾದ ಹೆಸರು ಪ್ರಜ್ಞಾ ಭಟ್.
/newsfirstlive-kannada/media/media_files/2025/08/12/befunky-design2-2025-08-12-15-53-11.jpg)
ಸುಬ್ಬುವಿನ ಮುದ್ದಿನ ತಂಗಿ ವರಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ಪ್ರಜ್ಞಾ ಭಟ್ ನಟನೆಗೆ ವೀಕ್ಷಕರಿಗೆ ಫಿದಾ ಆಗಿದ್ದಾರೆ. ಇದೇ ಮೊದಲ ಬಾರಿಗೆ ನಟಿ ಪ್ರಜ್ಞಾ ಭಟ್ ಜೀ ಕನ್ನಡದಲ್ಲಿ ಅಭಿನಯಿಸಿದ್ದಾರೆ.
/newsfirstlive-kannada/media/media_files/2025/08/12/prajna-bhat2-2025-08-12-15-53-11.jpg)
ಈಗಾಗಲೇ ಹಲವು ಸೀರಿಯಲ್, ಸಿನಿಮಾಗಳಲ್ಲಿ ಪ್ರಜ್ಞಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ನಟಿ ಪ್ರಜ್ಞಾ ಭಟ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯಲ್ಲಿ ಹೀರೋಯಿನ್ ತಂಗಿ ಪಾತ್ರದಲ್ಲಿ ನಟಿಸಿದ್ದರು.
/newsfirstlive-kannada/media/media_files/2025/08/12/prajna-bhat4-2025-08-12-15-53-11.jpg)
ಅಷ್ಟೇ ಅಲ್ಲದೇ ಸ್ಟಾರ್ ಸುವರ್ಣ ವಾಹಿನಿಯ ಪ್ರೇಮ ಲೋಕ, ಪಾಪ ಪಾಂಡು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಒಲವೇ ಮಂದಾರ 2 ಸಿನಿಮಾದಲ್ಲೂ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.
/newsfirstlive-kannada/media/media_files/2025/08/12/prajna-bhat1-2025-08-12-15-53-11.jpg)
ಸದ್ಯ ನಟಿ ಪ್ರಜ್ಞಾ ಭಟ್ ವರಮಹಾಲಕ್ಷ್ಮಿ ಹಬ್ಬದ ದಿನವೇ ಹೊಸದಾಗಿ ಕೆಲಸ ಶುರು ಮಾಡಿದ್ದಾರೆ. ಈ ಖುಷಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/08/12/befunky-design1-2025-08-12-15-53-11.jpg)
ಪ್ರಜ್ಞಾ ಅವರು ಹೊಸದಾಗಿ ಮೇಕಪ್ ಮತ್ತು ಹೇರ್ ಅಕಾಡೆಮಿ ಆರಂಭಿಸಿದ್ದಾರೆ. ಈ ಬಗ್ಗೆ ಇನ್ಸ್ಟಾದಲ್ಲಿ ಬರೆದುಕೊಂಡ ಅವರು, ವರಮಹಾಲಕ್ಷ್ಮಿ ಹಬ್ಬದ ದಿನ ನಮ್ಮ ನೂತನ ಪ್ರಜ್ಞಾ ಮೇಕಪ್ ಮತ್ತು ಹೇರ್ ಅಕಾಡೆಮಿ ಶುಭಾರಂಭಗೊಂಡಿದ್ದು, ಶುಭಹಾರೈಸಿದ ಎಲ್ಲಾ ನಮ್ಮ ಬಂಧು - ಮಿತ್ರರಿಗೂ ಧನ್ಯವಾದಗಳನ್ನು ಕೋರುತ್ತಾ ಇನ್ನು ಮುಂದೆಯೂ ನಿಮ್ಮ ಸಲಹೆ ಸಹಕಾರಗಳನ್ನು ಅಪೇಕ್ಷಿಸುತ್ತೇವೆ ಎಂದಿದ್ದಾರೆ.