/newsfirstlive-kannada/media/media_files/2025/10/14/dhruvantha-and-spandana-2025-10-14-13-09-46.jpg)
ಧ್ರುವಂತ್ ಮತ್ತು ಸ್ಪಂದನಾ
ಬಿಗ್‌ಬಾಸ್ ಮನೆಯಲ್ಲಿ ಜಗಳ ಆಗೋದು ಕಾಮನ್. ಈಗ ಜಗಳ ಆಡಿದೋರು ಕೆಲಕ್ಷಣಗಳಲ್ಲೇ ಒಂದಾಗಿರ್ತಾರೆ. ಆದ್ರೆ ಸ್ಪಂದನಾ ದ್ರುವಂತ್ ಜಗಳ ಒಂದು ಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಅವರನ್ನು ಟಾಸ್ಕ್‌ಗಳಿಂದಲೇ ಹೊರಗಿಡೋ ಮಟ್ಟಕ್ಕೆ ಹೋಗಿದೆ.
ಸ್ಪಂದನಾ ಜೊತೆಗೆ ದ್ರುವಂತ್ ಚೇರ್ ಇಡೋ ವಿಚಾರಕ್ಕೆ ಜೋರು ಜೋರಾಗಿ ಮಾತಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಇದೆಲ್ಲ ಬಿಗ್‌ಬಾಸ್ ಮನೆಯಲ್ಲಿ ಕಾಮನ್ ಅಲ್ವಾ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಸ್ಪಂದನಾ ಮಾತ್ರ ಇದನ್ನು ಅಷ್ಟು ಸಿಲ್ಲಿಯಾಗಿ ತಗೊಂಡಿಲ್ಲ. ರಿವೇಂಜ್ ಹೆಸರಿನಲ್ಲಿ ದ್ರುವಂತ್‌ರನ್ನು ಗ್ರ್ಯಾಂಡ್ ಫಿನಾಲೆ ಫೈನಲಿಸ್ಟ್ ಆಗೋ ಅವಕಾಶದಿಂದಲೇ ಹೊರಗಿಟ್ಟಿದ್ದಾರೆ.
ಬಿಗ್‌ಬಾಸ್ ಈ ವಾರ ನಡೆಯಲಿರುವ ಮೊದಲ ಗ್ರ್ಯಾಂಡ್ ಫಿನಾಲೆಗೆ ಅಂತಿಮ ಫೈನಲಿಸ್ಟ್‌ನ್ನು ಆಯ್ಕೆ ಮಾಡುವ ಟಾಸ್ಕ್ ಆರಂಭಿಸಿದ್ದು, ಮಾಳು ಹಾಗೂ ಸ್ಪಂದನಾಗೆ ಇಮ್ಯುನಿಟಿಯಾಗಿ ಯಾರಾದರೂ ಒಬ್ಬೊಬ್ಬ ಸ್ಪರ್ಧಿಯನ್ನು ಟಾಸ್ಕ್‌ನಿಂದ ಹೊರಗಿಡುವ ಅವಕಾಶವನ್ನು ನೀಡಿತ್ತು. ಮಾಳು, ಸತೀಶ್ ಅವರನ್ನು ಸ್ಪರ್ಧೆಯಿಂದ ಹೊರಗಿಟ್ಟರೆ, ಸ್ಪಂದನಾ ದ್ರುವಂತ್ ಅವರನ್ನು ಟಾಸ್ಕ್‌ನಿಂದ ಬ್ಲಾಕ್ ಮಾಡಿದ್ದಾರೆ.
ಈ ಹಿಂದೆಯೇ ಒಂದು ಬಾರಿ ಫೈನಲಿಸ್ಟ್ ಆಗೋ ಅವಕಾಶವನ್ನು ಬಿಟ್ಟುಕೊಟ್ಟ ದ್ರುವಂತ್ ಈ ಬಾರಿ ಬಿಟ್ಟುಕೊಡುವುದಕ್ಕೂ ಹಿಂದೇಟು ಹಾಕಲ್ಲ. ಅಷ್ಟೇ ಅಲ್ಲದೆ ಅವರಲ್ಲಿ ಆಟ ಆಡುವ ಹುಮ್ಮಸ್ಸೇ ಇಲ್ಲ. ಹಾಗಾಗಿ ಅವರನ್ನು ಸ್ಪರ್ಧೆಯಿಂದ ಹೊರಗಿಟ್ಟಿರುವುದಾಗಿ ಸ್ಪಂದನಾ ಕಾರಣ ನೀಡಿದ್ದಾರೆ.
ಈ ಮೂಲಕ ದ್ರುವಂತ್ ಜೊತೆ ಆಡಿಕೊಂಡಿದ್ದ ಜಗಳಕ್ಕೆ ರಿವೇಂಜ್ ತೆಗೆದುಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/10/14/bbk-12-2025-10-14-11-35-40.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.