/newsfirstlive-kannada/media/post_attachments/wp-content/uploads/2025/04/sri-raghavendra-mahathme2.jpg)
ಜೀ ಕನ್ನಡ ವಾಹಿನಿಯ ಬಹು ನಿರೀಕ್ಷಿತ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ. ರಾಯರ ಪವಾಡಗಳನ್ನ ಸಾರುವ ಭಕ್ತಿ ಪ್ರಧಾನ ಧಾರಾವಾಹಿ. ರಾಯರ ಆರಾಧಕರಿಗೆ ವಿಭಿನ್ನ ದೃಶ್ಯ ವೈಭವವನ್ನ ಕಟ್ಟಿಕೊಡಲು ಸಜ್ಜಾಗಿದೆ ಜೀ ವಾಹಿನಿ. ಕಥೆ, ನಿರ್ಮಾಣದ ಜವಾಬ್ದಾರಿಯನ್ನ ವಾಹಿನಿಯೇ ಹೊತ್ತಿದ್ದು, ಭೂಮಿಗೆ ಬಂದ ಭಗವಂತ ಖ್ಯಾತಿಯ ನಟ ನವೀನ್ ಕೃಷ್ಣ ನಿರ್ದೇಶನ ಮಾಡ್ತಿದ್ದಾರೆ.
ಇದನ್ನೂ ಓದಿ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು
ಮಹಾತ್ಮರ ಕಥೆ ನೋಡೋದಕ್ಕೆ ವೀಕ್ಷಕರು ಕಾಯ್ತಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬಂದಿದ್ದ ಶ್ರೀ ಗುರು ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ನಟ ಪರೀಕ್ಷಿತ್ ಅದ್ಭುತವಾಗಿ ಅಭಿನಯಿಸಿದ್ರು. ಹಲವು ವರ್ಷಗಳ ನಂತರ ಮತ್ತೆ ರಾಯರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದ್ರೆ, ರಾಯರ ಪಾತ್ರದಲ್ಲಿ ಅಲ್ಲ. ಅವರ ಗುರುಗಳಾದ ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನೂ, ರಾಯರ ಪಾತ್ರದ ಬ್ಗಗೆ ಸಹಜವಾಗಿಯೇ ಕುತೂಹಲ ಇದೆ. ಯಾರು ಈ ಪಾತ್ರ ಮಾಡ್ತಾರೆ ಅನ್ನೋದೇ ಸದ್ಯದ ಪ್ರಶ್ನೆ. ಸದ್ಯ ರಾಯರ ಶಿಶು ಅವತಾರದ ಪ್ರೋಮೋ ರಿಲೀಸ್ ಮಾಡಿದೆ ತಂಡ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಮೇ ತಿಂಗಳಿನಲ್ಲಿ ತೆರೆಗೆ ಬರಬೇಕಿತ್ತು.
ಆದ್ರೆ, ಕಾರಣಾಂತರಗಳಿಂದ ರಾಯರು ಬರೋದಕ್ಕೆ ತಡವಾಯ್ತು. ಸದ್ಯ ಹೊಸ ಪ್ರೋಮೋದಲ್ಲಿ ಸೆಪ್ಟಂಬರ್ 1ರಿಂದ ರಾಯರ ಆಗಮನವಾಗಲಿದೆ ಎಂದು ವಾಹಿನಿ ಅನೌನ್ಸ್ ಮಾಡಿದೆ. ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಸದ್ಯ ಭಕ್ತರಂತೂ ರಾಯರ ಕಥೆ ನೋಡೋಲು ಕಾತರದಿಂದ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ