/newsfirstlive-kannada/media/media_files/2025/10/13/kiccha-sudeep-5-2025-10-13-13-41-28.jpg)
ತೆಲುಗು ಬಿಗ್‌ಬಾಸ್ ಸೀಸನ್​ 9ರಲ್ಲಿ (Telugu bigg boss -9) 37ನೇ ದಿನಕ್ಕೆ ಕಾಲಿಟ್ಟಿದೆ. ನಟ ನಾಗಾರ್ಜುನ (Nagarjuna) ನೇತೃತ್ವಲ್ಲಿ ಸಖತ್ ಆಗಿ ಮೂಡಿಬರುತ್ತಿದ್ದು, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ಕಿಚ್ಚ ಸುದೀಪ್, ತೆಲುಗು ಬಿಗ್​ಬಾಸ್ ವೀಕ್ಷಕರಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಏನದು..?
ತೆಲುಗಿನ ‘ಬಿಗ್ ಬಾಸ್ ಸೀಸನ್-9’ ವೈಲ್ಡ್ ಕಾರ್ಡ್ ಎಂಟ್ರಿಗಳೊಂದಿಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಈ ವೀಕೆಂಡ್​ನಲ್ಲಿ ಒಟ್ಟು ಐದು ವೈಲ್ಡ್​ ಕಾರ್ಡ್​​ ಸ್ಪರ್ಧಿಗಳು ಎಂಟ್ರಿಯಾಗಿದ್ದಾರೆ. ಅವರಲ್ಲಿ YSRCP ನಾಯಕ, ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ಗೆಳತಿ ದಿವ್ವೇಲಾ ಮಾಧುರಿ ಕೂಡ ಒಬ್ಬರು. ಈ ದುವ್ವೇಲಾ ಮಾಧುರಿ ಅವರು ಮೂರನೇ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಬಿಗ್​ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಮಾಧುರಿ ವೇದಿಕೆಗೆ ಬಂದಾಗ ಕಿಚ್ಚ ಸುದೀಪ್ ಅವರು ತೆಲುಗು ಬಿಗ್​ಬಾಸ್​ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಎಂಟ್ರಿಯಾಗಿದ್ದಾರೆ. ಈ ವೇಳೆ ಕನ್ನಡದಲ್ಲೇ ಮಾತು ಆರಂಭಿದ ಕಿಚ್ಚ ಸುದೀಪ್, ನಮಸ್ತೆ ನಾಗಾರ್ಜುನ್ ಸರ್. ಇದು ಕನ್ನಡ ಬಿಗ್‌ಬಾಸ್ ವೇದಿಕೆಯಿಂದ ಮಾಡ್ತಿರುವ ನನ್ನ ನಮಸ್ತೆ. ನಮ್ಮ ಕರ್ನಾಟಕದ ಸ್ಟೇಜ್‌ನಿಂದ ನಿಮ್ಮ ಬಳಿ ಮಾತನಾಡ್ತಿರೋದು ಬಹಳ ಖುಷಿ ಆಗುತ್ತಿದೆ ಎಂದಿದ್ದಾರೆ.
ನಂತರ ಇಂಗ್ಲಿಷ್​ನಲ್ಲಿ ಮಾತನಾಡಿ ‘ನೀವು ನೋಡಲು ಬಹಳ ಡ್ಯಾಶಿಂಗ್ ಆಗಿ ಕಾಣ್ತಿದ್ದೀರಾ ಸರ್. ತೆಲುಗು ಬಿಗ್‌ಬಾಸ್ ಶೋ ಚೆನ್ನಾಗಿ ಬರ್ತಿದೆ ಎಂದು ಗೊತ್ತಾಯ್ತು. ನಮ್ಮ ಕಡೆಯಿಂದ ಬೆಸ್ಟ್ ವಿಶಸ್ ಮತ್ತಷ್ಟು ಒಳ್ಳೆ ನಂಬರ್ಸ್ ಬರಲಿ. ಫೈರ್ ಸ್ಟ್ರೋಮ್ ಕಾನ್ಸೆಪ್ಟ್ ಶುರು ಮಾಡ್ತಿದ್ದೀರಾ ವಿಶ್ ಯೂ ಆಲ್ ದಿ​ ವೆರಿ ಬೆಸ್ಟ್​ ಎಂದರು.
ನಂತರ ವೈಲ್ಡ್​ ಕಾರ್ಡ್​ ಸ್ಪರ್ಧಿ ಮಾಧುರಿಗೆ ಸುದೀಪ್ ಶುಭ ಕೋರಿದರು. ಅಲ್ಲದೇ ಮಾಧುರಿ ಅವರಿಗೆ ‘ಗೋಲ್ಡನ್ ಬಜರ್ ಸೂಪರ್ ಪವರ್’ (Golden Buzzer Power) ನೀಡಿದ್ದಾರೆ. ಈ ಪವರ್ ಮೂಲಕ ಅವರು ಒಂದು ಎಲಿಮಿನೇಷನ್​​ನಿಂದ ಪಾರಾಗುವ ಅವಕಾಶ ಇದೆ.
ತೆಲುಗು ಬಿಗ್​ಬಾಸ್​ ಸೀಸನ್​ 9 ಸಖತ್​ ಇಂಟ್ರೆಸ್ಟಿಂಗ್​ ಆಗಿದ್ದು, ಪ್ರೇಕ್ಷಕರ ಮನೆ ಮಾತಾಗಿದೆ.. ಮಾತ್ರವಲ್ಲದೆ ಕನ್ನಡದ ನಟಿ ಸಂಜನಾ ಗಲ್ರಾನಿ ‘ಬಿಗ್ ಬಾಸ್ ತೆಲುಗು ಸೀಸನ್​ 9 ರಲ್ಲಿ ಇದ್ದಾರೆ. ಸಂಕಷ್ಟಗಳಿಗೆ ಸಿಲುಕಿದ್ದ ತಮಗೆ ಇದೊಂದು ಸುವರ್ಣಾವಕಾಶ ಎಂದು ಬಿಗ್​ಬಾಸ್​ನಲ್ಲಿ ಸಂಜನಾ ಗಲ್ರಾನಿ ಆಡ್ತಿದ್ದಾರೆ. ತೆಲುಗು ಬಿಗ್​ಬಾಸ್​ ಅಚ್ಚರಿ ಎಂದರೆ 6 ಮಂದಿ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಮಾಜಿ ಪ್ರಧಾನಿ ದೇವೇಗೌಡ ಡಿಸಚಾರ್ಜ್ : ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ, ಉತ್ತರದತ್ತ ದೇವೇಗೌಡರ ಚಿತ್ತ!
Kiccha Sudeep 🫂Nagarjun Sir on the same screen,
— 💛❤️ಸುಪ್ರೀತ್ ಗೌಡ🕊️❤️💛 (@Suprith_Sudeep) October 13, 2025
Sudeep sir introduced Kannada Big Boss platform to Nagarjun sir, @KicchaSudeep@iamnagarjuna#KicchaSudeep#Nagarjuna#BBK12#BiggBossTelugu#BiggBoss#BBKSeason12#kicchaBosspic.twitter.com/K4MpKb43BV
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ