/newsfirstlive-kannada/media/media_files/2025/09/26/big-boss-cockroach-sudhi-2025-09-26-16-19-07.jpg)
ಫೈನಲಿಸ್ಟ್ ಆಗಿ ಆಯ್ಕೆಯಾದ ಕಾಕ್ರೋಚ್ ಸುಧೀ
ಮೊದಲ ವಾರದ ಫೈನಲಿಸ್ಟ್ ಯಾರಾಗ್ತಾರೆ ಅನ್ನೋ ಕುತೂಹಲದಿಂದ ಕಾಯುತ್ತಿದ್ದ ವೀಕ್ಷಕರಿಗೆ ಬಿಗ್‌ಬಾಸ್ ಸ್ಪರ್ಧಿಗಳು ನಿರಾಸೆ ಮೂಡಿಸಿದ್ರು. ಫೈನಲಿಸ್ಟ್ ಆಯ್ಕೆ ಮಾಡುವ ಟಾಸ್ಕ್‌ನ್ನೇ ರದ್ದಾಗುವಂತೆ ಮಾಡಿದ್ರು. ಬಿಗ್‌ಬಾಸ್ ಮತ್ತೊಂದು ಟಾಸ್ಕ್ ನೀಡಿ ಕಾಕ್ರೋಚ್ ಸುಧಿಯನ್ನು ಫೈನಲಿಸ್ಟ್ ಆಗಿ ಆಯ್ಕೆ ಮಾಡಿದ್ದಾರೆ.
ಮೊದಲ ವಾರದಲ್ಲಿ ಫೈನಲಿಸ್ಟ್‌ಗಳಾಗೋ ಅವಕಾಶವನ್ನು ಮಲ್ಲಮ್ಮ, ಧನುಷ್, ಕಾಕ್ರೋಚ್ ಸುಧಿ ಮತ್ತು ಸತೀಶ್- ಚಂದ್ರಪ್ರಭಗೆ ನೀಡಲಾಗಿತ್ತು. ಬಿಗ್‌ಬಾಸ್ ನೀಡೋ ಟಾಸ್ಕ್‌ನ್ನು ಯಾರು ಮೊದಲು ಕಂಪ್ಲೀಟ್ ಮಾಡುತ್ತಾರೋ ಅವರೇ ಫೈನಲಿಸ್ಟ್ ಆಗಿ ಸೆಲೆಕ್ಟ್ ಆಗುತ್ತಿದ್ದರು. ಆದರೆ ಬಿಗ್‌ಬಾಸ್ ನೀಡಿದ್ದ ಟಾಸ್ಕ್‌ನ್ನು ಸ್ಪರ್ಧಿಗಳು ಮತ್ತು ಉಸ್ತುವಾರಿಗಳು ಸರಿಯಾಗಿ ಅರ್ಥವೇ ಮಾಡಿಕೊಳ್ಳದೆ ಟಾಸ್ಕನ್ನೇ ರದ್ದಾಗುವಂತೆ ಮಾಡಿದ್ರು.
ಆದರೆ ಫೈನಲಿಸ್ಟ್ ಸೆಲೆಕ್ಷನ್ ಆಗೋದು ಅನಿವಾರ್ಯ ಆಗಿತ್ತು. ವೀಕ್ಷಕರು ಕೂಡ ಇದೇ ನಿರೀಕ್ಷೆಯಲ್ಲೇ ಇದ್ರು. ಹೀಗಾಗಿ ವೀಕ್ಷಕರಿಗೆ ಮೋಸ ಮಾಡಬಾರದು ಅನ್ನುವ ಉದ್ದೇಶದಿಂದ ಬಿಗ್‌ಬಾಸ್ ಫೈನಲಿಸ್ಟ್ ಕಂಟೆಂಡರ್‌ಗಳಿಗೆ ಇನ್ನೊಂದು ಅವಕಾಶವನ್ನು ನೀಡಿದ್ರು.
ಇಲ್ಲಿ ಫೈನಲಿಸ್ಟ್ ಕಂಟೆಂಡರ್‌ಗಳು ನೇರವಾಗಿ ಸ್ಪರ್ಧೆಗೆ ಇಳಿಯಲು ಅವಕಾಶ ಇರಲಿಲ್ಲ. ಅವರ ಬದಲಾಗಿ ಅವರೇ ಆಯ್ಕೆ ಮಾಡಿದ ಇನ್ನೊಬ್ಬ ಸ್ಪರ್ಧಿಯನ್ನು ಸ್ಪರ್ಧೆಗೆ ಇಳಿಸಬಹುದಿತ್ತು. ಧನುಷ್ ಪರವಾಗಿ ಅಭಿಷೇಕ್, ಮಲ್ಲಮ್ಮನ ಪರವಾಗಿ ದ್ರುವಂತ್, ಕಾಕ್ರೋಚ್ ಸುಧಿ ಪರವಾಗಿ ಮಾಳು ನಿಪನಾಳ, ಸತೀಶ್- ಚಂದ್ರಪ್ರಭ ಪರವಾಗಿ ಕರಿಬಸಪ್ಪ ಸ್ಪರ್ಧೆಗೆ ಇಳಿದಿದ್ದರು. ಮೂರು ಬಾರಿಯೂ ಸುಧಿ ಪರ ಆಟವಾಡಿದ್ದ ಮಾಳು ನಿಪನಾಳ ಗೆದ್ದು ಸುಧಿಯನ್ನು ಫೈನಲಿಸ್ಟ್ ಎಂದು ಘೋಷಣೆ ಮಾಡಲಾಯ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.