/newsfirstlive-kannada/media/media_files/2025/11/05/suraj-singh-and-risha-gowda-2025-11-05-13-20-08.jpg)
ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ರಿಷಾ ಬರುತ್ತಲೇ ಮನೆಯಲ್ಲಿ ತನ್ನದೇ ಹವಾ ತೋರಿಸೋಕೆ ಮುಂದಾಗಿದ್ರೆ ಸೂರಜ್ ಮಾತ್ರ ಎಳೆಮಗು ತರ ಸುಮ್ಮನಿರುತ್ತಿದ್ರು. ಇದೀಗ ಅವರೂ ಪ್ರಶ್ನೆ ಮಾಡೋಕೆ ಮುಂದಾಗಿದ್ದು, ಇದೇ ಇವರಿಬ್ಬರ ನಡುವೆ ಗಲಾಟೆಗೆ ಕಾರಣವಾಗಿದೆ.
ಸೂರಜ್ ಮೊನ್ನೆವರೆಗೂ ಮನೆಯಲ್ಲಿ ಇದ್ದಾರೋ ಇಲ್ವೋ ಅನ್ನೋ ರೀತಿ ಇರುತ್ತಿದ್ದವರು ಈಗ ಒಮ್ಮಿಂದೊಮ್ಮೆಲೆ ಹಾರಾಡೋಕೆ ಶುರು ಮಾಡಿದ್ದಾರೆ. ರಿಷಾ ತಮ್ಮನ್ನು ಮಳ್ಳ ಅಂದಿದ್ದು ಯಾಕೆ ಎಂದು ನೇರವಾಗಿ ಅವರನ್ನೇ ಪ್ರಶ್ನಿಸಿದ್ದಾರೆ. ಸೂರಜ್‌ರ ಪ್ರಶ್ನೆಗೆ ಉತ್ತರಿಸಲು ರಿಷಾ ಮೀನಾ ಮೇಷ ಎಣಿಸುತ್ತಿದ್ದರೆ ಸೂರಜ್ ಅದಕ್ಕೂ ಬಗ್ಗದೆ ಅವರನ್ನೇ ಬೆಂಡು ಮಾಡಿದ್ದಾರೆ.
ರಿಷಾ ಸೂರಜ್ ಮುಖ ನೋಡಿ ಮಾತನಾಡಲು ಹಿಂದೇಟು ಹಾಕಿದಾಗ ಅದಕ್ಕೂ ಕ್ಯಾರೆ ಮಾಡದ ಸೂರಜ್ ತನ್ನನ್ನು ಮಳ್ಳ ಅಂದಿದ್ದು ಯಾಕೆ ಎಂದು ಹೇಳಿದ್ದಾರೆ ಮಾತ್ರವಲ್ಲ ರಿಷಾನಿಗೆ ಕಳ್ಳಿಯನ್ನಾದರೂ ನಂಬಬಹುದು ಸುಳ್ಳಿಯನ್ನು ನಂಬೋಕಾಗಲ್ಲ ಎಂದು ಹೇಳಿದ್ದಾರೆ.
ಮನೆಗೆ ಎಂಟ್ರಿ ನೀಡಿ ಎರಡೇ ವಾರದಲ್ಲಿ ರಿಷಾ ಎಲ್ಲರ ಟಾರ್ಗೆಟ್ ಆಗಿದ್ದು, ಇದು ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ನೋಡಬೇಕಷ್ಟೆ.
ಸೂರಜ್ಗೆ 'ಮಳ್ಳನ' ಕ್ಲಾರಿಟಿ ಸಿಗುತ್ತಾ?
— JioHotStar Kannada (@JHSKannada) November 5, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BBK12#ColorsKannada#jiohotstarkannadapic.twitter.com/HU1nkNlhdr
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us