ಸಪ್ತಪದಿ ತುಳಿದ ಸುಷ್ಮಾ ಶೇಖರ್‌.. ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ನಟಿ..!

ಯಾರೇ ನೀ ಮೋಹಿನಿ ಧಾರವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್‌, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಂದರ ಹಾಗೂ ಸಿಂಪಲ್‌ ಆಗಿ ಮದ್ವೆಯಾಗಿರೋ ನಟಿ, ಸಪ್ತಪದಿ ತುಳಿದು, ಬದುಕಿನ ಮತ್ತೊಂದು ಮಜಲಿಗೆ ಪ್ರವೇಶ ಕೊಟ್ಟಿದ್ದಾರೆ. ಜನವರಿ 25ನೇ ತಾರೀಖು ಸುಷ್ಮಾ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

author-image
Ganesh Kerekuli
susma shekhar
Advertisment

ನಟಿಯರು ಶೂಟಿಂಗ್‌ ಟೈಮ್‌ನಲ್ಲಿ ಎಷ್ಟೇ ಮದ್ವೆ ಸೀನ್ ಮಾಡಿದ್ರೂ ಕೂಡ ಅವ್ರ ರಿಯಲ್ ಮದ್ವೆ ಅಂದಾಗ ಗ್ಲಿಸರಿನ್ ಇಲ್ದೇ, ಅಳು ಬರುತ್ತೆ. ಅದುವೇ ಸಹಜವಾದ ಭಾವನೆ. ಈ ಮಾತ್ ಯಾಕ್ ಹೇಳ್ತಿದ್ದೀವಿ ಅಂದ್ರೆ, ಹಲವು ಸೀರಿಯಲ್‌ಗಳ ಮೂಲಕ, ನಮ್ಮನ್ನ ರಂಜಿಸಿರೋ ನಟಿ ಸುಷ್ಮಾ ಶೇಖರ್‌, ಸಪ್ತಪದಿ ತುಳಿದಿದ್ದಾರೆ. ತಾಳಿ ಕಟ್ಟೋ ಟೈಮ್‌ನಲ್ಲಿ, ಕಣ್ಣೀರಿಟ್ಟರು.

susma shekhar (1)

ಯಾರೇ ನೀ ಮೋಹಿನಿ ಧಾರವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್‌, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಂದರ ಹಾಗೂ ಸಿಂಪಲ್‌ ಆಗಿ ಮದ್ವೆಯಾಗಿರೋ ನಟಿ, ಸಪ್ತಪದಿ ತುಳಿದು, ಬದುಕಿನ ಮತ್ತೊಂದು ಮಜಲಿಗೆ ಪ್ರವೇಶ ಕೊಟ್ಟಿದ್ದಾರೆ.  ಜನವರಿ 25ನೇ ತಾರೀಖು ಸುಷ್ಮಾ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. 

ಕಳೆದ ನವೆಂಬರ್‌ನಲ್ಲಿ, ಎಂಗೇಜ್‌ಮಂಟ್ ಮಾಡ್ಕೊಂಡಿದ್ದ ಸುಷ್ಮಾ ಶೇಖರ್‌, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮೆಚ್ಚಿದ ಹುಡುಗನ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.  ಮದುವೆ ಕುರಿತು ನಮ್ಮ ಜೊತೆ ಮಾತನಾಡಿದ ಸುಷ್ಮಾ ಶೇಖರ್‌, ನನ್ನ ಗಂಡ ತುಂಬಾ ಸಪೋರ್ಟಿವ್  ಇದ್ದಾರೆ. ನನಗೆ ಇಚ್ಚೆಯಾಗುವ ಕೆಲಸವನ್ನ ಮಾಡಲು ನನಗೆ ಸ್ವತಂತ್ರ್ಯ ಕೊಟ್ಟಿದ್ದಾರೆ. ನನ್ನ ಆ್ಯಕ್ಟಿಂಗ್ ಮುಂದುವರೆಸುವಂತೆ ಉತ್ತೇಜಿಸುತ್ತಾರೆ. ಒಂದು ದಿನವೂ ಕೆಲ್ಸ ಮಾಡ್ಬೇಡ ಎಂದು ಆಕ್ಷೇಪಣೆ ಮಾಡಿಲ್ಲ. ನನ್ನ ಪತಿ ಐಟಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದ್ದು, ನಾನು ತುಂಬಾ ಲಕ್ಕಿ ಇದ್ದೀನಿ. ಆದ್ರೆ, ತಾಳಿ ಕಟ್ಟುವಾಗ ನನ್ನ ತಂದೆಯನ್ನ ತುಂಬಾ ಮಿಸ್ ಮಾಡ್ಕೊಂಡೇ. ಹಾಗಾಗಿ, ನಾನು ಕಣ್ಣೀರಿಟ್ಟೆ. ತಂದೆ ನಿಧನದ , ಒಂದು ವರ್ಷದ ಒಳಗೆ ಮದುವೆಯಾಗುವ ಸಂಪ್ರದಾಯವಿದೆ.

susma shekhar (2)

 ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೇ, ಹುಡುಗನ ಹುಡುಕಿ ಮದುವೆ ಮಾಡಿದರು. ಅಕ್ಕ-ಭಾವ ನಿಂತು ಕನ್ಯಾದಾನ ಮಾಡಿದರು, ಇದು ಯಾವುದೋ ಜನ್ಮದ ಪುಣ್ಯ ಅನಿಸುತ್ತೆ ನನಗೆ. ನಾನಂತೂ ತುಂಬಾ ಖುಷಿಯಾಗಿದ್ದೇನೆ ಎಂದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sushma Shekhar,
Advertisment