/newsfirstlive-kannada/media/media_files/2025/08/10/tharun-sudhir3-2025-08-10-18-35-24.jpg)
ತರುಣ್ ಸುಧೀರ್ ಮತ್ತು ಸೋನಲ್ ಅವರ ಮೊದಲ ವಿವಾಹ ವಾರ್ಷಿಕೋತ್ಸವ 'ಮಹಾನಟಿ ವೇದಿಕೆ ಮೇಲೆ ಅದ್ಧೂರಿಯಾಗಿ ನಡೆದಿದೆ. ವೇದಿಕೆ ಮೇಲೆ ಸೋನಲ್ಗೆ ಬರೋಬ್ಬರಿ 9 ಗಿಫ್ಟ್ಗಳನ್ನು ಸರ್ಪ್ರೈಸ್ ಆಗಿ ನೀಡಿದ್ದಾರೆ ತರುಣ್ ಸುಧೀರ್.
ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ವೈವಾಹಿಕ ಜೀವನಕ್ಕೆ ಕಾಲಿಟ್ಟು ಆಗಸ್ಟ್ 11ಕ್ಕೆ ಒಂದು ವರ್ಷ ತುಂಬಲಿದೆ. ಹೀಗಾಗಿ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊಗೆ ಒಂದಾದ ಮೇಲೆ ಒಂದರಂತೆ ಗಿಫ್ಟ್ಗಳನ್ನು ಕೊಟ್ಟಿದ್ದಾರೆ.
ಈ ಸ್ಟಾರ್ ಜೋಡಿ 2024 ಆಗಸ್ಟ್ 11ರಂದು ಸಿಲಿಕಾನ್ ಸಿಟಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿಯ ಮದುವೆಗೆ ಸ್ಟಾರ್ ನಟ ನಟಿಯರು ಎಂಟ್ರಿ ಕೊಟ್ಟು ಶುಭ ಹಾರೈಸಿದ್ದರು.
ಆಗಸ್ಟ್ 11ರಂದು ಇವರ ಸುಖ ಸಂಸಾರಕ್ಕೆ ಒಂದು ವರ್ಷ ತುಂಬಲಿದೆ. ಸಾಮಾನ್ಯವಾಗಿ ಮೊದಲನೇ ವಿವಾಹ ವಾರ್ಷಿಕೋತ್ಸವ ಯಾವಾಗಲೂ ಸ್ಪೆಷಲ್ ಆಗಿರುತ್ತದೆ. ಅದೇ ರೀತಿ ತರುಣ್ ಹಾಗೂ ಸೋನಲ್ಗೂ ದಂಪತಿಗೂ ಆಗಸ್ಟ್ 11 ತುಂಬಾ ಸ್ಪೆಷಲ್ ದಿನ. ಮತ್ತೊಂದು ವಿಶೇಷ ಏನೆಂದರೆ ಆಗಸ್ಟ್ 11ರಂದು ಸೋನಲ್ ಅವರ ಹುಟ್ಟು ಹಬ್ಬ. ಹೀಗಾಗಿ ತರುಣ್ ಸುಧೀರ್ ದಂಪತಿಗೆ ವಿಶೇಷವಾದ ದಿನ ಅಂತಲೇ ಹೇಳಬಹುದು
ಇನ್ನೂ, ಮಹಾನಟಿ ವೇದಿಕೆ ಮೇಲೆ ತರುಣ್ ಸುಧೀರ್ 9 ಗಿಫ್ಟ್ಗಳನ್ನು ಕೊಟ್ಟಿದ್ದಾರೆ. 12 ತಿಂಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಈ ಹೂವಿನಂತೆ ನಮ್ಮ ಜೀವನ ಅರಳಲಿ. ನೀನು ನನ್ನ ಕುಟುಂಬವನ್ನು ಕಾಪಾಡ್ತೀಯಾ ಎಂಬ ನಂಬಿಕೆ ನನಗೆ ಇದೆ. ಹಿಂದಿನದ್ದನ್ನು ನಾನು ಯೋಚನೆ ಮಾಡುವುದಿಲ್ಲ. ಈ ಸಮಯವನ್ನು ಖುಷಿಯಾಗಿ ಇಡುತ್ತೇನೆ ಎಂದಿದ್ದಾರೆ.
ಮೊದಲು ತರುಣ್ ಸುಧೀರ್ ಹೂಗುಚ್ಛ ಕೊಟ್ಟಿದ್ದಾರೆ. ಇದಾದ ಬಳಿಕ ಇಷ್ಟವಾದ ಚಾಕೊಲೇಟ್, ಕ್ಯಾರಮೆಲ್ ಪಾಪ್ ಕಾರ್ನ್, ಟೆಡ್ಡಿ ಬೇರ್, ಮದುವೆ ದಿನ ಕ್ಲಿಕ್ಕಿಸಿಕೊಂಡ ಬ್ಯೂಟಿಫುಲ್ ಫೋಟೋ, ಅರಿಶಿನ ಕುಂಕುಮ ಹಾಗೂ ಮಲ್ಲಿಗೆ ಹೂ, ಸೀರೆ, ಕಾಲಗೆಜ್ಜೆ ಹಾಗೂ ಅವರ ಕೈಯಾರೆ ಬರೆದ ಪತ್ರವನ್ನು ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಸೋನಲ್ ಮಂಡಿಯೂರಿ ಉಂಗುರವನ್ನು ತೊಡಿಸಿದ್ದಾರೆ. ಇನ್ನೂ, ಈ ಇಬ್ಬರ ಸೀನ್ ನೋಡಿ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಫುಲ್ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ