/newsfirstlive-kannada/media/media_files/2026/01/13/bigg-boss-kannada-3-2026-01-13-14-42-18.jpg)
/newsfirstlive-kannada/media/media_files/2026/01/12/bigg-boss-13-2026-01-12-11-32-22.jpg)
ಹೊಟ್ಟೆಯಲಿ ಚಿಟ್ಟೆ ಇರುವ ಅನುಭವ
ಬಿಗ್ಬಾಸ್ ಸೀಸನ್-12 ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಅದೆಷ್ಟೋ ವೀಕ್ಷಕರಿಗೆ ಇದು ನಿಜಕ್ಕೂ ಬೇಸರದ ಸಂಗತಿ. ಆದ್ರೆ, ಮನೆಯಲ್ಲಿರೋ ಸ್ಪರ್ಧಿಗಳಿಗ ಮಾತ್ರ ಹೊಟ್ಟೆಯಲಿ ಚಿಟ್ಟೆ ಇರುವ ಅನುಭವವಾಗ್ತಿದೆ.
/newsfirstlive-kannada/media/media_files/2026/01/09/bigg-boss-top-six-2026-01-09-12-50-19.jpg)
ಲೆಕ್ಕಾಚಾರ ಉಲ್ಟಾಪಲ್ಟಾ
ನಿಜಕ್ಕೂ ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ, ನಡೆದ ಅನೇಕ ಘಟನೆಗಳು ಗೇಮ್ ಚೇಂಜಿಗ್ ಆಗಿತ್ತು. ಅಶ್ವಿನಿ ಗೌಡ ಆಟ ಆಡಿದ ರೀತಿ, ಗಿಲ್ಲಿ ಸಪ್ಪೆಯಾಗಿದ್ದು, ಧ್ರುವಂತ್ ಬೌನ್ಸ್ ಬ್ಯಾಕ್ ಮಾಡಿದ್ದು, ರಘು ಗೇಮ್ನಲ್ಲಿ ಗೆಲ್ಲದೇ ಇದ್ದದ್ದು, ರಾಶಿಕಾ ಮಾತಿನ ಭರದಲ್ಲಿ ಎಡವಿದ್ದು, ಕಾವ್ಯಾ ಗೇಮ್ ಗೀವಪ್ ಮಾಡ್ತೀನಿ ಅಂದದ್ದು.. ಹೀಗೇ ಹತ್ತು ಹಲವು ವಿಚಾರಗಳು ಗೇಮ್ನ ಲೆಕ್ಕಾಚಾರಗಳನ್ನ ಬದಲಿಸಿದೆ.
/newsfirstlive-kannada/media/media_files/2026/01/04/bigg-boss-kannada-2-2026-01-04-17-45-30.jpg)
ಯಾವ್ಯಾವ ಸವಾಲುಗಳಿವೆ?
ಹಾಗಾದ್ರೆ, ಈ ವಾರ ಉಳಿದುಕೊಂಡಿರುವ 7 ಸ್ಪರ್ಧಿಗಳಿಗೆ ಹಲವು ಸವಾಲುಗಳಿವೆ. ಕೆಲವರಿಗೆ ಗೆಲ್ಲುವ ಸದಾವಕಾಶ ಪಕ್ಕಾ ಇದೆ. ಇನ್ನು ಹಲವರಿಗೆ ಶನಿವಾರದವರೆಗೆ ಉಳಿದುಕೊಳ್ಳಬಹುದಾದ ಅವಕಾಶಗಳಿವೆ. ಇನ್ನು ಕೆಲವರಿಗೆ ಮಿಡ್ನೈಟ್ ಎಲಿಮನೇಷನ್ನಿಂದ ಪಾರಾಗುವ ಅನಿವಾರ್ಯತೆ ಇದೆ. ಹೀಗೇ ಯಾಱರಿಗೆ ಯಾವ್ಯಾವ ಸವಾಲುಗಳಿವೆ?
/newsfirstlive-kannada/media/media_files/2026/01/04/gilli-nata-21-2026-01-04-12-08-31.jpg)
ಗಿಲ್ಲಿ ಎಚ್ಚರ
ಮೊದಲಿಗೆ, ಅದ್ಯಾಕೋ ಏನೋ ಕಳೆದ ಎರಡು ವಾರಗಳಲ್ಲಿ ಗಿಲ್ಲಿ ಡಲ್ ಹೊಡೆದಿದ್ದು ನಿಜ. ಹಲವರು ಗಿಲ್ಲಿ ಬಗ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಾರ ಗಿಲ್ಲಿ ಮತ್ತೆ ಫಿನಿಕ್ಸ್ನಂತೆ ಎದ್ದು ಬರಬೇಕು. ಆ ನಂತರ ಆಡುವ ಪ್ರತಿಯೊಂದು ಮಾತಿನಲ್ಲೂ ಎಚ್ಚರವಹಿಸಬೇಕು.
/newsfirstlive-kannada/media/media_files/2025/11/20/ashwini-gowda-5-2025-11-20-08-18-23.jpg)
ಯಡವಟ್ಟು ಬೇಡ ಅಶ್ವಿನಿ
ನಂತರ ಅಶ್ವಿನಿ, ಕಳೆದ ವಾರದ ಅವರ ಪರ್ಫಾಮೆನ್ಸ್ ನಿಜಕ್ಕೂ ಗೇಮ್ ಲೆಕ್ಕಚಾರ ಬದಲಿಸಿರುವುದಂತೂ ನಿಜ. ಈಗ ಗಿಲ್ಲಿ ವರ್ಸಸ್ ಅಶ್ವಿನಿ ಅನ್ನೋ ಮಟ್ಟಿಗೆ ಗೇಮ್ ಬದಲಾಗಿದೆ. ಇವರಿಬ್ಬರಲ್ಲಿಯೇ ಒಬ್ಬರು ವಿನ್ನರ್ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಈಗಿರುವ ಸಂದರ್ಭದಲ್ಲಿ ಅಶ್ವಿನಿ ಯಾವುದೇ ಕಾರಣಕ್ಕೂ, ಎಡವಟ್ಟು ಮಾಡಿಕೊಳ್ಳಬಾರ್ದು. ಆಡುವ ಪ್ರತಿಯೊಂದು ಮಾತಿನ ಮೇಲೂ ನಿಗಾವಹಿಸಿಬೇಕು.
/newsfirstlive-kannada/media/media_files/2025/11/27/rakshita-shetty-6-2025-11-27-15-02-40.jpg)
ರಕ್ಷಿತಾ ಹೇಗಿರಬೇಕು..?
ರಕ್ಷಿತಾಗೂ ಕಳೆದ ವಾರ ಸ್ವಲ್ವ ಹಿನ್ನಡೆಯಾಗಿದೆ. ಹಾಗಂತಾ ಫುಲ್ ನೆಗೆಟಿವ್ ಆಗಿಲ್ಲ. ಅವರ ಫ್ಯಾನ್ ಬಳಗ ದೊಡ್ಡದೇ ಇದೆ. ಆದ್ರೆ, ಕೊನೆಯ ವಾರ, ಎಲ್ಲರೊಂದಿಗೆ ಬೆರೆತು, ಪೊಸೆಸಿವ್ ಬಿಟ್ಟು, ಮೆಚುರ್ಡ್ ಆಗಿ ಗೇಮ್ ಆಡಿದ್ರೆ, ಅವರಿಗೆ ಪಕ್ಕಾ ಅವಕಾಶವಿದೆ.
/newsfirstlive-kannada/media/media_files/2025/10/23/bbk12_raghu-2025-10-23-09-25-12.jpg)
ರಘುಗೆ ದೊಡ್ಡ ಅವಕಾಶ
ರಘು ವಿಚಾರಕ್ಕೆ ಬಂದ್ರೆ, ಅವರು ಎಡವಿದ್ದೇ ಸ್ಟ್ಯಾಂಡ್ ತೆಗೆದುಕೊಳ್ಳೋದ್ರಲ್ಲಿ. ಅದರಲ್ಲೂ ನಾಮಿನೇಷನ್ ಪ್ರಕ್ರಿಯೆ ವೇಳೆ ತಮ್ಮನ್ನ ತಾವು ಡಿಫೆಂಟ್ ಮಾಡಿಕೊಳ್ಳಲಿಲ್ಲ. ಇದು ಅವರಿಗಾದ ದೊಡ್ಡ ಹಿನ್ನಡೆ. ರಘು ಗೆಲ್ಲುವ ರೇಸ್ನಲ್ಲಿ ದೊಡ್ಡ ಅವಕಾಶವಿತ್ತು. ಸ್ಟಿಲ್ ಇದೆ. ಬಟ್ ಆಟ ಬದಲಿಸಿಕೊಳ್ಳಬೇಕು.
/newsfirstlive-kannada/media/media_files/2025/11/08/dhanush-gowda-2025-11-08-22-21-38.jpg)
ಧನು ಏನು ಮಾಡಬೇಕು?
ಧನು ವಿಚಾರದಲ್ಲೂ ಇದೇ ಅಭಿಪ್ರಾಯ ಜನರಿಂದ ಕೇಳಿಬರ್ತಿದೆ. ಧನು ಗಟ್ಟಿ ಧ್ವನಿಯಲ್ಲಿ ಮಾತಾಡಿ, ಸ್ಟ್ರೈಟ್ ಓಪಿನಿಯನ್ ಕೊಡಬೇಕು ಅನ್ನೋದು ಹಲವರ ಅಭಿಪ್ರಾಯವಾಗಿದೆ. ಅವರ ಒಳ್ಳೆತನ ಖಂಡಿತವಾಗಿಯೂ ಅವರ ಅತಿ ದೊಡ್ಡ ಅಡ್ವಾಂಟೇಜ್.
/newsfirstlive-kannada/media/media_files/2025/11/13/kavya-and-gilli-nata-2025-11-13-10-53-42.jpg)
ಎಡವಿದ್ದಾರೆ ಕಾವ್ಯ
ಕಾವ್ಯಾ ನಿಜಕ್ಕೂ ಎಡವಿಬಿಟ್ಟರು. ಕೊನೆಯ ಘಳಿಗೆಯಲ್ಲಿ ಗೇಮ್ ಗೀವಪ್ ಮಾಡುವ ಮಾತು ಆಡಿದ್ದು, ಅವರ ಫ್ಯಾನ್ ಫಾಲೋವರ್ಸ್ಗೆ ನಿರಾಸೆ ತಂದಿತು. ಸಹ ಸ್ಪರ್ಧಿಗಳಿಗೆ ದೊಡ್ಡ ಅಸ್ತ್ರ ಕೊಟ್ಟಂತೆ ಆಯ್ತು. ಇದನ್ನ ಕಾವ್ಯಾ ಈ ವಾರ ಸರಿಪಡಿಸಿಕೊಳ್ಳಲೇಬೇಕು. ಮತ್ತೆ , ನಾವು ಕೂಡ ಸ್ಟ್ರಾಂಗ್ ಕಂಟೆಂಡರ್ ಅಂತಾ ಕೂಗಿ ಹೇಳಬೇಕು.
/newsfirstlive-kannada/media/media_files/2025/10/31/dhruvant-2025-10-31-16-30-59.jpg)
ಧ್ರುವಂತ್ ಸ್ಟ್ರಾಂಗ್ ಸ್ಪರ್ಧಿ
ಧ್ರುವಂತ್ಗೆ ಕೂಡ ಸ್ಟ್ರಾಂಗ್ ಸ್ಪರ್ಧಿ. ಮನೆಯೊಳಗೆ ಅವರ ಸ್ಥಾನ ಈಗ ಭದ್ರವಾಗಿದೆ. ಆದ್ರೆ, ಹೊರಗೆ ಕಿಚ್ಚನ ಚಪ್ಪಾಳೆ ವಿಚಾರದಲ್ಲಿ ಆಗಿರುವ ಚರ್ಚೆಗಳು ಅವರಿಗೆ ನಿಜಕ್ಕೂ ಅನಾನುಕೂಲವಾಗಲಿದೆ. ಇದು ವೋಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ರೆ, ಇದು ಧ್ರುವಂತ್ ತಪ್ಪಲ್ಲ ಬಿಡಿ. ಅವರು ಕೂಡ ಪ್ರತಿಯೊಂದು ಹೆಜ್ಜೆಯನ್ನ ಎಚ್ಚರದಿಂದ ಇಡಬೇಕು. ಇಲ್ಲದ್ದಿದ್ರೆ, ಅವರಿಗೆ ಅನಾನುಕೂಲವಾಗ ಸಾಧ್ಯತೆ ಹೆಚ್ಚಿದೆ. ಇದು ಕೊನೆಯ ವಾರ ಉಳಿದುಕೊಂಡಿರುವ 7 ಸ್ಪರ್ಧಿಗಳ ಮುಂದಿನ ದೊಡ್ಡ ಸವಾಲುಗಳು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us