/newsfirstlive-kannada/media/media_files/2026/01/06/gilli-nata-20-2026-01-06-12-36-45.jpg)
ಇನ್ಸಾಟಾಗ್ರಾಮ್ ನಲ್ಲಿ 1 ಮಿಲಿಯನ್ ದಾಟಿದ ಗಿಲ್ಲಿ ಫಾಲೋವರ್ಸ್ ಸಂಖ್ಯೆ
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಅಲಿಯಾಸ್ ನಟರಾಜ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಫ್ಯಾನ್ಸ್ ಫಾಲೋಯಿಂಗ್ ಅನ್ನು ಕೆಲವೇ ದಿನದಲ್ಲಿ ಗಳಿಸಿಕೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. ಇನ್ಸಟಾಗ್ರಾಮ್ ನಲ್ಲಿ ಗಿಲ್ಲಿ ನಟ ಅಲಿಯಾಸ್ ನಟರಾಜುಗೆ ಬಿಗ್ ಬಾಸ್ ಶೋಗೆ ಹೋಗುವ ಮುನ್ನ 80 ಸಾವಿರ ಫಾಲೋವರ್ಸ್ ಇದ್ದರು. ಆದರೇ, ಬಿಗ್ ಬಾಸ್ ಗೆ ಹೋಗಿ ಈಗಾಗಲೇ 100 ದಿನ ಕಳೆದಿದೆ. ಈ ದಿನಗಳ ಅಂತರದಲ್ಲಿ ಇನ್ಸಟಾಗ್ರಾಮ್ ನಲ್ಲಿ ಗಿಲ್ಲಿ ನಟನ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಿದೆ. 1 ಮಿಲಿಯನ್ ಅಂದರೇ, 10 ಲಕ್ಷ . ಗಿಲ್ಲಿ ನಟನ ಇನ್ಸಾಟಾಗ್ರಾಮ್ ಗೆ ಈಗ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಇದು ಬಿಗ್ ಬಾಸ್ ನಲ್ಲಿ ಗಳಿಸಿದ ಹೆಸರು, ಕೀರ್ತಿಯಿಂದ ಬಂದ ಫಾಲೋವರ್ಸ್ ಗಳು. ಬಿಗ್ ಬಾಸ್ ನಲ್ಲಿ ಗಿಲ್ಲಿ ನಟ ಅಲಿಯಾಸ್ ನಟರಾಜು ಜನರಿಗೆ ಮನರಂಜನೆ ನೀಡಿದ್ದಾರೆ. ಕಾಮಿಡಿ ಮಾಡಿದ್ದಾರೆ. ಬೇರೆ ಸ್ಪರ್ಧಿಗಳ ಕಾಲೆಳೆದಿದ್ದಾರೆ. ರೋಮ್ಯಾನ್ಸ್, ಲವ್, ಚೇಷ್ಟೆ ಎಲ್ಲವನ್ನೂ ಮಾಡಿದ್ದಾರೆ. ಇವೆಲ್ಲದರಿಂದ ಗಿಲ್ಲಿ ನಟ ಅಲಿಯಾಸ್ ನಟರಾಜುಗೆ ಇನ್ಸಾಟಾಗ್ರಾಮ್ ನಲ್ಲಿ ಫಾಲೋವರ್ಸ್ ಗಳ ಸಂಖ್ಯೆಯಲ್ಲಿ 100 ದಿನದಲ್ಲೇ ಭಾರಿ ಏರಿಕೆಯಾಗಿದೆ.
ಕಳೆದ 100 ದಿನಗಳಲ್ಲಿ ಗಿಲ್ಲಿ ನಟ ಅಲಿಯಾಸ್ ನಟರಾಜು ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಹುಡುಗರು, ಹುಡುಗಿಯರು, ವೃದ್ಧರು ಎಲ್ಲರೂ ಗಿಲ್ಲಿ ನಟನನ್ನು ಇಷ್ಟಪಡಲು ಆರಂಭಿಸಿದ್ದಾರೆ. ಈ ಪ್ರಸಿದ್ದಿ, ಖ್ಯಾತಿಯೇ ಇನ್ಸಾಟಾಗ್ರಾಮ್ ನಲ್ಲಿ ಫಾಲೋವರ್ಸ್ ಗಳ ಸಂಖ್ಯೆ ಧೀಡೀರನೇ ಹೆಚ್ಚಾಗಲು ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us