/newsfirstlive-kannada/media/media_files/2026/01/17/big-boss-gill-nata-versus-ashwini-2026-01-17-18-23-36.jpg)
ಬಿಗ್ ಬಾಸ್ ನಲ್ಲಿ ಗಿಲ್ಲಿ ವರ್ಸಸ್ ಅಶ್ವಿನಿಗೌಡ
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು ಅನ್ನೋದು ನಾಳೆ ರಾತ್ರಿ ವೇಳೆಗೆ ಸ್ಪಷ್ಟವಾಗಿ ಗೊತ್ತಾಗಲಿದೆ. ಬಿಗ್ ಬಾಸ್ ಹೌಸ್ ನಲ್ಲಿ ಸದ್ಯ 6 ಮಂದಿ ಸ್ಪರ್ಧಿಗಳಿದ್ದಾರೆ. ಈ ಆರು ಮಂದಿಯಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದು ಇಡೀ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಕಲರ್ಸ್ ಕನ್ನಡ ಚಾನಲ್ ನಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳು ವಿನ್ನರ್ ಆಗಬೇಕೆಂದು ಬಯಸುವವರು ಅವರಿಗೆ ವೋಟಿಂಗ್ ಮಾಡುವ ಅವಕಾಶವನ್ನು ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ವಾಹಿನಿ ಜನರಿಗೆ ನೀಡಿದೆ. ಈ ಭಾರಿ ಇದುವರೆಗೂ 37 ಕೋಟಿ ವೋಟ್ ಗಳು ಬಂದಿವೆ. ಮೊದಲ ಮತ್ತು ಎರಡನೇ ಸ್ಪರ್ಧಿಯ ನಡುವಿನ ಅಂತರ ತೀರಾ ಕಡಿಮೆ ಇದೆ ಎಂದು ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/01/17/2-2026-01-17-18-10-36.jpg)
ಕರ್ನಾಟಕದಲ್ಲಿ ಇರೋದೇ 7 ಕೋಟಿ ಜನರು. ಹೀಗಾಗಿ ಎಲ್ಲಿಂದ 37 ಕೋಟಿ ವೋಟ್ ಗಳು ಬಂದವು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಢಿರಬಹುದು. ಬಿಗ್ ಬಾಸ್ ನಲ್ಲಿ ಒಬ್ಬ ವ್ಯಕ್ತಿಗೆ ತಮ್ಮ ಮೊಬೈಲ್ ನಿಂದ 100 ವೋಟ್ ಗಳನ್ನು ಮಾಡಲು ಕಲರ್ಸ್ ಕನ್ನಡ ಅವಕಾಶ ಕೊಟ್ಟಿದೆ. ಹೀಗಾಗಿ ಕೆಲವೇ ಲಕ್ಷ ಮಂದಿ ವೋಟ್ ಮಾಡಿದರೂ, ಒಬ್ಬರು ನೂರು ವೋಟ್ ಗಳನ್ನು ಮಾಡಲು ಅವಕಾಶ ಇರುವುದರಿಂದ 37 ಕೋಟಿವರೆಗೂ ವೋಟ್ ತಲುಪಿದೆ.
ಇನ್ನೂ ವಿನ್ನರ್ ಯಾರು? ರನ್ನರ್ ಅಪ್ ಯಾರು ಅನ್ನೋದನ್ನು ತಿಳಿಯಲು ನಾಳೆ ರಾತ್ರಿಯವರೆಗೂ ಕಾಯಬೇಕಾಗಿದೆ.
/filters:format(webp)/newsfirstlive-kannada/media/media_files/2026/01/10/ashwini-gowda-and-gilli-nata-2026-01-10-13-56-35.jpg)
ಈ ಭಾರಿಯ ಬಿಗ್ ಬಾಸ್ ನಲ್ಲಿ ಗಿಲ್ಲಿ ನಟ ಅಲಿಯಾಸ್ ನಟರಾಜು ವಿನ್ನರ್ ಆಗಬೇಕೆಂದು ಅವರ ಅಭಿಮಾನಿಗಳು ರಾಜ್ಯದ ಉದ್ದಗಲಕ್ಕೂ ಕ್ಯಾಂಪೇನ್ ನಡೆಸಿದ್ದಾರೆ.
ಇನ್ನೂ ಮತ್ತೊಂದೆಡೆ ಬಿಗ್ ಬಾಸ್ ಅಶ್ವಿನಿಗೌಡ ಕೂಡ ಗಿಲ್ಲಿಗೆ ಭಾರಿ ಫೈಟ್ ನೀಡಿದ್ದಾರೆ. ಗಿಲ್ಲಿಯ ಕಾಲೆಳೆಯುವಿಕೆ, ಟೀಕೆ ಎಲ್ಲವನ್ನೂ ಮೆಟ್ಟಿ ನಿಂತಿದ್ದಾರೆ. ಅಶ್ವಿನಿ ಗೌಡಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ. ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಏಕೆ ಅಶ್ವಿನಿಗೌಡಗೆ ಬೆಂಬಲಿಸುತ್ತಿದ್ದೇವೆ ಎನ್ನುವುದನ್ನು ಮಾಧ್ಯಮಗಳ ಮುಂದೆ ಸ್ಪಷ್ಟವಾಗಿ ಹೇಳಿದ್ದಾರೆ. ಗಿಲ್ಲಿಯನ್ನು ಬೆಂಬಲಿಸುವವರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ನಾವು ನಮ್ಮ ಸಂಘಟನೆಯ ಅಶ್ವಿನಿಗೌಡರನ್ನು ಬೆಂಬಲಿಸುತ್ತೇವೆ ಎಂದು ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ಕರವೇ ಕಾರ್ಯಕರ್ತರು ಅಶ್ವಿನಿಗೌಡ ಪರವಾಗಿ ಕ್ಯಾಂಪೇನ್ ನಡೆಸಿದ್ದಾರೆ.
ಮತ್ತೊಂದೆಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಭಾರಿ ಬಿಗ್ ಬಾಸ್ ನಲ್ಲಿ ಗಿಲ್ಲಿ ಗೆಲ್ಲಬೇಕು. ಗಿಲ್ಲಿನೇ ಗೆಲ್ಲುತ್ತಾನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಡಿ ಬಾಸ್ ನಟ ದರ್ಶನ್ ಅಭಿಮಾನಿಗಳು ಗಿಲ್ಲಿಗೆ ಬೆಂಬಲ ಸೂಚಿಸಿದ್ದಾರೆ. ಅಭಿಮಾನಿಗಳೇ ಕ್ಯಾಂಪೇನ್ ನಡೆಸಿ ವೋಟಿಂಗ್ ಮಾಡಿಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2026/01/17/3-2026-01-17-18-10-50.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us