/newsfirstlive-kannada/media/media_files/2025/10/09/bigg-boss-ashwini-gowda-2025-10-09-13-15-21.png)
Photograph: (Colors Kannada)
ಬಿಗ್ ಬಾಸ್ ನಲ್ಲಿ ಕಳೆಯುವ ಪ್ರತೀ ಕ್ಷಣ ಕೂಡ ತುಂಬಾ ಮುಖ್ಯ. ಬಿಗ್ ಮನೆಯಲ್ಲಿ ಇರುವಾಗ ಮೈ ತುಂಬಾ ಕಣ್ಣಾಗಿ ಇರ್ಬೇಕು ಎಚ್ಚರ ತಪ್ಪಿದರೆ ಪಕ್ಕದಲ್ಲಿ ಇರೋರೆ ಮುಹೂರ್ತ ಇಟ್ಟು ಹೊರಕ್ಕಾಗುವ ಸಾಧ್ಯತೆಗಳೇ ಹೆಚ್ಚು. ಇನ್ನು ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರೂ ಅವರದ್ದೇ ಆದ ಸ್ಟ್ರಾಟರ್ಜಿ ಬಳಸಿ ಆಡ್ತಾರೆ. ಕೆಲವರು ಲವ್ ಫಾರ್ಮುಲ ಬಳಸಿ ಆಡ್ತಾರೆ. ಇನ್ನೂ ಕೆಲವರು ಶಕ್ತಿಯಿಂದ, ಕೆಲವರು ಯುಕ್ತಿಯಿಂದ ಆಡ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ತಂತ್ರಗಳ ಮೂಲಕ ಬಿಗ್ ಬಾಸ್ ಮನೆಯಲ್ಲಿ ತಮ್ಮ ಉಳಿವನ್ನ ಭದ್ರ ಪಡೆಸಿಕೊಳ್ಳುತ್ತಾರೆ.
/filters:format(webp)/newsfirstlive-kannada/media/media_files/2025/10/09/bigg-boss-12-2025-10-09-13-17-54.png)
ನಿನ್ನೆ ನಡೆದ ಬಂಡಾಯದ ಮಸಿ ಟಾಸ್ಕ್ ನಲ್ಲಿ ಎದುರಾಳಿಗಳಾದ ಅಭಿ & ಕಾವ್ಯಾ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದು ಧನುಷ್ ಗೌಡ & ಜಾಹ್ನವಿ ಆದ್ರೆ ಫೈನಲಿಸ್ಟ್ ಆಗಿದ್ದು ಮಾತ್ರ ಅಶ್ವಿನಿ ಗೌಡ.
/filters:format(webp)/newsfirstlive-kannada/media/media_files/2025/10/09/ashwini-gowda-2025-10-09-13-16-53.png)
ಟಾಸ್ಕ್​ನಲ್ಲಿ ಗೆದ್ದ ಬಳಿಕ ಒಂಟಿ ತಂಡದ ಸದಸ್ಯರು ಪರಸ್ಪರ ಚರ್ಚಿಸಿ ತಮ್ಮ ಪೈಕಿ ಒಬ್ಬರನ್ನ ಫೈನಲಿಸ್ಟ್​ ಆಗಿ ಘೋಷಿಸಬೇಕಿತ್ತು. ರಕ್ಷಿತಾ, ಜಾಹ್ನವಿ, ಧ್ರುವ್ & ಮಲ್ಲಮ್ಮ ಎಲ್ಲರೂ ಅಶ್ವಿನಿ ಗೌಡ ಫೈನಲಿಸ್ಟ್ ಆಗಲು ಸಮ್ಮತಿ ಸೂಚಿಸಿದರು. ಈ ವೇಳೆ ಮಾತನಾಡಿದ ಧನುಷ್ ಟಾಸ್ಕ್​ನ ಗಮನದಲ್ಲಿಟ್ಕೊಂಡು ನಾನು ಜಾಹ್ನವಿ ಅವರನ್ನ ಫೈನಲಿಸ್ಟ್ ಮಾಡ್ಬೇಕು ಅಂದ್ಕೊಂಡಿದ್ದೆ ಆದ್ರೆ ಮೆಜಾರಿಟಿ ನಿಮ್ಮನ್ನ ಆಯ್ಕೆ ಮಾಡಿರೋದ್ರಿಂದ ನೀವೇ ಫೈನಲಿಸ್ಟ್ ಆಗಿ ಎಂದು ಧನುಷ್ ಕೂಡ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/09/bbk-12-2025-10-09-13-17-18.png)
ಕೊನೆಗೂ ಎಲ್ಲರ ಸಹಮತದ ಮೇರೆಗೆ ಅಶ್ವಿನಿ ಗೌಡ 2ನೇ ಫೈನಲಿಸ್ಟ್ ಆಗಿದ್ದಾರೆ. ಒಟ್ನಲ್ಲಿ ಬಿದ್ದು, ಒದ್ದಾಡಿ ಗೆದ್ದಿದ್ದೇ ಯಾರೋ. ಗೆಲುವಿನ ಪ್ರಯೋಜನ ಪಡೆದದ್ದೇ ಯಾರೋ ಆಗಿದೆ. ಮುಂದಿನ ದಿನಗಳಲ್ಲಿ ಗೆಲುವಿನ ಲಾಭದ ಪ್ರಯೋಜನ ಪಡೆದು ಕೊಳ್ಳುವುದು ಎಷ್ಟು ಮುಖ್ಯ ಎನ್ನುವುದು ಜಾಹ್ನವಿ & ಧನುಷ್​ಗೆ ಗೊತ್ತಾಗಲಿದೆ. ಆದರೆ ತಮ್ಮ ಒಂದು ತಪ್ಪಿನ ಹೆಜ್ಜೆ ಬಿಗ್​ ಬಾಸ್​ನಿಂದ ಹೊರ ಬರುವಂತೆಯೂ ಕೂಡ ಮಾಡುತ್ತೆ ಎನ್ನೋದು ಖಂಡಿತ ನಿಜ.