/newsfirstlive-kannada/media/media_files/2025/10/23/bbk12_raghu-2025-10-23-09-25-12.jpg)
ಈ ವಾರ ದೊಡ್ಮನೆ ಫಿಸಿಕಲ್​ ಟಾಸ್ಕ್​ನಿಂದ ರಂಗೇರಿದೆ. ಬಿಗ್​ಬಾಸ್​ ಕ್ಯಾಪ್ಟನ್​ಸಿ ಆಯ್ಕೆಗಾಗಿ ಟಾಸ್ಕ್​ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ಮ್ಯೂಟೆಂಟ್ ರಘು ಆಟ ವೈಖರಿಗೆ ಸಹ ಸ್ಪರ್ಧಿಗಳು ಬೆಚ್ಚಿಬಿದಿದ್ದಾರೆ.
ರಘು ಫಿಸಿಕಲ್ ಟಾಸ್ಕ್ ನೋಡಿ ಬೆಚ್ಚಿಬಿದ್ದ ಸಹ ಸ್ಪರ್ಧಿಗಳು ಸುಸ್ತೋ ಸುಸ್ತು..!
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ಮ್ಯೂಟೆಂಟ್ ರಘು ಇದೀಗ ತಮ್ಮ ಅಸಲಿ ಆಟ ಶುರುಮಾಡಿದ್ದಾರೆ. ಬಿಗ್​ಬಾಸ್​ ನೋಡಿರುವ ನಾಣ್ಯದ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಬಿಗ್​ ಬಾಸ್ ನೀಡಿದ್ದ ನಾಣ್ಯಗಳ ಸಂಗ್ರಹ ಟಾಸ್ಕ್‌ನಲ್ಲಿ ಎಲ್ಲರಿಂದಲೂ ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಇದ್ದರಿಂದ ರಘು ಆಟಕ್ಕೆ ಕೆಲವರು ಸಿಡಿಮಿಡಿಗೊಂಡಿದ್ದಾರೆ. ರಿಷಾ ಗೌಡ ಅಂತೂ ಆಕ್ರೋಶಗೊಂಡಿದ್ದಾರೆ.
ನಿನ್ನೆ ಬಿಗ್​ಬಾಸ್​ ಎಪಿಸೋಡಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ನಾಣ್ಯಗಳ ಸಂಗ್ರಹ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲ ಸದಸ್ಯರನ್ನು ಮೂರು ತಂಡಗಳಾಗಿ ಮಾಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಗುತ್ತದೆ. ಅದರಲ್ಲಿನ ಒಬ್ಬ ಮೇಲೆ ಬಿದ್ದು ನಾಣ್ಯ ಕಸಿದುಕೊಂಡು ವೀಕ್ಷಕರಿಗೆ ಎಂಟರ್​ಟೈಮೆಂಟ್​ ಕೊಟ್ಟಿದ್ದಾರೆ. ಈ ಟಾಸ್ಕ್​ನಲ್ಲಿ ಅತಿಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರು ವಿನ್ನರ್ ಎಂದು ಹೇಳಲಾಗುತ್ತದೆ.
/filters:format(webp)/newsfirstlive-kannada/media/media_files/2025/10/23/task-2025-10-23-09-05-42.jpg)
ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವ ಮ್ಯೂಟೆಂಟ್ ರಘು ಹಾಗೂ ಸೂರಜ್​ ಸಿಂಗ್​ ಇಬ್ಬರೂ ಬಾಡಿ ಬಿಲ್ಡರ್ ತರಹ ಇದ್ದಾರೆ. ಇನ್ನು ರಿಷಾ ಗೌಡ ಕೂಡ ಸ್ಪೋರ್ಟ್ಸ್ ಪರ್ಸನ್ ಆಗಿದ್ದಾರೆ. ಮನೆಯಲ್ಲಿ ಎಲ್ಲ ಫಿಸಿಕಲ್ ಟಾಸ್ಕ್‌ನಲ್ಲಿ ಮೂವರಲ್ಲಿ ಭಾರೀ ಪೈಪೋಟಿ ಕಾಣುತ್ತಿದೆ. ಅದರೆ ಹಳೆಯ ಸ್ಪರ್ಧಿಗಳಲ್ಲಿ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ. ರಘು ಫಿಸಿಕಲ್ ಟಾಸ್ಕ್ ನೋಡಿ ಸಹ ಸ್ಪರ್ಧಿಗಳೂ ಸುಸ್ತಾಗಿರೊದ್ರಲ್ಲಿ ಎರಡುಮಾತಿಲ್ಲ. ಆದರೂ ಗಿಲ್ಲಿ ಮಾತ್ರ ರಘುಗೆ ಚಮಕ್​ ಕೊಡ್ತಾನೆ ಆಟ ಆಡಿಸಿದ್ದಾರೆ. ಆದ್ರೆ ರಘು ಮುಂದಾಳತ್ವದಲ್ಲಿ ನಾಣ್ಯ ಕಸಿದುಕೊಳ್ಳುವಾಗ ಗಿಲ್ಲಿ ಪ್ಯಾಂಟು ಹರಿದು ಹೋಗಿರೋದು ಸಖತ್ ಕಾಮಿಡಿ ಅನಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us