/newsfirstlive-kannada/media/media_files/2025/10/24/raghu-risha-2025-10-24-16-30-29.jpg)
ರಘು -ರಿಷಾ Photograph: (ಕಲರ್ಸ್ ಕನ್ನಡ)
ಬಿಗ್‌ಬಾಸ್ ಮನೆಗೆ ಎಂಟ್ರಿಕೊಡುತ್ತಲೇ ರಘು ಹಾಗೂ ರಿಷಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಕ್ಯಾಪ್ಟನ್ಸಿಗಾಗಿ ಇದ್ದ ಗ್ರೂಪ್ ಟಾಸ್ಕ್‌ನಲ್ಲಿ ಅವರು ತಮ್ಮ ತಂಡವನ್ನು ನೋಡದೆ ಸ್ವಾರ್ಥದಿಂದ ಯೋಚನೆ ಮಾಡಿದರು ಎಂದು ಎಲ್ಲರೂ ದೂರುತಿದ್ದಾರೆ. ತಮ್ಮನ್ನು ಮಾತ್ರ ಗಮನಿಸಿಕೊಂಡ ಇವರಿಬ್ಬರೂ ಕ್ಯಾಪ್ಟನ್ಸಿ ಓಟದಲ್ಲಿದ್ದು, ಇವತ್ತು ಯಾರು ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಎಂದು ತೀರ್ಮಾನವಾಗಲಿದೆ.
ಇದಕ್ಕಾಗಿ ಬಿಗ್‌ಬಾಸ್ ಟಾಸ್ಕ್‌ವೊಂದನ್ನು ನೀಡಿದ್ದು,ಌಕ್ಟಿವಿಟಿ ರೂಂನಲ್ಲಿ ಕಗ್ಗತ್ತಲಿನಲ್ಲಿ ತಮ್ಮ ಹೆಸರಿನ ಅಕ್ಷರಗಳನ್ನು ಹುಡುಕಿ ಜೋಡಿಸಲು ತಿಳಿಸಿದ್ದಾರೆ. ಹಾಗೆಂದು ಇದು ಅಷ್ಟು ಈಝಿ ಟಾಸ್ಕ್ ಅಲ್ಲ. ಅಕ್ಷರಗಳನ್ನು ಹುಡುಕಲು ಕತ್ತಲು,ಅದರೊಂದಿಗೆ ಹಗ್ಗವನ್ನೂ ಕಟ್ಟಲಾಗಿದ್ದು ಎಲ್ಲವನ್ನೂ ಮೀರಿ ಅಕ್ಷರಗಳನ್ನು ಹುಡುಕಾಡಬೇಕು.
/filters:format(webp)/newsfirstlive-kannada/media/media_files/2025/10/24/raghu-1-2025-10-24-16-34-32.jpg)
ರಘು ಮೊದಲೇ 150 ಕೆಜಿ ಇರುವ ಅಜಾನುಬಾಹು ಹಗ್ಗಗಳ ನಡುವೆ ಹೋಗಿ ಅಕ್ಷರಗಳನ್ನು ಹುಡುಕುವುದು ಅವರಿಗೆ ಈಝಿಯಲ್ಲ, ಹಾಗಾದ್ರೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರಿಷಾ ಗೆಲ್ಲುತ್ತಾರಾ? ಅಥವಾ ರಘು ತಮ್ಮ ದೈಹಿಕ ಅಡೆತಡೆಗಳನ್ನೂ ಮೀರಿ ಕ್ಯಾಪ್ಟನ್ ಆಗಿ ತೋರಿಸುತ್ತಾರಾ ಅನ್ನೋದನ್ನು ಇವತ್ತಿನ ಎಪಿಸೋಡ್‌ನಲ್ಲೇ ನೋಡಬೇಕು.
ಇದನ್ನೂ ಓದಿ:18 ತಿಂಗಳಿನಲ್ಲಿ ಶೂನ್ಯದಿಂದ 12,750 ಕೋಟಿ ರೂಪಾಯಿಗೇರಿದ ಕಂಪನಿ! : ಷೇರು ಬೆಲೆ ಶೇ.63000 ಏರಿಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us