/newsfirstlive-kannada/media/media_files/2025/09/29/bigg_boss_all_sudeep-2025-09-29-15-35-35.jpg)
ಬಿಗ್ ಬಾಸ್ ನಿಂದ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ?
ಬಿಗ್‌ಬಾಸ್ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಇನ್ನೂ ಒಂದು ವಾರ ಆಗುವುದರೊಳಗೆ ಬಿರುಕುಗಳು, ಕಲಹಗಳು ಶುರುವಾಗಿದೆ. ಈಗಾಗಲೇ ಮನೆಯಿಂದ ಹೊರನಡೆಯೋರು ಯಾರು ಅನ್ನೋ ನಾಮಿನೇಷನ್ ಪ್ರಕ್ರಿಯೆಯೂ ನಡೆದಿದ್ದು, ಸುದೀಪ್ ಪಂಚಾಯ್ತಿ ಎಲ್ಲದಿಕ್ಕೂ ಉತ್ತರ ನೀಡಲಿದೆ.
ಬಿಗ್‌ಬಾಸ್ ಆರಂಭವಾಗಿ ಅದಾಗಲೇ ಒಂದು ವಾರವೂ ಆಗಿದೆ. ಎಲ್ಲರ ತಲೆಯ ಮೇಲೂ ನಾಮಿನೇಷನ್ ಅನ್ನೋ ತೂಗುಗತ್ತಿ ಸುತ್ತುತ್ತಿದ್ದು, ಮೊದಲ ವಾರವೇ ಮನೆಯಿಂದ ಹೊರನಡೆಯೋರು ಯಾರು ಅನ್ನೋ ಕುತೂಹಲ ಮೂಡಿದೆ. ಬಿಗ್‌ಬಾಸ್ ನೀಡಿದ್ದ ಟಾಸ್ಕ್‌ನ್ನು ಕಂಪ್ಲೀಟ್ ಮಾಡಿಯೂ ಭಾರಿ ಚರ್ಚೆಗೆ ಕಾರಣರಾಗಿದ್ದ ಧನುಷ್, ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ತಮ್ಮಷ್ಟಕ್ಕೆ ತಾವೇ ಇದ್ದ ಜಂಟಿ ಜೋಡಿ ಅಮಿತ್- ಕರಿಬಸಪ್ಪ, ಸುಖಾಸುಮ್ಮನೆ ಕಾಲೆಳೆದು ರೇಗಿಸುತ್ತಾರೆ ಅನ್ನೋ ಕಾರಣಕ್ಕೆ ಗಿಲ್ಲಿ- ಕಾವ್ಯ. ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ ಅನ್ನೋ ಕಾರಣಕ್ಕೆ ಅಶ್ವಿನಿ- ಅಭಿಷೇಕ್ ಜೋಡಿ ಬಿಗ್‌ಬಾಸ್ ಮನೆಯಿಂದ ಹೊರ ಹೋಗೋಕೆ ನಾಮಿನೇಟ್ ಆಗಿದ್ದಾರೆ.
ಇನ್ನು ಫೈನಲಿಸ್ಟ್ ಕಂಟೆಂಡರ್‌ಗಳಿಗೆ ನೀಡಿದ್ದ ಇನ್ನೊಂದು ಅವಕಾಶದಲ್ಲಿ ಮಾಳು ನಿಪನಾಳ ಸಹಾಯದಿಂದ ಫೈನಲಿಸ್ಟ್ ಅನಿಸಿಕೊಂಡ ಕಾಕ್ರೋಚ್ ಸುಧಿ, ಮಲ್ಲಮ್ಮರನ್ನು ನಾಮಿನೇಟ್ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಮೈಂಡ್ ಗೇಮ್ ಇಂಪಾರ್ಟೆಂಟ್, ಮಲ್ಲಮ್ಮರಿಂದ ಅದು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡಿರೋದಾಗಿ ಹೇಳಿದ್ದಾರೆ. ಈ ಮೂಲಕ ಧನುಷ್, ಕರಿಬಸಪ್ಪ- ಅಮಿತ್, ಕಾವ್ಯ- ಗಿಲ್ಲಿ, ಅಶ್ವಿನಿ- ಅಭಿಷೇಕ್, ಮಲ್ಲಮ್ಮ ಹೆಸರುಗಳನ್ನು ನಾಮಿನೇಟ್ ಮಾಡಲಾಗಿದೆ.
ಇವರಿಷ್ಟು ಜನರಲ್ಲಿ ಯಾರು ಬಿಗ್‌ಬಾಸ್ ಮನೆಯಿಂದ ಮೊದಲ ವಾರದಲ್ಲೇ ಹೋಗಲಿದ್ದಾರೆ ಅನ್ನೋದು ಸುದೀಪ್‌ರ ವಾರದ ಪಂಚಾಯ್ತಿಯಲ್ಲಿ ನಿರ್ಧಾರವಾಗಲಿದ್ದು, ವೀಕ್ಷಕರು ಯಾರನ್ನು ಉಳಿಸಿಕೊಳ್ತಾರೆ, ಯಾರನ್ನು ಹೊರಕ್ಕೆ ಹಾಕ್ತಾರೆ ಅನ್ನೋದನ್ನು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.