ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 12 ಶೋ ನಡೆಸುತ್ತಿದ್ದು, ಬಿಗ್‌ಬಾಸ್ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಜಾಲಿವುಡ್​ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ಜಾಲಿವುಡ್​ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. ಈ ಸಂಬಂಧ ಬಿಗ್​ಬಾಸ್ ಮಾಜಿ ಸ್ಪರ್ಧಿ ಸ್ನೇಹಿತ್ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಬಿಗ್​ಬಾಸ್ ನಿಲ್ಲಲ್ಲ. ನಡೆದೇ ನಡೆಯುತ್ತದೆ. ಇಲ್ಲಿ ಆಗದಿದ್ದರೆ ಬಾಂಬೆಯಲ್ಲಿ ನಡೆಯಬಹುದು ಎಂದಿದ್ದಾರೆ. ಸ್ನೇಹಿತ್ ಏನು ಹೇಳಿದರು ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ:15 ದಿನ ಕಾಲಾವಕಾಶ ಕೇಳಿದ ಜಾಲಿವುಡ್..​! ಜಿಲ್ಲಾಧಿಕಾರಿ ನಿರ್ಧಾರ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ