/newsfirstlive-kannada/media/media_files/2025/10/09/bigg-boss-ashwini-gowda-2025-10-09-13-15-21.png)
Photograph: (Colors Kannada)
ಬಿಗ್‌ಬಾಸ್ ಮನೆಗೆ ಬಂದ ಮೇಲೆ ಒಂಟಿ ಮತ್ತು ಜಂಟಿ ತಂಡಗಳಿಗೆ ಸರಣಿ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಆದರೆ ಪ್ರತಿ ಟಾಸ್ಕ್‌ನಲ್ಲೂ ಒಂಟಿ ತಂಡವೇ ವಿನ್ನರ್ಸ್ ಅನಿಸಿಕೊಳ್ಳುತ್ತಿದೆ. ಈ ಬಾರಿಯಂತೂ ಜಂಟಿ ತಂಡಕ್ಕೆ ಗೆಲುವು ನಿಶ್ಚಿತವೇ ಎಂದನಿಸಿದ್ದರೂ ಈ ಬಾರಿಯೂ ಸೋಲುಂಡಿದೆ.
ಕಳೆದ ವಾರದ ಮೂರು ಟಾಸ್ಕ್‌ಗಳಲ್ಲಿಯೂ ಜಂಟಿ ತಂಡ ಸೋಲುಂಡಿತ್ತು. ಒಂದರಲ್ಲಿ ಸ್ವತಃ ಜಂಟಿ ತಂಡದವರೇ ತಮ್ಮ ತಂಡವನ್ನು ಸೋಲಿಸೋಕೆ ಮುಂದಾಗಿದ್ರು. ಈ ವಾರ ಮತ್ತೆ ಸರಣಿ ಟಾಸ್ಕ್‌ಗಳು ಆರಂಭವಾಗಿದ್ದು, ಒಂಟಿ ತಂಡವೇ ಮೇಲುಗೈ ಸಾಧಿಸಿದೆ.
ಕೈಯಲ್ಲಿ ಕಪ್ಪು ಮಸಿ ಹಿಡಿದು ಎದುರಲ್ಲಿ ನೇತಾಡಿಸಿರುವ ಫೋಟೋಗಳಿಗೆ ಮಸಿ ಬಳಿಯಬೇಕು. ಅಲ್ಲಿರುವ ಫೋಟೊಗಳಿಗೆ ಶೇ. ೫೦ರಷ್ಟಾದರೂ ಮಸಿ ಬಳಿದರೆ ಅವರು ವಿನ್ನರ್ ಅನಿಸಿಕೊಳ್ಳುತ್ತಾರೆ. ಇದನ್ನಾಡೋಕೆ ಆಕ್ರಮಣಕಾರರು ಮತ್ತು ರಕ್ಷಕರು ಎಂದು ಎರಡು ತಂಡಗಳನ್ನು ಮಾಡಬೇಕು. ಇದರಲ್ಲಿ ಯಾರು ರಕ್ಷಕರು, ಯಾರು ಆಕ್ರಮಣಕಾರರು ಎಂದು ನಿರ್ಧರಿಸುವ ಅಧಿಕಾರವನ್ನು ತಂಡಗಳಿಗೇ ನೀಡಲಾಗಿತ್ತು. ಪ್ರತಿ ತಂಡದಿಂದಲೂ ಮೂರು ಮೂರು ಜನ ಸ್ಪರ್ಧೆಗೆ ಇಳಿಯಬೇಕೆಂಬುದು ನಿಯಮವಾಗಿತ್ತು.
ಜಂಟಿ ತಂಡ ಈ ಬಗ್ಗೆ ಚರ್ಚೆ ನಡೆಸಿ ಆಕ್ರಮಣ ಮಾಡೋದೆ ಸುಲಭ, ರಕ್ಷಕರಾಗೋದು ಕಷ್ಟ ಎನ್ನುವ ನಿರ್ಧಾರವನ್ನು ಮಾಡಿತ್ತು. ಹೀಗಾಗಿ ಆಕ್ರಮಣಕಾರರಾಗಿ ಕಣಕ್ಕಿಳಿಯಲು ಅಭಿಷೇಕ್, ಮಾಳು ನಿಪನಾಳ ಹಾಗೂ ಕಾವ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ರಕ್ಷಕ ತಂಡದಿಂದ ಧನುಷ್, ಧ್ರುವ ಹಾಗೂ ಜಾಹ್ನವಿ ರಕ್ಷಕರಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ರು.
ಆಟವೇನೋ ಆರಂಭವಾಗಿತ್ತು. ಜಂಟಿ ತಂಡದ ಸ್ಟ್ರಾಟಜಿ ಇಲ್ಲಿ ಕೈಕೊಟ್ಟಿತ್ತು. ಆಕ್ರಮಣ ಈಝಿ ಅಂದುಕೊಂಡಿದ್ದ ತಂಡದವರಿಗೆ ಒಂಟಿಗಳು ಒಳ್ಳೆ ಟಕ್ಕರ್ ನೀಡಿದ್ರು. ಮೊದಲಿಗೆ ಕಣಕ್ಕಿಳಿದ ಅಭಿಷೇಕ್‌ನ್ನು ಧನುಷ್ ಫೋಟೋ ಹತ್ತಿರ ಹೋಗೋದಿಕ್ಕೂ ಬಿಡದೆ ತಡೆದಿದ್ದರು. ಅಭಿಷೇಕ್ ಏನೇ ಪ್ರಯತ್ನ ಮಾಡಿದ್ರೂ ಧನು ಕೈಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಾಗಲೇ ಇಲ್ಲ.
/filters:format(webp)/newsfirstlive-kannada/media/media_files/2025/10/09/bbk-dhanush-abhi-2025-10-09-13-33-59.png)
ನಂತರ ಕಣಕ್ಕೆ ಬಂದ ಕಾವ್ಯ ಆರಂಭದಲ್ಲಿ ಜಾಹ್ನವಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸಿದರಾದರೂ ಒಂದು ಬಾರಿ ಜಾಹ್ನವಿಯ ಕೈಗೆ ಸಿಕ್ಕ ಕಾವ್ಯ ಅದೆಷ್ಟೆ ಪ್ರಯತ್ನ ಪಟ್ಟರೂ ತಪ್ಪಿಸಿಕೊಳ್ಳೊಕೆ ಸಾಧ್ಯವಾಗಲೇ ಇಲ್ಲ.
/filters:format(webp)/newsfirstlive-kannada/media/media_files/2025/10/09/bigg-boss-ashwini-gowda-2025-10-09-13-15-21.png)
ಹೀಗೆ ಒಂಟಿ ತಂಡ ಈ ಟಾಸ್ಕ್‌ನಲ್ಲೂ ವಿನ್ನರ್ ಅನಿಸಿಕೊಂಡರು. ಜಂಟಿ ತಂಡ ತಮ್ಮ ಸೋಲಿನ ಓಟವನ್ನು ಮುಂದುವರಿಸಿ ಬಿಗ್‌ಬಾಸ್‌ನಿಂದ ಎಚ್ಚರಿಕೆಯನ್ನೂ ಪಡೆದುಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.