newsfirstkannada.com

ಶಾಸಕ ಗೋಪಾಲಯ್ಯಗೆ ಜೀವ ಬೆದರಿಕೆ; ಮಾಜಿ ಕಾರ್ಪೊರೇಟರ್ ಅರೆಸ್ಟ್; ಆಮೇಲೇನಾಯ್ತು..?

Share :

Published February 14, 2024 at 7:03pm

    ಮಾಜಿ ಸಚಿವ ಕೆ. ಗೋಪಾಲಯ್ಯಗೆ ಜೀವ ಬೆದರಿಕೆ

    ಅಧಿವೇಶನದಲ್ಲೂ ಕೊಲೆ ಬೆದರಿಕೆ ವಿಷಯ ಪ್ರಸ್ತಾಪ

    ಮಾಜಿ ಕಾರ್ಪೊರೇಟರ್ ಪದ್ಮರಾಜ್​ ಬಂಧನ..!

ಬೆಂಗಳೂರು: ಬಸವೇಶ್ವರನಗರ ಮಾಜಿ ಕಾರ್ಪೊರೇಟರ್ ಪದ್ಮರಾಜ್, ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಮಾಜಿ ಸಚಿವ ಗೋಪಾಲಯ್ಯರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಣ ಕೊಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ಧಗಳಿಂದ ಪದ್ಮರಾಜ್​ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕಳೆದ ರಾತ್ರಿಯೇ ಗೋಪಾಲಯ್ಯ ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ಪದ್ಮರಾಜ್​ ವಿರುದ್ಧ ದೂರು ನೀಡಿದ್ದಾರೆ. ವಿಧಾನಸಭೆ ಕಲಾಪ ಆರಂಭದ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಪದ್ಮರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಗಡಿಪಾರು ಮಾಡಬೇಕು, ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸದನದಲ್ಲಿ ಒತ್ತಾಯಿಸಿದ್ರು.

ಇನ್ನು, ಸ್ಪೀಕರ್​ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದಂತೆ ಗೃಹಸಚಿವ ಪರಮೇಶ್ವರ್​, ಪದ್ಮರಾಜ್​ರನ್ನು ಬಂಧನ ಮಾಡಿರುವ ಮಾಹಿತಿ ಸಿಕ್ಕಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ರು. ಪದ್ಮರಾಜ್​ನನ್ನು ಅರೆಸ್ಟ್​ ಮಾಡಿದ ಪೊಲೀಸರು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಮಾಡಿಸಿ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ಕರೆತಂದ್ರು ವಿಚಾರಣೆ ನಡೆಸಿದ್ರು.

ಕೋರ್ಟ್​ನಿಂದ ಪದ್ಮರಾಜ್​ಗೆ ಜಾಮೀನು

ಬಳಿಕ 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಪದ್ಮರಾಜ್ ನನ್ನ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಮಾಜಿ ಕಾರ್ಪೋರೇಟರ್ ಪದ್ಮರಾಜ್‌ಗೆ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಮಾತನಾಡಿದ ಪದ್ಮರಾಜ್ ಆರ್.ಅಶೋಕ್ 1 ಕೋಟಿ ರೂಪಾಯಿ ಪಡೆದಿದ್ದಾರೆಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕ ಗೋಪಾಲಯ್ಯಗೆ ಜೀವ ಬೆದರಿಕೆ; ಮಾಜಿ ಕಾರ್ಪೊರೇಟರ್ ಅರೆಸ್ಟ್; ಆಮೇಲೇನಾಯ್ತು..?

https://newsfirstlive.com/wp-content/uploads/2024/02/Gopalaiah_PadmaRaj.jpg

Load More